ಬೆಂಗಳೂರು: ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಆಕ್ಷನ್ ಎಂಟರ್ಟೈನರ್ ‘ಕಿಂಗ್’ ಸಿನಿಮಾದ ಪವರ್ಫುಲ್ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯ ಕಾವನ್ನು ಹೆಚ್ಚಿಸಿದೆ. ಶಾರುಖ್ ಖಾನ್ ಅವರು ತಮ್ಮ ಹೊಸ ಪೋಸ್ಟರ್ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ದೃಶ್ಯ ವೈಭವದ ಸುಳಿವು ನೀಡಿದ್ದಾರೆ.
ಈ ಹೊಸ ಪೋಸ್ಟರ್ನಲ್ಲಿ ಶಾರುಖ್ ಖಾನ್ ಅವರ ರಗಡ್ ಹಾಗೂ ವಿಭಿನ್ನ ಅವತಾರ ಅನಾವರಣಗೊಂಡಿದೆ. ತುಟಿಗಳ ನಡುವೆ ಗುಲಾಬಿ ಹೂವು ಹಾಗೂ ಕಣ್ಣುಗಳಲ್ಲಿ ರೋಷದ ಬೆಂಕಿ ಹೊತ್ತಿಸಿಕೊಂಡಿರುವ ಅವರ ಲುಕ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. “ಖಾತಿಲ್ ನಹಿ.. ಆಶಿಕ್ ಹೂಂ…” ಎಂಬ ಸಾಲು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ದ್ವಿಗುಣಗೊಳಿಸಿದೆ. ಬೆಳ್ಳಿತೆರೆಯ ಮೇಲೆ ಸೂಪರ್ಸ್ಟಾರ್ ಶಾರುಖ್ ಅವರನ್ನು ಈ ರೋಚಕ ಅವತಾರದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪಠಾನ್ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಹಾಗೂ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿವೆ. ‘ಕಿಂಗ್’ ಸಿನಿಮಾವು 2026ರ ಡಿಸೆಂಬರ್ 24 ರಂದು ಕ್ರಿಸ್ಮಸ್ ಹಬ್ಬದ ಅಂಗವಾಗಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.






















