ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಾಳಿಪಟಕ್ಕೆ ಹಾರಿಸುವ ಮಾಂಜಾ ದಾರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟ ಧಾರುಣ ಘಟನೆ ಇಲ್ಲಿನ ಕಾರವಾರ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ನಗರದ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಹಳೇಹುಬ್ಬಳ್ಳಿ ಬೀರಬಂದ್ ಓಣಿಯ ನಿವಾಸಿ ವಿದ್ಯಾ ಮಂಜುನಾಥ ಗೌಡರ(38) ಮೃತಪಟ್ಟವರು. ಕಾರವಾರ ರಸ್ತೆಯಲ್ಲಿ ಲ್ಯಾಬ್ಗೆ ಕೆಲಸಕ್ಕೆಂದು ಸ್ಕೂಟಿಯಲ್ಲಿ ಹೊರಟ್ಟಿದ್ದ ವೇಳೆ ಕಾರವಾರ ರಸ್ತೆಯಲ್ಲಿ ಯಮಸ್ವರೂಪಿಯಾಗಿ ಬಂದ ಗಾಳಿಪಟದ ಮಾಂಜಾದಾರ ಕುತ್ತಿಗೆಗೆ ಸಿಲುಕಿ ಕೊಯ್ದಿದಿದೆ. ಇದರಿಂದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಮೃತಪಟ್ಟಿದ್ದಾರೆ.
ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಫ್ರಾನ್ಸ್ನಲ್ಲಿ ಮೊದಲ ಮಾನವ ಶಾಮೊಂಡಾ ವೈರಸ್ ಪ್ರಕರಣ ಪತ್ತೆ: ಸಾರ್ವಜನಿಕರಿಗೆ ಸದ್ಯಕ್ಕೆ ಅಪಾಯವಿಲ್ಲ ಎಂದ ಅಧಿಕಾರಿಗಳು
- ಸೌದಿಯಲ್ಲಿ ಸಿಲುಕಿದ 4,000 ಭಾರತೀಯ ಯಾತ್ರಿಕರು: ವಿಶೇಷ ವಿಮಾನಕ್ಕೆ ಓವೈಸಿ ಆಗ್ರಹ
- ಹುಬ್ಬಳ್ಳಿಯಲ್ಲಿ ಗಾಳಿಪಟದ ಮಾಂಜಾ ದಾರಕ್ಕೆ ಮಹಿಳೆ ಬಲಿ
- ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: ಬಸ್–ಲಾರಿ ಮುಖಾಮುಖಿ ಡಿಕ್ಕಿಗೆ ಬಾಲಕ ಸೇರಿ ಇಬ್ಬರು ಸಾವು
- ಯತ್ನಾಳ್, ಈಶ್ವರಪ್ಪ ಸೇರ್ಪಡೆ ವಿಚಾರ ವರಿಷ್ಠರ ಅಂಗಳದಲ್ಲಿ: ಬಿ.ಪಿ. ಹರೀಶ್






















