SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಶಾಲೆಯೊಳಗೆ ಯೂಟ್ಯೂಬರ್ ಪ್ರವೇಶ: ಅನುಮತಿ ನೀಡಿದವರು ಯಾರು?

ಶಾಲೆಯೊಳಗೆ ಯೂಟ್ಯೂಬರ್ ಪ್ರವೇಶ: ಅನುಮತಿ ನೀಡಿದವರು ಯಾರು?

0
328

ಶಿಕ್ಷಕರ ದಿನಾಚರಣೆ ವೇಳೆ ಗದ್ದಲದ ಆರೋಪ; SDMCಯಿಂದ ಇಲಾಖಾ ತನಿಖೆಗೆ ಆಗ್ರಹ

ದಾಂಡೇಲಿ (ಸಂ.ಕ. ಸಮಾಚಾರ) : ದಾಂಡೇಲಿಯ ಬಾಂಗೂರನಗರ ಮಾದರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನಡೆದ ಘಟನೆಯು ಇದೀಗ ಪೊಲೀಸ್ ದೂರು–ಪ್ರತಿದೂರಿನ ಹಂತ ತಲುಪಿದ್ದು, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ನಿಷ್ಪಕ್ಷಪಾತ ಇಲಾಖಾ ತನಿಖೆಗೆ ಆಗ್ರಹಿಸಿದೆ.

ಶಾಲೆಗೆ ರಜೆ ಇಲ್ಲವೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದ ಹಿನ್ನೆಲೆಯಲ್ಲಿ ಶಿಕ್ಷಕರನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಗೌರವಿಸಲು SDMC ಸದಸ್ಯರು ಶಾಲೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಕಾರ್ಯಕ್ರಮ ನಡೆಸುವ ವಿಚಾರವಾಗಿ ಮುಖ್ಯಾಧ್ಯಾಪಕರು ಹಾಗೂ SDMC ನಡುವೆ ಚರ್ಚೆ ನಡೆಯುತ್ತಿದ್ದಾಗ ಹೊರಗಿನ ವ್ಯಕ್ತಿ ಶಾಲಾ ಆವರಣ ಪ್ರವೇಶಿಸಿ ಚಿತ್ರೀಕರಣ ನಡೆಸಿ ಗದ್ದಲ ಉಂಟುಮಾಡಿದ್ದಾರೆ ಎಂದು SDMC ಆರೋಪಿಸಿದೆ.

ಶಾಲಾ ಆವರಣಕ್ಕೆ ಹೊರಗಿನ ವ್ಯಕ್ತಿಗೆ ಚಿತ್ರೀಕರಣ ಮಾಡಲು ಅನುಮತಿ ನೀಡಿದವರು ಯಾರು? ಯಾವ ಅಧಿಕಾರದ ಮೇರೆಗೆ ಶಾಲೆಯ ಆಂತರಿಕ ವಿಚಾರದಲ್ಲಿ ಅವರು ಮಧ್ಯಪ್ರವೇಶಿಸಿದರು? ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು SDMC ಒತ್ತಾಯಿಸಿದೆ.

ಘಟನೆಗೆ ಸಂಬಂಧಿಸಿದ ವೀಡಿಯೋ ದಾಖಲೆಗಳು ಹಾಗೂ ಸಾಮಾಜಿಕ ಮಾಧ್ಯಮ ಪ್ರಸಾರವನ್ನು ಪರಿಶೀಲಿಸಿ ಸತ್ಯಾಸತ್ಯತೆ ಬಹಿರಂಗಪಡಿಸುವಂತೆ SDMC ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.