SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಭದ್ರಾ ನೀರು ಹಂಚಿಕೆ ವಿವಾದ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಡಿ.ಜಿ. ಶಾಂತನಗೌಡ ಘೋಷಣೆ

ಭದ್ರಾ ನೀರು ಹಂಚಿಕೆ ವಿವಾದ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಡಿ.ಜಿ. ಶಾಂತನಗೌಡ ಘೋಷಣೆ

0
60
ಭದ್ರಾ ನೀರು ಹಂಚಿಕೆ ವಿವಾದ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಡಿ.ಜಿ. ಶಾಂತನಗೌಡ ಘೋಷಣೆ

ಭದ್ರಾ ನೀರು ಬಿಡುಗಡೆ ಆದೇಶ ಹಿಂಪಡೆಯದಿದ್ದರೆ ರಾಜೀನಾಮೆ, ಅಣೆಕಟ್ಟು ಎದುರು ಅಹೋರಾತ್ರಿ ಧರಣಿ: ಶಾಂತನಗೌಡ

ದಾವಣಗೆರೆ : ರೈತರ ಹಿತದೃಷ್ಟಿಯಿಂದ ಐ.ಸಿ.ಸಿ ಸಭೆ ಕರೆಯದೆ ಸರಕಾರ ಏಕಪಕ್ಷೀಯವಾಗಿ ನಿನ್ನೆ(ನ.16) ಮಧ್ಯ ರಾತ್ರಿ 1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ನಾಲೆಯಲ್ಲಿ ಹರಿಸಲು ಆದೇಶ ಮಾಡಿರುವುದನ್ನು ಖಂಡಿಸಿ ಹೊನ್ನಾಳಿ ಶಾಸಕ ಶಾಂತನಗೌಡ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ಹರಿಸಬೇಕಾದರೆ. ಪ್ರತಿದಿನ 1000 ಕ್ಯೂಸೆಕ್ಸ್ ನೀರನ್ನು ನಾಲೆಯಲ್ಲಿ ಹರಿಸಬೇಕಾಗುತ್ತದೆ. ಇದು ಅವೈಜ್ಞಾನಿಕ ಸಮಸ್ಯೆಯ ತೀರ್ಮಾನವಾಗಿರುತ್ತದೆ. 1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ಪ್ರತಿ ದಿವಸ 1000 ಕ್ಯೂಸೆಕ್ಸ್ ನಂತೆ ನೀರನ್ನು ಹರಿಸುವುದರಿಂದ ಆಣೆಕಟ್ಟೆಯಿಂದ 15 ಕಿಲೋ ಮೀಟರ್ ಒಳಗಿನ ರೈತ ಬಾಂಧವರಿಗೆ ಮಾತ್ರ ನೀರು ತಲುಪುತ್ತದೆ. ಇದು ಅಚ್ಚುಕಟ್ಟಿನ ಒಟ್ಟು ಪ್ರದೇಶದ 5% ರೈತರ ಜಮೀನುಗಳಿಗೆ ನೀರು ಸಿಗುವುದಿಲ್ಲ. ಆದ್ದರಿಂದ ಈ ಕ್ಷಣ ಅಣೆಕಟ್ಟಿನಿಂದ ನೀರನ್ನು ನಿಲ್ಲಿಸಿ ಕೂಡಲೇ ಐ.ಸಿ.ಸಿ ಸಭೆ ಕರೆದು ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.

ರೈತರ ಹಿತದೃಷ್ಟಿಯಿಂದ ರಾಜೀನಾಮೆ ಕೊಟ್ಟು ಅಣೆಕಟ್ಟು ಮುಂಭಾಗ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದೇವೆ. ಈಗಾಗಲೇ ನಾನು ನಮ್ಮ ರೈತರು ಹಾಗೂ ನನ್ನ ಭಾಗದ ರೈತರ ಹಿತದೃಷ್ಟಿಯಿಂದ ರಾಜೀನಾಮೆಯನ್ನು ನೀಡಲು ನಿರ್ಧರಿಸಿದ್ದು, ಈ ಸಂಜೆ ನಮ್ಮ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರ ನೀಡಿ ನನ್ನ ಅಳಲನ್ನು ತೋಡಿಕೊಳ್ಳುತ್ತೇನೆ ಎಂದು ಹೇಳಿದರು.