SK Home Ad
Home ಸುದ್ದಿ ರಾಜ್ಯ ಪ್ರಯಾಣಿಕರ ಗಮನಕ್ಕೆ: ಮೈಸೂರು-ಅಜ್ಮೀರ್ ರೈಲು ಇನ್ನು ಕಾಯಂ

ಪ್ರಯಾಣಿಕರ ಗಮನಕ್ಕೆ: ಮೈಸೂರು-ಅಜ್ಮೀರ್ ರೈಲು ಇನ್ನು ಕಾಯಂ

0
55

ಹುಬ್ಬಳ್ಳಿ: ಪ್ರಯಾಣಿಕರ ಬೇಡಿಕೆ ಹಿನ್ನೆಲೆಯಲ್ಲಿ ಮೈಸೂರು-ಅಜ್ಮೀರ್ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲು ಸೇವೆ (06281/06282) ಯನ್ನು ಭಾರತೀಯ ರೈಲ್ವೆ ಮಂಡಳಿಯು ಕಾಯಂ ಸೇವೆಯಾಗಿ ಪರಿವರ್ತಿಸಿ ಹೊಸ ಸಂಖ್ಯೆ (16281/16282) ಯೊಂದಿಗೆ ವಾರಕ್ಕೊಮ್ಮೆ ಸಂಚರಿಸಲು ಅನುಮೋದನೆ ನೀಡಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಮೈಸೂರು-ಅಜ್ಮೀರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16281): ಸೆಪ್ಟೆಂಬರ್ 5 ರಿಂದ ಪ್ರತಿ ಶನಿವಾರ ಬೆಳಗ್ಗೆ 8 ಗಂಟೆಗೆ ಮೈಸೂರಿನಿಂದ ಹೊರಟು ಸೋಮವಾರ ಬೆಳಗ್ಗೆ 4.35ಕ್ಕೆ ಅಜ್ಮೀರ್ ತಲುಪಲಿದೆ.

ಮಾರ್ಗ ಮತ್ತು ಸಮಯ:
ಕೃಷ್ಣರಾಜನಗರ (8.34),
ಹೊಳೆನರಸೀಪುರ (9.28),
ಹಾಸನ (10.23),
ಅರಸೀಕೆರೆ (11.10),
ಕಡೂರು (11.48),
ಚಿಕ್ಕಜಾಜೂರು (12.50),
ದಾವಣಗೆರೆ (13.38),
ಕೊಟ್ಟೂರು (14.53),
ತುಂಗಭದ್ರಾ ಡ್ಯಾಮ್ (16.40),
ಕೊಪ್ಪಳ (17.48), ಗದಗ (18.48),
ಎಸ್‌ಎಸ್‌ಎಸ್ ಹುಬ್ಬಳ್ಳಿ (20.10/20.20),
ಧಾರವಾಡ (20.43),
ಲೋಂಡಾ (21.58),
ಬೆಳಗಾವಿ (23.05),
ಮಿರಜ್ (02.35),
ಪುಣೆ (08.10),
ಸೂರತ್ (14.43),
ವಡೋದರಾ (16.25),
ರತ್ಲಾಮ್ (20.10),
ಚಿತ್ತೋರ್‌ಗಢ (00.05) ಮೂಲಕ ಅಜ್ಮೀರ್ ತಲುಪಲಿದೆ.

ಅಜ್ಮೀರ್-ಮೈಸೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16282): ಸೆಪ್ಟೆಂಬರ್ 7 ರಿಂದ ಪ್ರತಿ ಸೋಮವಾರ ಸಂಜೆ 6.50ಕ್ಕೆ ಅಜ್ಮೀರ್‌ನಿಂದ ಹೊರಟು ಬುಧವಾರ ಸಂಜೆ 7ಕ್ಕೆ ಮೈಸೂರು ತಲುಪಲಿದೆ.

ಮಾರ್ಗ ಮತ್ತು ಸಮಯ:
ಚಿತ್ತೋರ್‌ಗಢ (23.35),
ರತ್ಲಾಮ್ (03.50),
ವಡೋದರಾ (07.40),
ಸೂರತ್ (10.05),
ಪುಣೆ (18.35),
ಮಿರಜ್ (01.25),
ಬೆಳಗಾವಿ (03.45),
ಲೋಂಡಾ (04.38),
ಧಾರವಾಡ (06.28),
ಎಸ್‌ಎಸ್‌ಎಸ್ ಹುಬ್ಬಳ್ಳಿ (07.25/07.35),
ಗದಗ (08.28),
ಕೊಪ್ಪಳ (09.18),
ದಾವಣಗೆರೆ (13.13),
ಅರಸೀಕೆರೆ (15.22),
ಹಾಸನ (16.10) ಮೂಲಕ ಮೈಸೂರು ತಲುಪಲಿದೆ.