ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ‘ಬಲಿತ ದಲಿತ’ ಎಂದು ಸಂಬೋಧಿಸಿ, ಅವರಿಗೂ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿರುವ ಯುವ ಕಾಂಗ್ರೆಸ್, ಬೆಂಗಳೂರಿನ ವಿವಿಧೆಡೆ ಪ್ರತ್ಯುತ್ತರ ಬ್ಯಾನರ್‌ಗಳನ್ನು ಅಳವಡಿಸಿದೆ.
ಬ್ಯಾನರ್‌ಗಳಲ್ಲಿ, ‘ಹೌದು, ನಾವು ಬಲಿತ ದಲಿತನೇ ಸುಮಾರಣ್ಣ. ನಾನು ಬೆಳೆದಿದ್ದು ನಮ್ಮ ಸಂವಿಧಾನ ಮತ್ತು ಕಾಂಗ್ರೆಸ್‌ನಿಂದಲೇ; ನಿಮ್ಮ ಮನೆಯ ಆಲೂಗಡ್ಡೆಯಿಂದಲ್ಲ’ ಎಂದು ಬರೆಯಲಾಗಿದೆ.
ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅಳವಡಿಸಿರುವ ಈ ಬ್ಯಾನರ್‌ಗಳು ರಾಜಕೀಯ ವಲಯದಲ್ಲಿ ಗಮನ ಸೆಳೆದಿವೆ. ಮೀಸಲಾತಿ ವಿಚಾರವಾಗಿ ಆರಂಭವಾದ ವಾಕ್ಸಮರ ಇದೀಗ ಬ್ಯಾನರ್ ಸಮರದ ರೂಪ ಪಡೆದುಕೊಂಡಿದೆ.



















