SK Home Ad
Home ಸುದ್ದಿ ರಾಜ್ಯ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಗ್ರೂಪ್ ಟಿಕೆಟ್ ಬುಕಿಂಗ್ ರೂಲ್ಸ್‌ ಬದಲು

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಗ್ರೂಪ್ ಟಿಕೆಟ್ ಬುಕಿಂಗ್ ರೂಲ್ಸ್‌ ಬದಲು

0
43

ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಗುಂಪು ಟಿಕೆಟ್ ಬುಕಿಂಗ್ ನಿಯಮಗಳನ್ನು ಸರಳಗೊಳಿಸಿ ಹೊಸ ಮಾರ್ಗಸೂಚಿ ಹೊರಡಿಸಿದೆ. ಈ ಹಿಂದಿನ ಎಲ್ಲಾ ಹಳೆಯ ನಿಯಮಗಳನ್ನು ರದ್ದು ಮಾಡಲಾಗಿದೆ.

ಹೊಸ ನಿಯಮದ ಪ್ರಕಾರ, ಮುಂಗಡ ಕಾಯ್ದಿರಿಸುವಿಕೆ ಶುರುವಾದ ಒಂದು ಗಂಟೆಯ ನಂತರ, ಅಂದರೆ ಬೆಳಿಗ್ಗೆ 9 ಗಂಟೆಯಿಂದ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಗುಂಪು ಬುಕಿಂಗ್‌ಗೆ ಅವಕಾಶ ಇರುತ್ತದೆ ನೈಋತ್ಯ ರೈಲ್ವೆ ಹೇಳಿದೆ.

ಮದುವೆ, ಯಾತ್ರೆ, ವಿದ್ಯಾರ್ಥಿಗಳು, ಕ್ರೀಡಾ ಮತ್ತು ಸಾಂಸ್ಕೃತಿಕ ತಂಡಗಳಂತಹ ನಿಜವಾದ ಉದ್ದೇಶಕ್ಕೆ ಪ್ರಯಾಣಿಸುವವರಿಗೆ ಈ ಸೌಲಭ್ಯ ಸಿಗಲಿದೆ. ಕನ್‌ಫರ್ಮ್, ಆರ್‌ಎಸಿ ಮತ್ತು ವೇಟಿಂಗ್ ಲಿಸ್ಟ್ ಎಲ್ಲಾ ವರ್ಗಗಳಿಗೂ ಇದು ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.

ಮುಖ್ಯವಾಗಿ, ಇನ್ನು ಮುಂದೆ ಎಷ್ಟು ಸೀಟ್ ಬುಕ್ ಮಾಡಬಹುದು ಎಂಬುದಕ್ಕೆ ಯಾವುದೇ ಮಿತಿ ಇರುವುದಿಲ್ಲ. ಸ್ಟೇಷನ್ ಮ್ಯಾನೇಜರ್ ಅಥವಾ ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು ಅನುಮತಿ ನೀಡಲಿದ್ದಾರೆ ಎಂದು ತಿಳಿಸಲಾಗಿದೆ.

ಏಜೆಂಟ್‌ಗಳ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ. ಪ್ರಯಾಣಿಕರು ನೇರವಾಗಿ ಅರ್ಜಿ ನೀಡಬೇಕು. ಅರ್ಜಿಯಲ್ಲಿ ಎಲ್ಲಾ ಪ್ರಯಾಣಿಕರ ಹೆಸರು, ವಯಸ್ಸು, ವಿಳಾಸ ಮತ್ತು ಪ್ರಯಾಣದ ಉದ್ದೇಶವನ್ನು ಕಡ್ಡಾಯವಾಗಿ ನೀಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.