SK Home Ad
Home ಸಿನಿ ಮಿಲ್ಸ್ BBK13: ‘ಯುವರಾಣಿ’ ಆಸಿಯಾ ಫಿರ್ದೋಸ್: ಕೆಂಪು ಬಾವುಟ ಕಂಡು ಸೌಂದರ್ಯ ಶೆಟ್ಟಿ ಕೆಂಡಾಮಂಡಲ!

BBK13: ‘ಯುವರಾಣಿ’ ಆಸಿಯಾ ಫಿರ್ದೋಸ್: ಕೆಂಪು ಬಾವುಟ ಕಂಡು ಸೌಂದರ್ಯ ಶೆಟ್ಟಿ ಕೆಂಡಾಮಂಡಲ!

0
36

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟ 71 ದಿನಗಳನ್ನು ಪೂರೈಸಿದ್ದು, ಸೋನಿಕಾ ಗೌಡ ಎಲಿಮಿನೇಷನ್ ಬಳಿಕ ಮನೆಯಲ್ಲಿ ಕೇವಲ ಮೂವರು ಮಹಿಳಾ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ನಡುವೆ, ಕಳೆದ ವಾರದ ಟಾಸ್ಕ್ ಎಡವಟ್ಟುಗಳಿಂದಾಗಿ ಜಗದೀಶ್ ಅವರ ಕ್ಯಾಪ್ಟನ್‌ಶಿಪ್ ರದ್ದುಗೊಳಿಸಿದ್ದ ಕಿಚ್ಚ ಸುದೀಪ್ ಮನೆಗೆ ಶಾಕ್ ನೀಡಿದ್ದರು. ಇದೀಗ ಮನೆಯ ಆಡಳಿತ ನಡೆಸಲು ಬಿಗ್ ಬಾಸ್ ‘ಯುವರಾಣಿ’ ಎಂಬ ಹೊಸ ಕಾನ್ಸೆಪ್ಟ್ ಪರಿಚಯಿಸಿದ್ದು, ಈ ಪ್ರತಿಷ್ಠಿತ ಪಟ್ಟವನ್ನು ಆಸಿಯಾ ಫಿರ್ದೋಸ್ ಅಲಂಕರಿಸಿದ್ದಾರೆ.

ಮನೆಯಲ್ಲಿದ್ದ ಮೂವರು ಮಹಿಳಾ ಸ್ಪರ್ಧಿಗಳಾದ ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ ಹಾಗೂ ಗಾನವಿ ಗೌಡ ಅವರನ್ನು ‘ಯುವರಾಣಿ’ ರೇಸ್‌ಗೆ ಇಳಿಸಲಾಗಿತ್ತು. ಆಕ್ಟಿವಿಟಿ ರೂಮ್‌ನಲ್ಲಿ ಈ ಮೂವರನ್ನು ಕೂರಿಸಿ, ಹೊರಗಡೆ ಇವರ ಫೋಟೋಗಳ ಮುಂದೆ ಯುವರಾಣಿ ಆಗಲು ಅರ್ಹರಲ್ಲದವರಿಗೆ ಕೆಂಪು ಬಾವುಟ ಹಾಗೂ ಅರ್ಹರಿಗೆ ಹಸಿರು ಬಾವುಟ ಇಡುವಂತೆ ಉಳಿದ ಸ್ಪರ್ಧಿಗಳಿಗೆ ಸೂಚಿಸಲಾಗಿತ್ತು.

ತಾವೇ ಯುವರಾಣಿ ಆಗುತ್ತೇನೆಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಸೌಂದರ್ಯ ಶೆಟ್ಟಿ, ಹೊರಬಂದು ತಮ್ಮ ಫೋಟೋ ಮುಂದೆ ಬರೀ ಕೆಂಪು ಬಾವುಟಗಳೇ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಗಾನವಿ ಮುಂದೆ ಕೇವಲ ಒಂದು ಹಸಿರು ಬಾವುಟವಿದ್ದರೆ, ಆಸಿಯಾ ಫಿರ್ದೋಸ್ ಫೋಟೋ ಮುಂದೆ ಬಹುತೇಕ ಹಸಿರು ಬಾವುಟಗಳೇ ರಾರಾಜಿಸಿ ಅವರನ್ನು ಮನೆಯ ಯುವರಾಣಿಯನ್ನಾಗಿಸಿದೆ. ಈ ಅನಿರೀಕ್ಷಿತ ಫಲಿತಾಂಶದಿಂದ ಕೆಂಡಾಮಂಡಲವಾಗಿರುವ ಸೌಂದರ್ಯ, “ಮುಂದೆ ಚೆನ್ನಾಗಿ ಮಾತನಾಡುವವರ ಅಸಲಿ ಬಣ್ಣ ಬಯಲಾಯಿತು” ಎಂದು ಸಹಸ್ಪರ್ಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.