SK Home Ad
Home ಸಿನಿ ಮಿಲ್ಸ್ ರಣಬೀರ್ ರಾಮ, ಯಶ್ ರಾವಣ: ‘ರಾಮಾಯಣ’ ಟ್ರೇಲರ್ ಜುಲೈ 24ಕ್ಕೆ

ರಣಬೀರ್ ರಾಮ, ಯಶ್ ರಾವಣ: ‘ರಾಮಾಯಣ’ ಟ್ರೇಲರ್ ಜುಲೈ 24ಕ್ಕೆ

0
181

ನಿತೇಶ್ ತಿವಾರಿ ‘ರಾಮಾಯಣ’ಕ್ಕೆ ಜಾಗತಿಕ ಮುನ್ನುಡಿ; ‘ಪ್ರಥಮ ಸಂಕಲ್ಪ’ ಕಾರ್ಯಕ್ರಮಕ್ಕೆ ಭರ್ಜರಿ ಪ್ರತಿಕ್ರಿಯೆ – ರಣಬೀರ್‌ ಕಪೂರ್‌, ಯಶ್‌, ಸಾಯಿ ಪಲ್ಲವಿ ಚಿತ್ರತಂಡದಿಂದ ಬಿಗ್‌ ಅಪ್‌ಡೇಟ್‌

ನವದೆಹಲಿ: ಭಾರತದ ಶಾಶ್ವತ ಸಾಂಸ್ಕೃತಿಕ ಪರಂಪರೆಯಾದ ‘ರಾಮಾಯಣ’ ಮಹಾಕಾವ್ಯವನ್ನು ಜಾಗತಿಕ ಮಟ್ಟದಲ್ಲಿ ಹೊಸ ರೂಪದಲ್ಲಿ ಪರಿಚಯಿಸುವ ಬಹುನಿರೀಕ್ಷಿತ ಸಿನಿಮಾದ ಭವ್ಯ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಚಿತ್ರದ ಜಾಗತಿಕ ಟ್ರೇಲರ್ ಬಿಡುಗಡೆಗೂ ಮುನ್ನ ‘ಪ್ರಥಮ ಸಂಕಲ್ಪ’ ಎಂಬ ವಿಶೇಷ ಕಾರ್ಯಕ್ರಮವನ್ನು ದೆಹಲಿಯಲ್ಲಿ ಆಯೋಜಿಸಲಾಗಿದ್ದು, ಭಾರತೀಯ ಸಂಸ್ಕೃತಿ ಮತ್ತು ರಾಮಾಯಣದ ಮೌಲ್ಯಗಳನ್ನು ವಿಶ್ವದ ಮುಂದೆ ಅನಾವರಣಗೊಳಿಸುವ ಸಂಕಲ್ಪವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

ಜುಲೈ 24ರಂದು ಚಿತ್ರದ ಅಧಿಕೃತ ಟ್ರೇಲರ್ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಈ ಕಾರ್ಯಕ್ರಮವು ಅದರ ಮುನ್ನುಡಿಯಾಗಿ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ‘ಕಂದಮ್ಮ’ ಮೂಲಕ ಪ್ರೇಮಕಥೆಯ ಝಲಕ್ ನೀಡಿದ ‘ಸಿಟಿಲೈಟ್ಸ್’ ತಂಡ

