SK Home Ad
Home ಸುದ್ದಿ ರಾಜ್ಯ ಕಬ್ಬು ರೈತರಿಗಾಗಿ ಪ್ರಧಾನಿ ಭೇಟಿಗೆ ಸಿದ್ಧತೆ; ಸರ್ವಪಕ್ಷ ನಿಯೋಗಕ್ಕೆ ಡಿಕೆಶಿ ಕರೆ

ಕಬ್ಬು ರೈತರಿಗಾಗಿ ಪ್ರಧಾನಿ ಭೇಟಿಗೆ ಸಿದ್ಧತೆ; ಸರ್ವಪಕ್ಷ ನಿಯೋಗಕ್ಕೆ ಡಿಕೆಶಿ ಕರೆ

0
58

ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಅವರ ಭೇಟಿಗೆ ಸಮಯ ಕೇಳಿದ್ದೇನೆ. ವಿರೋಧ ಪಕ್ಷದವರು ಸೇರಿದಂತೆ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಅವರ ಭೇಟಿಗೆ ಬರಬೇಕು ಎಂದು ಮನವಿ ಮಾಡುವೆ. ವಿರೋಧ ಪಕ್ಷದ ನಾಯಕರು ಈ ಹಿಂದೆ ಬರುವುದಾಗಿ ಹೇಳಿದ್ದರು, ಈಗಲೂ ಬರುತ್ತಾರೆ ಎಂದು ಭಾವಿಸಿದ್ದೇನೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾನು ರೈತರೊಂದಿಗೆ ಮಾತನಾಡಿದ್ದು, ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮತ್ತೊಮ್ಮೆ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ. ಇಲ್ಲಿ ಎಲ್ಲರೂ ಕೂತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ವಿಚಾರದಲ್ಲಿ ರಾಜಕಾರಣ ಮಾಡಲು, ಯಾರ ವಿರುದ್ಧ ಮಾತನಾಡುವುದರಲ್ಲಿ ಅರ್ಥವಿಲ್ಲ. ಬೇರೆಯವರು ಆ ರೀತಿ ಮಾಡಬಹುದು. ‌ನಾನು ಮಾಡುವುದಿಲ್ಲ. ರಾಜ್ಯದ ಮುಖ್ಯಮಂತ್ರಿ ಜವಾಬ್ದಾರಿ ವಹಿಸಿಕೊಂಡಿರುವ ನಾನು ಕೇವಲ ದೋಷಣೆ ಮಾಡಬಾರದು. ಅದನ್ನು ನಾನು ಬೇರೆಯವರಿಗೆ ಬಿಟ್ಟಿದ್ದೇನೆ. ರೈತರು ಹಾಗೂ ಜನರಿಗೆ ಒಳ್ಳೆಯದಾಗಬೇಕು ಎಂಬುದು ನಮ್ಮ ಉದ್ದೇಶ. ರೈತರ ಬದುಕು ನಮಗೆ ಮುಖ್ಯ” ಎಂದು ತಿಳಿಸಿದರು.

ಕಬ್ಬಿನ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಕೂಡ ಹಣ ನೀಡಬೇಕು ಎಂಬ ಹೇಳಿಕೆ ಬಗ್ಗೆ ಕೇಳಿದಾಗ ಸಿಎಂ ಅವರು, “ಈ ಬಗ್ಗೆ ಚರ್ಚೆ ಮಾಡೋಣ. ರಾಜ್ಯದಲ್ಲಿ ಎಲ್ಲಾ ರೀತಿಯ ರೈತರು ಇದ್ದಾರೆ. ಎಲ್ಲರ ಬಗ್ಗೆ ನಾವು ಆಲೋಚಿಸಬೇಕು” ಎಂದರು.

