SK Home Ad
Home ಸುದ್ದಿ ಮಳೆ ಕೊರತೆಯಲ್ಲೂ ಕಣ್ಣೀರು.. ರಾಜ್ಯದಲ್ಲಿ ಉಳ್ಳಾಗಡ್ಡಿ 40% ಇಳಿಕೆ; ಈರುಳ್ಳಿ ರೇಟ್ ಮತ್ತಷ್ಟು ಏರಿಕೆ ಸಾಧ್ಯತೆ

ಮಳೆ ಕೊರತೆಯಲ್ಲೂ ಕಣ್ಣೀರು.. ರಾಜ್ಯದಲ್ಲಿ ಉಳ್ಳಾಗಡ್ಡಿ 40% ಇಳಿಕೆ; ಈರುಳ್ಳಿ ರೇಟ್ ಮತ್ತಷ್ಟು ಏರಿಕೆ ಸಾಧ್ಯತೆ

0
29

ಬೆಂಗಳೂರು: ಈ ವರ್ಷ ಮುಂಗಾರು ಮಳೆ ಕೊರತೆಯಿಂದ ರೈತರಿಗೆ ಬರದ ಪರಿಸ್ಥಿತಿ ಎದುರಾಗಿ ಈರುಳ್ಳಿ ಬೆಳೆ 40% ಉತ್ಪಾದನೆ ಕುಸಿದಿದೆ. ರಾಜ್ಯದಲ್ಲಿ ಪ್ರಮುಖ ಬೆಳೆಯಾಗಿರುವ ಈರುಳ್ಳಿ ಈ ಬಾರಿ ಕೈ ಕೊಡುವ ಆಂತಕ ಎದುರಾಗಿದೆ. ಕಳೆದ 15 ದಿನಗಳಂದ ಈರುಳ್ಳಿ ಬೆಲೆ ಏರುತ್ತಲ್ಲೆ ಇದೆ. ದೇಶದಲ್ಲಿ ಕರ್ನಾಟಕವು 50% ಈರುಳ್ಳಿ ಬೆಳೆಯ ಪಾಲುದಾರಿಕೆ ಇದೆ. ಕರ್ನಾಟಕ ಬಿಟ್ಟರೆ ಮಹಾರಾಷ್ಟ್ರ ರಾಜ್ಯದಲ್ಲಿ ಬೆಳೆ ಹೆಚ್ಚಿದೆ. ಈ ಬಾರಿ ಮುಂಗಾರಿನ ಕೊರತೆಯಿಂದ ಕರ್ನಾಟಕದಲ್ಲಿ ಈರುಳ್ಳಿ ನಿರೀಕ್ಷೆಯಷ್ಟು ಇಳುವರಿಯಾಗಿಲ್ಲ. ಇದರಿಂದ ಬೆಲೆ ದಿನನಿತ್ಯ ಏರಿಕೆಯಾಗಿ ಪ್ರಸ್ತುತ 60 ರಿಂದ 70 ರೂಪಾಯಿ ಮಾರಾಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ 100 ರೂಪಾಯಿ ದಾಟುವ ಆತಂಕ ಎದುರಾಗಿದೆ.

ಈರುಳ್ಳಿ ಬೆಲೆ ಏರಿಕೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ತನ್ನಲ್ಲಿದ್ದ ದಾಸ್ತಾನನ್ನು ಬೆಲೆ ಏರಿದ ರಾಜ್ಯಗಳಿಗೆ ರವಾನೆ ಮಾಡಿ, ಪ್ರತಿ ಕೆಜಿ ಈರುಳ್ಳಿ 35 ರೂಪಾಯಿ ಮಾರಾಟ ಮಾಡುವಂತೆ ತಿಳಿಸಿದೆ. ಇದರಿಂದ ಸದ್ಯಕ್ಕೆ ಬೆಲೆ ಏರಿಕೆಗೆ ಕಡಿವಾಣ ಹಾಕಿದಂತಿದೆ. ಆದರೆ ಹೀಗೆ ಮುಂದೆ ಇರುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮುಂಗಾರು ಪೂರ್ಣ ಪ್ರಮಾಣದಲ್ಲಿ ಬರುತ್ತಾ ಇಲ್ಲ ಗೊತ್ತಿಲ್ಲ. ಆದರೆ 3 ವರ್ಷ ಹಿಂದೆಯಾದ ಈರುಳ್ಳಿ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತಿದ್ದಾರೆ.