‘ಪ್ರಥಮ ಸಂಕಲ್ಪ’ದ ವಿಶೇಷತೆ : ಭಾರತೀಯ ಸಂಪ್ರದಾಯದಲ್ಲಿ ಯಾವುದೇ ಮಹತ್ವದ ಕಾರ್ಯವನ್ನು ಆರಂಭಿಸುವ ಮೊದಲು ಕೈಗೊಳ್ಳುವ ದೃಢ ನಿರ್ಧಾರವನ್ನು ‘ಸಂಕಲ್ಪ’ ಎಂದು ಕರೆಯಲಾಗುತ್ತದೆ. ಅದೇ ಪರಿಕಲ್ಪನೆಯಡಿ ‘ರಾಮಾಯಣ’ ಚಿತ್ರದ ತಂಡ ‘ಪ್ರಥಮ ಸಂಕಲ್ಪ’ ಕಾರ್ಯಕ್ರಮವನ್ನು ಆಯೋಜಿಸಿತ್ತು. ದೆಹಲಿ ಕಾರ್ಯಕ್ರಮದಲ್ಲಿ ಚಿತ್ರದ ಕಲಾತ್ಮಕ ದೃಷ್ಟಿಕೋನ, ಭಾರತೀಯ ಸಂಸ್ಕೃತಿಯ ಮಹತ್ವ ಹಾಗೂ ಜಾಗತಿಕ ಪ್ರೇಕ್ಷಕರಿಗೆ ರಾಮಾಯಣವನ್ನು ಹೊಸ ತಂತ್ರಜ್ಞಾನದ ಮೂಲಕ ಪರಿಚಯಿಸುವ ಉದ್ದೇಶವನ್ನು ಚಿತ್ರತಂಡ ಹಂಚಿಕೊಂಡಿತು.

500ಕ್ಕೂ ಹೆಚ್ಚು ಶಾಲೆಗಳಲ್ಲಿ ‘ರಾಮಾಯಣ’ ಕಾರ್ಯಕ್ರಮ : ಚಿತ್ರದ ಪ್ರಚಾರ ಕೇವಲ ಸಿನಿರಂಗಕ್ಕೆ ಸೀಮಿತವಾಗದೆ ಶಿಕ್ಷಣ ಕ್ಷೇತ್ರಕ್ಕೂ ತಲುಪಿದೆ. ‘Ramayana Schools Programme’ ಮೂಲಕ ದೇಶದಾದ್ಯಂತ 500ಕ್ಕೂ ಹೆಚ್ಚು ಶಾಲೆಗಳ ಲಕ್ಷಾಂತರ ವಿದ್ಯಾರ್ಥಿಗಳಿಗೆ ರಾಮಾಯಣದ ಮೌಲ್ಯಗಳು, ಆದರ್ಶಗಳು ಮತ್ತು ಸಂಸ್ಕೃತಿಯನ್ನು ಪರಿಚಯಿಸಲಾಗಿದೆ.

ಇದನ್ನೂ ಓದಿ: ‘ನೀಟ್’ ಹಗರಣಕ್ಕೆ ಖರ್ಗೆ ಆಕ್ರೋಶ: ಸದನ ಕಲಾಪ ಮುಂದೂಡಿಕೆ!

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ ಪ್ರತಿಭಾವಂತರಿಗೆ ದೆಹಲಿಯಲ್ಲಿ ನಡೆದ ‘ಪ್ರಥಮ ಸಂಕಲ್ಪ’ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಇದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಘಟಾನುಘಟಿ ತಾರಾಬಳಗ : ನಿರ್ದೇಶಕ ನಿತೇಶ್ ತಿವಾರಿ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅದ್ದೂರಿ ತಾರಾಬಳಗ ಚಿತ್ರದ ಪ್ರಮುಖ ಬಲವಾಗಿದೆ. ಚಿತ್ರದಲ್ಲಿ ರಣಬೀರ್ ಕಪೂರ್ – ಶ್ರೀರಾಮ, ಸಾಯಿ ಪಲ್ಲವಿ – ಸೀತಾ ಮಾತೆ, ರಾಕಿಂಗ್ ಸ್ಟಾರ್ ಯಶ್ – ರಾವಣ, ಸನ್ನಿ ಡಿಯೋಲ್ – ಹನುಮಂತ, ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಅರುಣ್ ಗೋವಿಲ್, ಶೋಭನಾ, ಅಜಿಂಕ್ಯ ದೇವ್, ಕುನಾಲ್ ಕಪೂರ್, ರಕುಲ್ ಪ್ರೀತ್ ಸಿಂಗ್ ಹಾಗೂ ರವಿ ದುಬೆ ಸೇರಿದಂತೆ ಹಲವು ಖ್ಯಾತ ಕಲಾವಿದರು ಚಿತ್ರದಲ್ಲಿದ್ದಾರೆ.

