SK Home Ad
Home ಸಿನಿ ಮಿಲ್ಸ್ ಬಿಗ್‌ ಬಾಸ್‌ನಿಂದ ತಾಂಡವ್‌ ರಾಮ್ ಔಟ್: ವೀಕ್ಷಕರ ತೀವ್ರ ಆಕ್ರೋಶ, ‘ಶೋ ಮೇಲೆ ತೀವ್ರ ಅಸಮಧಾನ!

ಬಿಗ್‌ ಬಾಸ್‌ನಿಂದ ತಾಂಡವ್‌ ರಾಮ್ ಔಟ್: ವೀಕ್ಷಕರ ತೀವ್ರ ಆಕ್ರೋಶ, ‘ಶೋ ಮೇಲೆ ತೀವ್ರ ಅಸಮಧಾನ!

0
19

‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ರೋಚಕ ಹಂತ ತಲುಪುತ್ತಿರುವ ಬೆನ್ನಲ್ಲೇ ಮನೆಯಲ್ಲಿ ದೊಡ್ಡ ಟ್ವಿಸ್ಟ್‌ ಕಾದಿದೆ. ಉತ್ತಮವಾಗಿ ಆಟವಾಡುತ್ತಿದ್ದ ಪ್ರಮುಖ ಸ್ಪರ್ಧಿ ತಾಂಡವ್ ರಾಮ್‌ ಅವರನ್ನು ಎಮರ್ಜೆನ್ಸಿ ಎಕ್ಸಿಟ್ ಹೆಸರಿನಲ್ಲಿ ಹೊರಗೆ ಕಳುಹಿಸಿರುವುದು ವೀಕ್ಷಕರಿಗೆ ತೀವ್ರ ಆಘಾತ ನೀಡಿದೆ. ಈ ನಿರ್ಧಾರದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಯೋಜಕರ ವಿರುದ್ಧ ಪ್ರೇಕ್ಷಕರ ಆಕ್ರೋಶ ಮುಗಿಲು ಮುಟ್ಟಿದೆ.

ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಿಕೊಳ್ಳಲು ಹಗಲು-ರಾತ್ರಿ ಮತ ಚಲಾಯಿಸುತ್ತಾರೆ. ಆದ್ರೆ ಬಿಗ್‌ ಬಾಸ್‌ನ ಆಂತರಿಕ ನಿರ್ಧಾರಕ್ಕೆ ಅನುಗುಣವಾಗಿ ಶ್ರಮಪಟ್ಟು ಆಡುತ್ತಿದ್ದ ಒಳ್ಳೆಯ ಆಟಗಾರನನ್ನು ಹೊರದಬ್ಬುವುದು ಎಷ್ಟರ ಮಟ್ಟಿಗೆ ಸರಿ ಎಂದು ವೀಕ್ಷಕರು ನೇರವಾಗಿ ಪ್ರಶ್ನಿಸುತ್ತಿದ್ದಾರೆ. “ಜನರ ಮತಕ್ಕೆ ಬೆಲೆ ನೀಡುವುದಿಲ್ಲ ಎಂದಾದರೆ ಈ ವೋಟಿಂಗ್ ವ್ಯವಸ್ಥೆ ಏಕೆ ಬೇಕು?” ಎಂದು ನೆಟ್ಟಿಗರು ಕಟುವಾಗಿ ಕಿಡಿಕಾರಿದ್ದಾರೆ. ಯಾವುದೇ ಕೊಡುಗೆ ನೀಡದ ಸ್ಪರ್ಧಿಗಳು ಮನೆಯಲ್ಲಿದ್ದರೂ, ತಾಂಡವ್‌ಗೆ ಅನ್ಯಾಯ ಮಾಡಲಾಗಿದೆ ಎಂಬುದು ಪ್ರೇಕ್ಷಕರ ಸ್ಪಷ್ಟ ಅಭಿಪ್ರಾಯವಾಗಿದೆ.

ಈ ಅನ್ಯಾಯದ ಎಲಿಮಿನೇಷನ್ ಖಂಡಿಸಿ ಹಲವು ವೀಕ್ಷಕರು “ನಾಳೆಯಿಂದ ಬಿಗ್‌ ಬಾಸ್‌ ಶೋ ನೋಡುವುದನ್ನೇ ನಿಲ್ಲಿಸುತ್ತೇವೆ” ಎಂದು ಬಹಿಷ್ಕಾರದ ಅಭಿಯಾನ ಪ್ರಾರಂಭಿಸಿದ್ದಾರೆ. ತಾಂಡವ್‌ ಅವರನ್ನು ತಕ್ಷಣವೇ ಮನೆಗೆ ವಾಪಸ್‌ ಕರೆಸಿ, ಆಟ ಮುಂದುವರಿಸಲು ನ್ಯಾಯಯುತ ಅವಕಾಶ ನೀಡಬೇಕೆಂದು ಒಮ್ಮತದ ಒತ್ತಾಯ ಕೇಳಿಬರುತ್ತಿದೆ.

ಕಳೆದ ಸೀಸನ್‌ನಲ್ಲೂ ಮೊದಲ ದಿನವೇ ರಕ್ಷಿತಾ ಶೆಟ್ಟಿ ಅವರನ್ನು ಹೊರಕಳುಹಿಸಿದಾಗ, ಪ್ರೇಕ್ಷಕರ ಒತ್ತಡಕ್ಕೆ ಮಣಿದು ಅವರನ್ನು ಮತ್ತೆ ಮನೆಗೆ ಕರೆತರಲಾಗಿತ್ತು. ಇದೀಗ ತಾಂಡವ್ ರಾಮ್ ವಿಚಾರದಲ್ಲೂ ಬಿಗ್ ಬಾಸ್ ಆಯೋಜಕರು ಪ್ರೇಕ್ಷಕರ ಮನವಿಗೆ ಸ್ಪಂದಿಸಿ ಅವರನ್ನು ವಾಪಸ್ ಕರೆತರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.