ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕಳೆದ 12 ವರ್ಷಗಳ ಆಡಳಿತಾವಧಿಯಲ್ಲಿ ಸಮೂಹದ ಒತ್ತಡಕ್ಕೆ ಮಣಿದು ಹಿನ್ನಡೆ ಅನುಭವಿಸಿದ 3 ಪ್ರಮುಖ ಪ್ರಕರಣಗಳು ಇಂತಿವೆ.
1 ಸಿಎಎ-ಎನ್‌ಆರ್‌ಸಿ: ರಾಷ್ಟ್ರೀಯ ನಾಗರಿಕರ ನೊಂದಣಿ (ಎನ್‌ಆರ್‌ಸಿ)' ಯೋಜನೆ ಅಡಿ ಸಿದ್ಧವಾಗಿದ್ದಪೌರತ್ವ ತಿದ್ದುಪಡಿ ಕಾಯ್ದೆ’ (ಸಿಎಎ) ವಿರುದ್ಧ 2019-20ರಲ್ಲಿ ಎದ್ದ ಕೂಗಿಗೆ ಇಡೀ ಯೋಜನೆ ಶೀಥಿಲಗೃಹ ಸೇರಬೇಕಾಯಿತು. ಗೃಹ ಸಚಿವ ಅಮಿತ್ ಶಾ ಪದೇಪದೇ ರಾಷ್ಟ್ರೀಯ ಮಟ್ಟದಲ್ಲಿ ಜಾರಿಯಾಗಲಿದೆ' ಎಂದಿದ್ದಲ್ಲದೆ ಅವರು ಬಳಸಿದ್ದಕಾಲಾನುಕ್ರಮ’ ಎಂಬ ವ್ಯಾಖ್ಯಾನವೇ ಜನರ ಆತಂಕಗಳಿಗೆ ಕಾರಣವಾಗಿ ಹಿನ್ನಡೆ ಅನುಭವಿಸಬೇಕಾಯ್ತು. ಯೋಜನೆ ಜಾರಿಗೆ ಬಂದಲ್ಲಿ ರಾಜಕೀಯ ಹೊಣೆಗಾರಿಕೆ ಹೆಗಲೇರಲಿದೆ ಎಂಬ ಸುಳಿವು ಸರ್ಕಾರಕ್ಕೂ ಸಿಕ್ಕಿತ್ತು.
2 ಕೃಷಿ ಕಾಯ್ದೆ: 2020-21ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ರೈತರು ನಡೆಸಿದ ಭಾರೀ ಹೋರಾಟಕ್ಕೆ ಅಂತಿಮವಾಗಿ ಸರ್ಕಾರ ಮಣಿಯಬೇಕಾಯ್ತು. ಒಂದು ವರ್ಷದ ಬಳಿಕ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಪ್ರಕಟಿಸಿದ್ದಲ್ಲದೆ, ರೈತರ ಕ್ಷಮೆಯನ್ನೂ ಕೋರಿದ್ದರು.
3 ಪ್ರಧಾನ್ ರಾಜೀನಾಮೆ: ನೀಟ್' ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಜೆ.ಪಿ. (ಜಿರಳೆ ಪಾರ್ಟಿ) ಜುಲೈ ಉತ್ತರಾರ್ಧದಲ್ಲಿ ದೆಹಲಿಯಲ್ಲಿ ನಡೆಸಿದ ಭಾರೀ ಪ್ರತಿಭಟನೆ ಹಾಗೂಸಂಸದ್ ಚಲೋ’ ಕಾರ್ಯಕ್ರಮದ ತೀವ್ರತೆಗೆ ಸರ್ಕಾರ 3ನೇ ಬಾರಿ ಹಿನ್ನಡೆ ಅನುಭವಿಸಿತು.
ಅಂತಿಮವಾಗಿ ಸಿಜೆಪಿ ಬೇಡಿಕೆಗೆ ಒಪ್ಪಿದ ಕೇಂದ್ರ ಸರ್ಕಾರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದುಕೊಂಡಿತು.



