ಇದನ್ನೂ ಓದಿ: ಬಾಹ್ಯಾಕಾಶ ಸಾಧನೆ ಬೆನ್ನಲ್ಲೇ 56ರ ‘ಯುವಕ’ನಿಗೆ ಮೋದಿ ಟಾಂಗ್!

ನಿತೇಶ್ ತಿವಾರಿ ಹೇಳಿದ್ದೇನು? : ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ನಿತೇಶ್ ತಿವಾರಿ, ರಾಮಾಯಣದ ಮೌಲ್ಯಗಳು ಸಾರ್ವತ್ರಿಕವಾಗಿದ್ದು, ಪ್ರತಿಯೊಂದು ದೃಶ್ಯವನ್ನೂ ಅತ್ಯಂತ ಗೌರವ ಮತ್ತು ಪ್ರಾಮಾಣಿಕತೆಯಿಂದ ರೂಪಿಸಲಾಗಿದೆ ಎಂದು ಹೇಳಿದರು. “ತಂತ್ರಜ್ಞಾನವನ್ನು ಬಳಸಿಕೊಂಡು ರಾಮಾಯಣದ ಭಾವನಾತ್ಮಕ ಆಳವನ್ನು ವಿಶ್ವದ ಪ್ರತಿಯೊಬ್ಬ ಪ್ರೇಕ್ಷಕರಿಗೂ ತಲುಪಿಸುವುದು ನಮ್ಮ ಉದ್ದೇಶ. ಈ ಚಿತ್ರವು ಕೇವಲ ಸಿನಿಮಾ ಅಲ್ಲ, ಭಾರತೀಯ ಸಂಸ್ಕೃತಿಯ ಪ್ರತಿನಿಧಿಯಾಗಲಿದೆ” ಎಂದು ಅವರು ತಿಳಿಸಿದರು.

ಆಸ್ಕರ್ ವಿಜೇತರ ಸಂಗೀತ : ಚಿತ್ರಕ್ಕೆ ಜಾಗತಿಕ ಖ್ಯಾತಿಯ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಹಾಗೂ ಭಾರತದ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಬಾಹ್ಯಾಕಾಶ ಸಾಧನೆ ಬೆನ್ನಲ್ಲೇ 56ರ ‘ಯುವಕ’ನಿಗೆ ಮೋದಿ ಟಾಂಗ್!

ದೀಪಾವಳಿಗೆ ಬಿಡುಗಡೆಯಾಗಲಿದೆ ಸಿನಿಮಾ : ರಾಮಾಯಣ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು ಮೊದಲನೆಯದು ದೀಪಾವಳಿ2026 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ , ನಂತರ ಎರಡನೆಯದು ದೀಪಾವಳಿ2027 ರಂದು ಬಿಡುಗಡೆಯಾಗುತ್ತದೆ . ಚಿತ್ರದ ಅಧಿಕೃತ ಟ್ರೇಲರ್ ಜುಲೈ 24ರಂದು ಬಿಡುಗಡೆಯಾಗಲಿದ್ದು, ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಈ ಬೃಹತ್ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್ ಸಂಸ್ಥಾಪಕ ನಮಿತ್ ಮಲ್ಹೋತ್ರಾ ಹಾಗೂ ನಟ ಯಶ್ ನಿರ್ಮಿಸುತ್ತಿದ್ದಾರೆ. ಭಾರತೀಯ ಪೌರಾಣಿಕ ಕಥೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿಶ್ವಮಟ್ಟದಲ್ಲಿ ಪರಿಚಯಿಸುವ ಪ್ರಯತ್ನವಾಗಿ ಈ ಚಿತ್ರವನ್ನು ಚಿತ್ರರಂಗ ಎದುರು ನೋಡುತ್ತಿದೆ.