ಪಣಜಿ: ಗೋವಾದಲ್ಲಿ ಬಿಜೆಪಿ ಆಡಳಿತದ 15 ವರ್ಷಗಳಲ್ಲಿ ದುರಾಡಳಿತ ಮತ್ತು ಲೂಟಿ ನಡೆದಿದೆ ಎಂದು ಕಾಂಗ್ರೆಸ್ ನಾಯಕ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಅವಧಿಯಲ್ಲಿ ಗೋವಾದಲ್ಲಿ ಭೂಮಿ, ಹಣ, ಯುವಜನರ ಉದ್ಯೋಗ, ಶಾಸಕರು ಮತ್ತು ಜನರ ಮತಗಳನ್ನು ಕದಿಯಲಾಗಿದೆ. ಗೋವಾ ಜನರ ಗುರುತು, ಭೂಮಿ ಮತ್ತು ಹಕ್ಕುಗಳನ್ನು ರಕ್ಷಿಸಲು ನಡೆಯುತ್ತಿರುವ ‘ಗೋವಾ ರಾಖಣ ಯಾತ್ರೆ’ಯಲ್ಲಿ ರಾಹುಲ್ ಗಾಂಧಿ ಭಾನುವಾರ ಭಾಗವಹಿಸಿ ಮಾತನಾಡಿದರು.
ಬಿಜೆಪಿ ವಿರುದ್ಧ ಒಟ್ಟಾಗಿ ಧ್ವನಿ ಎತ್ತುವಂತೆ ಜನರಿಗೆ ಮನವಿ ಮಾಡಿದರು. ಗೋವಾ ಮಾರಾಟಕ್ಕಿಲ್ಲ; ಗೋವಾ ಜನರಿಗೆ ಸೇರಿದೆ ಎಂಬ ಬಲವಾದ ಸಂದೇಶವನ್ನು ಕಳುಹಿಸುವ ಸಮಯ ಇದು ಎಂದು ಹೇಳಿದರು. ಯಾತ್ರೆ ಭಾನುವಾರ ಮಡಗಾಂವದಲ್ಲಿ ಮುಕ್ತಾಯಗೊಂಡಿದೆ.






















