EPFO ಸದಸ್ಯರಿಗೆ ಸಿಹಿ ಸುದ್ದಿ: ATM, UPI ಮೂಲಕ PF ಹಣ ಹಿಂಪಡೆಯುವ ಸೌಲಭ್ಯ – ಜುಲೈ 15ರೊಳಗೆ ಬಡ್ಡಿ ಜಮಾ
ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಮಹತ್ವದ ಸಿಹಿ ಸುದ್ದಿ ನೀಡಿದೆ. ಶೀಘ್ರದಲ್ಲೇ ಇಪಿಎಫ್ ಸದಸ್ಯರು ತಮ್ಮ ಒಟ್ಟು ಭವಿಷ್ಯ ನಿಧಿ (PF) ಬಾಕಿಯ ಶೇ.75 ರಷ್ಟು ಮೊತ್ತವನ್ನು ಎಟಿಎಂ (ATM) ಮತ್ತು ಯುಪಿಐ (UPI) ಅಪ್ಲಿಕೇಶನ್‌ಗಳ ಮೂಲಕ ನೇರವಾಗಿ ಹಿಂಪಡೆಯಲು ಸಾಧ್ಯವಾಗಲಿದೆ.
ಈ ಮಹತ್ವದ ಮಾಹಿತಿಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಇಪಿಎಫ್‌ಒ ತನ್ನ ಹೊಸ ಕೇಂದ್ರೀಕೃತ ಐಟಿ ಶಕ್ತಗೊಂಡ ಸೇವೆಗಳ (Centralised IT Enabled Services – CITES) ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಇದರ ಮೂಲಕ ಸದಸ್ಯರಿಗೆ ವೇಗವಾದ ಹಾಗೂ ಪಾರದರ್ಶಕ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಬಹಾಮಾಸ್‌ನಲ್ಲಿ ಭೀಕರ ವಿಮಾನ ದುರಂತ: 10 ಮಂದಿ ಸಾವು
ಜುಲೈ 15ರೊಳಗೆ ಬಡ್ಡಿ ಜಮಾ : 2025-26ನೇ ಹಣಕಾಸು ವರ್ಷಕ್ಕೆ ಶೇ.8.25ರ ಬಡ್ಡಿದರವನ್ನು ಸುಮಾರು 34 ಕೋಟಿ ಇಪಿಎಫ್ ಖಾತೆಗಳಿಗೆ ಜುಲೈ 15ರೊಳಗೆ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಇದಕ್ಕಾಗಿ 1.44 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಹೊಸ ಕೇಂದ್ರೀಕೃತ ಡೇಟಾಬೇಸ್ : ಇಪಿಎಫ್‌ಒ ತನ್ನ ಸದಸ್ಯರ ಸಂಪೂರ್ಣ ಡೇಟಾಬೇಸ್ ಅನ್ನು ಹೊಸ ಕೇಂದ್ರೀಕೃತ ವ್ಯವಸ್ಥೆಗೆ ಸ್ಥಳಾಂತರಿಸುವ ಕಾರ್ಯವನ್ನು ಪೂರ್ಣಗೊಳಿಸಿದೆ. ಇದರೊಂದಿಗೆ ಸದಸ್ಯರು ಏಕೀಕೃತ ಸದಸ್ಯ ಪೋರ್ಟಲ್ ಮೂಲಕ ತಮ್ಮ ಸದಸ್ಯತ್ವ ವಿವರಗಳು, ಪಿಎಫ್ ಬ್ಯಾಲೆನ್ಸ್, ಕ್ಲೈಮ್ ಸ್ಥಿತಿ, ಪಿಂಚಣಿ ದಾಖಲೆಗಳು ಹಾಗೂ ಇತರೆ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಲು ಸಾಧ್ಯವಾಗಲಿದೆ.
ಇದನ್ನೂ ಓದಿ: ಯುವತಿಗೆ ಅಶ್ಲೀಲ ಸಂದೇಶ ಆರೋಪ: ಪೊಲೀಸ್ ಕಾನ್ಸ್ಟೇಬಲ್ ಅಮಾನತು
ಕ್ಲೈಮ್ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ : ಹೊಸ CITES ವ್ಯವಸ್ಥೆಯ ಅಡಿಯಲ್ಲಿ ಸದಸ್ಯರ ಹಿಂಪಡೆಯುವಿಕೆ ಅರ್ಜಿಗಳನ್ನು ಸ್ವಯಂಚಾಲಿತವಾಗಿ ಪೂರ್ವ-ಮೌಲ್ಯಮಾಪನ ಮಾಡಲಾಗುತ್ತದೆ. ಸದಸ್ಯರು ಸಲ್ಲಿಸುವ ಅರ್ಜಿಯಲ್ಲಿ ಯಾವುದೇ ದೋಷಗಳಿದ್ದರೆ ಅಥವಾ ಅನುಮತಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಕ್ಲೈಮ್ ಮಾಡಲು ಪ್ರಯತ್ನಿಸಿದರೆ, ವ್ಯವಸ್ಥೆಯೇ ಮುಂಚಿತವಾಗಿ ಮಾಹಿತಿ ನೀಡಲಿದೆ.
ಇದರಿಂದ ಕ್ಲೈಮ್ ತಿರಸ್ಕಾರದ ಪ್ರಮಾಣ ಕಡಿಮೆಯಾಗುವ ಜೊತೆಗೆ ಮೊದಲ ಬಾರಿಗೆ ಸಲ್ಲಿಸಿದ ಅರ್ಜಿಗಳ ಅನುಮೋದನೆ ಪ್ರಮಾಣವೂ ಹೆಚ್ಚಾಗುವ ನಿರೀಕ್ಷೆ ಇದೆ.




















