SK Home Ad
Home ಸಿನಿ ಮಿಲ್ಸ್ ನಿಮ್ಮ ಪ್ರೀತಿಯೇ ನನ್ನ ದೊಡ್ಡ ಶಕ್ತಿ: ಜನ್ಮದಿನದ ಶುಭಾಶಯಗಳಿಗೆ ಕಿಚ್ಚ ಸುದೀಪ್ ಭಾವುಕ ಧನ್ಯವಾದ

ನಿಮ್ಮ ಪ್ರೀತಿಯೇ ನನ್ನ ದೊಡ್ಡ ಶಕ್ತಿ: ಜನ್ಮದಿನದ ಶುಭಾಶಯಗಳಿಗೆ ಕಿಚ್ಚ ಸುದೀಪ್ ಭಾವುಕ ಧನ್ಯವಾದ

0
28

ಬೆಂಗಳೂರು: ತಮ್ಮ ಜನ್ಮದಿನವನ್ನು ವಿಶೇಷವಾಗಿಸಿದ ಅಭಿಮಾನಿಗಳು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನಟ ಕಿಚ್ಚ ಸುದೀಪ್ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಜನ್ಮದಿನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಸುದೀಪ್, “ಇಂದು ನನ್ನ ಮನಸ್ಸು ತುಂಬಿ ತುಳುಕುತ್ತಿದೆ. ನನ್ನ ಹುಟ್ಟುಹಬ್ಬವನ್ನು ಇಷ್ಟು ವಿಶೇಷವಾಗಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು” ಎಂದು ಹೇಳಿದ್ದಾರೆ.

ಅಭಿಮಾನಿಗಳು ಕಳುಹಿಸಿದ ಮೆಸೇಜ್‌ಗಳು, ಕರೆಗಳು, ಪೋಸ್ಟ್‌ಗಳು ಹಾಗೂ ಶುಭಾಶಯಗಳ ಮೂಲಕ ತೋರಿದ ಪ್ರೀತಿ ತಮ್ಮ ಹೃದಯ ಮುಟ್ಟಿದೆ ಎಂದು ಅವರು ತಿಳಿಸಿದ್ದಾರೆ. ತಮ್ಮನ್ನು ನೆನಪಿಸಿಕೊಂಡು ಅಮೂಲ್ಯ ಸಮಯ ನೀಡಿ ಶುಭ ಹಾರೈಸಿದ ಅಭಿಮಾನಿಗಳು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಪ್ರತಿಯೊಬ್ಬರಿಗೂ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.

“ನಿಮ್ಮ ಪ್ರೀತಿ, ಬೆಂಬಲ ಮತ್ತು ಆಶೀರ್ವಾದಗಳೇ ನನ್ನ ದೊಡ್ಡ ಶಕ್ತಿ” ಎಂದು ಸುದೀಪ್ ಭಾವುಕರಾಗಿ ಹೇಳಿದ್ದಾರೆ.

ಪ್ರತಿಯೊಬ್ಬರ ಶುಭಶಯಕ್ಕೂ ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇರಬಹುದು. ಆದರೆ ಪ್ರತಿಯೊಂದು ಶುಭಾಶಯವನ್ನೂ ನೋಡಿದ್ದೇನೆ, ಅನುಭವಿಸಿದ್ದೇನೆ ಮತ್ತು ನಿಮ್ಮ ಪ್ರೀತಿಯನ್ನು ಮನಸಾರೆ ಸ್ವೀಕರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕೊನೆಯಲ್ಲಿ, ತಮ್ಮ ದಿನವನ್ನು ಸುಂದರವಾಗಿ, ವಿಶೇಷವಾಗಿ ಹಾಗೂ ನೆನಪಿನಲ್ಲಿ ಉಳಿಯುವಂತೆ ಮಾಡಿದ ಎಲ್ಲರಿಗೂ ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದ ಸಲ್ಲಿಸಿರುವ ಸುದೀಪ್, “ನಿಮ್ಮ ಪ್ರೀತಿ ಹೀಗೆಯೇ ಸದಾ ನನ್ನ ಜೊತೆಯಲ್ಲಿರಲಿ” ಎಂದು ಹೇಳಿದ್ದಾರೆ.