ಕಲಬುರ್ಗಿಯಲ್ಲಿ ಶಂಕಿತ ಉಗ್ರ ಸಿಕ್ಕಿ ಬಿದ್ದಿರುವ ಬಗ್ಗೆ ಪ್ರಶ್ನಿಸಿದಾಗ, “ಈ ಬಗ್ಗೆ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವತಂತ್ರ ನೀಡುತ್ತೇನೆ. ಇಂತಹ ವಿಚಾರದಲ್ಲಿ ನಾವು ರಾಜಕೀಯ ಹೇಳಿಕೆ ನೀಡಬಾರದು” ಎಂದರು.

2028ಕ್ಕೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುತ್ತದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೇಳಿಕೆ ನೀಡಿದ್ದಾರೆ ಎಂದು ಕೇಳಿದಾಗ, “ದೇವರು ಅವರಿಗೆ ಒಳ್ಳೆಯದು ಮಾಡಲಿ. ಮೆಜಾರಿಟಿ ಬರಲಿಲ್ಲ ಅಂದರೆ ಪಕ್ಷ ವಿಸರ್ಜನೆ ಮಾಡುತ್ತೇನೆ‌ ಎಂದು ಹೇಳಿದ್ದರಲ್ಲ? ಅದನ್ನು ಮಾಡಿ ತೋರಿಸಲಿಲ್ಲ. ಬಿಜೆಪಿ ಬಗ್ಗೆ, ಆರ್ ಎಸ್ ಎಸ್ ಬಗ್ಗೆ ಏನು ಹೇಳಿದರು. ಎಲ್ಲಾ‌ ಫ್ಲಾಶ್ ಬ್ಯಾಕ್‌ನಲ್ಲಿದೆ ನೋಡಿ ಎಂದರು.

ಮೈಸೂರು ಜನತೆಗೆ ಕೃತಜ್ಞತೆಗಳು: ಕರ್ನಾಟಕ ಜನತೆ ವಿಶೇಷವಾಗಿ ಮೈಸೂರು ಜನತೆ ದಸರಾಗೆ ಸಹಕಾರ ಕೊಡುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ಜನತೆ ಮೈಸೂರಿಗೆ ಬಂದರೆ ರಾತ್ರಿ ತನಕ ಇದ್ದು, ಲೈಟಿಂಗ್ ನೋಡಿಕೊಂಡು ಹೋಗಿ ಎಂದು ಮನವಿ ಮಾಡುತ್ತೇನೆ. ಮಳೆಯಿಂದ ಏರ್ ಶೋ ಸಮಸ್ಯೆ ಆಗಿದೆ. ನಾಳೆ ಸ್ವಲ್ಪ ಮೋಡಗಳು ಸಹಕಾರ ಕೊಡುತ್ತವೆ. ಏರ್ ಶೋ ಮಾಡುತ್ತೇವೆ ಎಂದು ಜಿಲ್ಲಾಡಳಿತದವರು ಹೇಳಿದ್ದಾರೆ. ನಾನು ಕೂಡ ಸಾಕ್ಷಿಯಾಗಬೇಕು ಅಂದುಕೊಂಡಿದ್ದೇನೆ ಎಂದರು.

ಕೇರಳ, ತೆಲಂಗಾಣ ಮುಖ್ಯಮಂತ್ರಿಗಳು ಆಗಮನ: ಕೇರಳ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ಬರುತ್ತಿದ್ದಾರೆ. ಆಂಧ್ರದವರು ನನಗೆ ಆಹ್ವಾನ ನೀಡಿದ್ದಾರೆ. ಆದರೆ ಅಲ್ಲಿಗೆ ಹೋಗಲು ಆಗಲಿಲ್ಲ. ನಾನು ಹೋಗಿ ನೀರಿನ ವಿಚಾರ ಮಾತಾಡಬೇಕು ಅಂದುಕೊಂಡಿದ್ದೆ. ಆದರೆ, ಕಬ್ಬು ಬೆಳೆಯುವ ರೈತರ ಭೇಟಿಗಾಗಿ ಹೋದೆ ಎಂದರು.