SK Home Ad
Home ಸುದ್ದಿ ರಾಜ್ಯ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಗಣೇಶ ಹಬ್ಬಕ್ಕೆ ಬೆಂಗಳೂರು-ಬೆಳಗಾವಿ ಮಧ್ಯೆ ವಿಶೇಷ ರೈಲು

ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಗಣೇಶ ಹಬ್ಬಕ್ಕೆ ಬೆಂಗಳೂರು-ಬೆಳಗಾವಿ ಮಧ್ಯೆ ವಿಶೇಷ ರೈಲು

0
57

ಹುಬ್ಬಳ್ಳಿ: ಗಣೇಶ ಚತುರ್ಥಿ ಹಿನ್ನೆಲೆ ನೈಋತ್ಯ ರೈಲ್ವೆಯು ಕೆಎಸ್‌ಆರ್ ಬೆಂಗಳೂರು-ಬೆಳಗಾವಿ ನಡುವೆ 2 ವಿಶೇಷ ರೈಲು ಓಡಿಸಲಿದೆ.

ಕೆಎಸ್‌ಆರ್ ಬೆಂಗಳೂರು-ಬೆಳಗಾವಿ (ರೈಲು ಸಂಖ್ಯೆ-06563): ಸೆ. 11ರ ಸಂಜೆ 7ಕ್ಕೆ ಹೊರಟು ಮರುದಿನ 8:25ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿ-ಕೆಎಸ್‌ಆರ್ ಬೆಂಗಳೂರು (ರೈಲು ಸಂಖ್ಯೆ-06564): ಸೆ. 12ರ ಸಂಜೆ 5:30ಕ್ಕೆ ಹೊರಟು ಮರುದಿನ ಬೆಳಿಗ್ಗೆ 5ಕ್ಕೆ ಬೆಂಗಳೂರು ತಲುಪಲಿದೆ.

ಅದೇ ರೀತಿ ಕೆಎಸ್‌ಆರ್ ಬೆಂಗಳೂರು-ಬೆಳಗಾವಿ (ರೈಲು ಸಂಖ್ಯೆ- 06583) ರೈಲು ಸೆ. 13ರ ಸಂಜೆ 7ಕ್ಕೆ ಹೊರಟು ಮರುದಿನ 8:25ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿ-ಕೆಎಸ್‌ಆರ್ ಬೆಂಗಳೂರು (ರೈಲು ಸಂಖ್ಯೆ- 06584) ರೈಲು ಸೆ. 14 ರಂದು ಸಂಜೆ 5:30ಕ್ಕೆ ಹೊರಟು ಮರುದಿನ ಬೆಳಿಗ್ಗೆ 5ಕ್ಕೆ ಬೆಂಗಳೂರು ತಲುಪಲಿದೆ.

ರೈಲುಗಳ ನಿಲುಗಡೆ: ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರನಲ್ಲಿ ರೈಲು ನಿಲುಗಡೆಯಾಗಲಿದ್ದು, 20 ಕೋಚ್ ಹೊಂದಿರಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.