SK Home Ad
Home ಸಿನಿ ಮಿಲ್ಸ್ ದಿ ವಿಲನ್ ಆದ್ಮೇಲೆ ಮತ್ತೆ ಬಂದ ಪ್ರೇಮ್-ಸುದೀಪ್; ಕಿಚ್ಚನ ಹುಟ್ಟುಹಬ್ಬಕ್ಕೆ Seriously its a Family...

ದಿ ವಿಲನ್ ಆದ್ಮೇಲೆ ಮತ್ತೆ ಬಂದ ಪ್ರೇಮ್-ಸುದೀಪ್; ಕಿಚ್ಚನ ಹುಟ್ಟುಹಬ್ಬಕ್ಕೆ Seriously its a Family Matter ಎಂದ ಹ್ಯಾಟ್ರಿಕ್ ಡೈರೆಕ್ಟರ್

0
93

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಡೈರೆಕ್ಟರ್ ಶೋ ಮ್ಯಾನ್ ಪ್ರೇಮ್ ವೃತ್ತಿ ಬದುಕಿನ 10ನೇ ಸಿನಿಮಾಗೆ ನಾಯಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಕಿಚ್ಚನ ಹುಟ್ಟುಹಬ್ಬದ ಪ್ರಯುಕ್ತ ಇಂದು ಪ್ರೇಮ್ ಈ ಅಚ್ಚರಿಯ ಉಡುಗೊರೆಯನ್ನ ಕನ್ನಡ ಕಲಾಭಿಮಾನಿಗಳಿಗೆ ನೀಡಿದ್ದಾರೆ.

ದಿ ವಿಲನ್ ಸಿನಿಮಾ ಮೂಲಕ ಸಂಚಲನ ಸೃಷ್ಟಿದ್ದ ಈ ಜೋಡಿ, ಇದೀಗ ಮತ್ತೆ ಒಂದಾಗಿದೆ.. ಅಂದಿಗೆ ದಿ ವಿಲನ್ ಮೊದಲ ವಾರವೇ 32ಕೋಟಿ ಗ್ರಾಸ್ ಗಳಿಸಿದ್ದು ಇತಿಹಾಸ.. ಅಷ್ಟು ದೊಡ್ಡ ಸೆನ್ಸೆಷನ್ ಆಗಿತ್ತು. ಅಲ್ಲಿ ಕಿಚ್ಚನಿಗೆ ಶಿವಣ್ಣನೂ ಸಾಥ್ ಕೊಟ್ಟಿದ್ದರು, ಆದ್ರೆ ಈ ಸಲ 1&only ಕಿಚ್ಚನ ಜೊತೆಗೆ ಪ್ರೇಮ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಟೈಟಲ್ ಇಲ್ಲದ ಪ್ರೇಮ್ ಸುದೀಪ್ ಜೋಡಿ ಸಿನಿಮಾದ ಮೊದಲ ನೋಟ ಮತ್ತು ಅದ್ರ ಸಂಗೀತದ ಸೆಳೆತ ಕುತೂಹಲ ಹುಟ್ಟಿಸ್ತಿದೆ. ಅಂದ್ಹಾಗೆ ಈಸಲ ಪ್ರೇಮ್ & ಕಿಚ್ಚ ಸೀರಿಯಸ್ ಆಗಿ ಇವತ್ತಿ ಜನರೇಷನ್‌ನ ಮನೆ ಮನೆಯ ಕಥೆಯನ್ನ ಅದು ಸೀರಿಯಸ್ಸಾಗಿ ಕಲರ್ ಪುಲ್ಲಾಗಿ ಹೇಳೋದಕ್ಕೆ ಹೊರಟಿದ್ದಾರೆ..

ಸಂಬಂಧಗಳು.. ಭಾವೆನೆಗಳ ಕಥೆಯನ್ನ ಹಣೆಯೋದ್ರಲ್ಲಿ, ಮ್ಯೂಸಿಕಲಿ ಅದನ್ನ ನಿರೂಪಿಸೋದ್ರಲ್ಲಿ ಪ್ರೇಮ್ ಅಕ್ಷರಶಃ ನಿಪುಣ ಶೋಮ್ಯಾನ್.. ಇನ್ನು ಎಮೋಷನ್ನೂ, ಆ್ಯಕ್ಷನ್ನೂ, ಕ್ಲಾಸಿ ಲುಕ್ಕಿಗೆ ಕೇರ್ ಆಫ್ ಅಡ್ರೆಸ್ ಕಿಚ್ಚ, ಈ ಜನರೇಷನ್ ಹುಡುಗರಿಗೂ ಹಾಟ್ ಫೇವಿರೀಟ್ ಸುದೀಪ್

ಈ ಎರಡೂ ತಲೆಗಳು, ಕೈಗಳು, ಮನಸುಗಳು ಒಂದಾದ್ರೆ ಹೇಗಿರುತ್ತೆ ಊಹಿಸಿ.. ನಿಮ್ಮ ಊಹೆಗೂ ನಿಲುಕದ ಇನ್ನಷ್ಟು ವಿಶೇಷ ಸಹಯೋಗಗಳೊಂದಿಗೆ ನಿರ್ದೇಶಕ ಪ್ರೇಮ್ ಬರ್ತಿದ್ದಾರೆ.. ಅಕ್ಟೋಬರ್ 20ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಕ್ಟೋಬರ್ 20ರಿಂದ ಹೊಸ ಅಧ್ಯಾಯಕ್ಕೆ ಕಿಚ್ಚ ಮತ್ತು ಪ್ರೇಮ್ ಮುನ್ನುಡಿ ಬರೆಯಲಿದ್ದಾರೆ.