ಹವಾಮಾನ ವೈಪರೀತ್ಯ: ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳು ರಾಜ್ಯದಲ್ಲಿ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಯುವ ಪ್ರಮುಖ ಜಿಲ್ಲೆಗಳಾಗಿದೆ. ಹವಾಮಾನ ಬದಲಾವಣೆಯಿಂದ ಈ ಭಾಗದ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಬಾಗಲಕೋಟೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ವೆಂಕಟೇಶಯ್ಯ ಅವರ ಪ್ರಕಾರ, ಈರುಳ್ಳಿ, ಒಣಮೆಣಸಿನಕಾಯಿ ಪ್ರಸ್ತುತ ಹೆಚ್ಚು ಭಾದಿತವಾಗಿರುವ ತೋಟಗಾರಿಕಾ ಬೆಳೆಗಳಾಗಿವೆ.
ಬಿತ್ತನೆ ಕಡಿಮೆ:
ರಾಜ್ಯದ ಬಳ್ಳಾರಿ, ವಿಜಯಪುರ, ಗದಗ, ಹಾವೇರಿ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಈರುಳ್ಳಿ ಬೆಳೆಯಲಾಗುತ್ತದೆ. ಆದ್ರೆ ಈ ಬಾರಿ 1.5 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆ ಮಾಡಲಾಗಿದೆ. ಕೆಲವು ಭಾಗಗಳಲ್ಲಿ ತಡವಾಗಿ ಬಿತ್ತನೆ ಮಾಡಿದರಿಂದ ಅದು ಪೂರ್ಣ ಪ್ರಮಾಣದಲ್ಲಿ ಇಳುವರಿಯಾಗುವ ವಿಶ್ವಾಸವಿಲ್ಲ. ಸಾಧಾರಣ ಮಳೆಯಾದರೆ ಇಳುವರಿ ಬರುವುದು ಖಚಿತ. ಮಳೆ ಇಲ್ಲ ಎಂದರೆ ಬೆಳೆ ಕುಸಿಯಲಿದೆ ಎಂದು ತಜ್ಞರು ಹೇಳಿದ್ದಾರೆ.

ನೀರಿಗಾಗಿ ಖರ್ಚು:
ತಾವು ಬೆಳೆದ ಈರುಳ್ಳಿ ಬೆಳೆಯನ್ನು ಉಳಿಸಲು ರೈತರು ಟ್ಯಾಂಕರ್‌ಗಳ ಮೂಲಕ ಪ್ರತಿ ಎಕರೆಗೆ 10 ಸಾವಿರ ರೂಪಾಯಿನಷ್ಟು ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಬೆಳೆ ಇಳುವರಿ ಸಿಗುವ ಸಾಧ್ಯತೆ ಕಡಿಮೆ ಇದೆ.
ಇನ್ನಿತರ ಆಹಾರ ಧಾನ್ಯದ ಬೆಳೆಯೂ ಮಳೆ ಕೊರತೆಯಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಸಕ್ಕರೆ, ಅಕ್ಕಿ, ಬೆಲ್ಲ, ಬೇಳೆಕಾಳುಗಳ ದರ ಏರಿಕೆಯಾಗಿದೆ. ಸಂಪೂರ್ಣ ಮುಂಗಾರು ಕೈ ಕೊಟ್ಟರೆ ಅಗತ್ಯ ವಸ್ತುಗಳ ಬೆಲೆ ಏರುವ ಎಲ್ಲಾ ಸಾಧ್ಯತೆ ಇವೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಆದ್ರೆ ಬೆಲೆ ಏರಿಕೆಯಾದರೆ ರೈತರಿಗೆ ಮಾತ್ರ ಲಾಭ ಸಿಗುವುದಿಲ್ಲ. ಯಾಕಂದ್ರೆ ಇಳುವರಿ ಕಡಿಮೆಯಾದ್ರೆ ಅವರ ನಿರೀಕ್ಷೆ ಹುಸಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.