SK Home Ad
Home ಸಿನಿ ಮಿಲ್ಸ್ ‘ದಿ ಪ್ಯಾರಡೈಸ್’ ಸಿನಿಮಾ ರಿಲೀಸ್: ಟ್ರೋಲ್‌ಗಳಿಗೆ ನಟ ನಾನಿ ಟ್ವಿಟ್;‌ ಎಲ್ಲದಕ್ಕೂ ಧನ್ಯವಾದ!

‘ದಿ ಪ್ಯಾರಡೈಸ್’ ಸಿನಿಮಾ ರಿಲೀಸ್: ಟ್ರೋಲ್‌ಗಳಿಗೆ ನಟ ನಾನಿ ಟ್ವಿಟ್;‌ ಎಲ್ಲದಕ್ಕೂ ಧನ್ಯವಾದ!

0
18

ಬೆಂಗಳೂರು: ತೆಲುಗಿನ ನಟ ನಾನಿ ಅಭಿನಯದ ನೂತನ ಚಿತ್ರ ‘ದಿ ಪ್ಯಾರಡೈಸ್’ ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ತೀವ್ರ ಋಣಾತ್ಮಕ ವಿಮರ್ಶೆಗಳನ್ನು ಎದುರಿಸುತ್ತಿದೆ. ಇಲ್ಲಿಯವರೆಗೆ ಕೌಟುಂಬಿಕ ಹಾಗೂ ಪ್ರೇಮಕಥೆಗಳಲ್ಲಿ ಮಿಂಚುತ್ತಿದ್ದ ನಾನಿ, ಈ ಸಿನಿಮಾದಲ್ಲಿ ಎರಡು ಜಡೆ ಹಾಗೂ ಶರ್ಟ್‌ಲೆಸ್ ಲುಕ್‌ನಲ್ಲಿ ಪಕ್ಕಾ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಆದ್ರೆ ಸಿನಿಮಾದಲ್ಲಿ ಅತಿಯಾದ ಹಾಗೂ ಅನಗತ್ಯ ಹಿಂಸಾಚಾರವಿದೆ ಎಂದು ಪ್ರೇಕ್ಷಕರು ಮತ್ತು ವಿಮರ್ಶಕರು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವನ್ನು ಭಾರೀ ಟ್ರೋಲ್ ಮಾಡಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ತೀವ್ರ ಆಕ್ರೋಶ ಹಾಗೂ ಟ್ರೋಲ್‌ಗಳಿಗೆ ನಟ ನಾನಿ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿದ್ದಾರೆ. “ನಿಮ್ಮ ಎಲ್ಲಾ ಅಭಿಪ್ರಾಯಗಳನ್ನು ನಾನು ಗಮನಿಸಿದ್ದೇನೆ. ನೀವು ನೀಡಿದ ಪ್ರೀತಿಯನ್ನು ಸ್ವೀಕರಿಸಿದ್ದೇನೆ ಮತ್ತು ತಮಾಷೆಯ ಟ್ರೋಲ್‌ಗಳನ್ನು ಆನಂದಿಸಿದ್ದೇನೆ. ಪ್ರೇಕ್ಷಕರು ಈ ಚಿತ್ರವನ್ನು ತಮ್ಮದೇ ಎಂದುಕೊಂಡಿರುವುದು ಖುಷಿ ನೀಡಿದೆ. ವಿಮರ್ಶಕರು ಎತ್ತಿ ತೋರಿಸಿದ ಲೋಪದೋಷಗಳಿಂದ ಪಾಠ ಕಲಿತಿದ್ದೇನೆ, ಎಲ್ಲದಕ್ಕೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ.. ನಟ ನಾನಿ “ಪ್ರೇಕ್ಷಕರಿಗೆ ಒಂದು ವಿಶಿಷ್ಟ ಅನುಭವ ನೀಡುವ ಉದ್ದೇಶದಿಂದ ನಾವು ಅಪಾರ ಶ್ರಮವಹಿಸಿ ಈ ಸಿನಿಮಾ ನಿರ್ಮಿಸಿದ್ದೇವೆ. ಇದನ್ನು ಸಂಭ್ರಮಿಸುವುದು ಅಥವಾ ವಿಮರ್ಶಿಸುವುದು ಈಗ ನಿಮ್ಮ ಕೈಯಲ್ಲಿದೆ. ನಿಮ್ಮ ಉತ್ಸಾಹ ಹಾಗೂ ಪ್ರೀತಿಗೆ ನಾನು ಕೃತಜ್ಞ” ಎಂದು ತಿಳಿಸಿದ್ದಾರೆ. ಒಟ್ಟಾರೆ.. ಶ್ರೀಕಾಂತ್ ಒಡೆಲ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಖಯಾದು ಲೋಹರ್ ಹಾಗೂ ಖಳನಾಯಕರಾಗಿ ಮೋಹನ್ ಬಾಬು ಮತ್ತು ರಾಘವ್ ಜುಯಲ್ ಅಭಿನಯಿಸಿದ್ದಾರೆ.