ಆಧುನಿಕ ಮನೋವಿಜ್ಞಾನಿಗಳ ಪ್ರಕಾರ ಮನಸ್ಸು

0
7

ಅನೇಕ ರೋಗಗಳಲ್ಲಿ ಭಯಾನಕವಾದದ್ದು ಮನೋರೋಗ. ನೂರರಲ್ಲಿ ತೊಂಭತ್ತು ಭಾಗದಷ್ಟು ಜನರನ್ನು ಒಂದಲ್ಲೊಂದು ಬಗೆಯಲ್ಲಿ ಈ ರೋಗವು ಪೀಡಿಸುತ್ತಿರುತ್ತದೆ. ಇದರ ಪರಿಹಾರಕ್ಕಾಗಿ ಯುಗಯುಗಳಿಂದಲೂ ಅನೇಕ ಬಗೆಯ ಪರಿಹಾರೋಪಾಯಗಳನ್ನು ಕಾಣಲು ಪ್ರಯತ್ನಿಸುತ್ತಲೇ ಇದ್ದಾರೆ. ಸಮಗ್ರ ವಿಶ್ವದ ಇತಿಹಾಸವನ್ನು ನೋಡಿದಾಗ ಕೆಲವರು ತಪಸ್ಸಿಗೆ ಶರಣಾಗಿದ್ದಾರೆ.
ಇನ್ನು ಕೆಲವರು ಪೂಜೆ-ಪುನಸ್ಕಾರಗಳಿಗೆ ಮತ್ತು ಕೆಲವರು ಹೋಮ ಹವನಾದಿಗಳಿಗೆ, ಇನ್ನೂ ಕೆಲವರು ಮಾಟ ಮತ್ತು ಮಾಂತ್ರಿಕಶಕ್ತಿ, ಭೂತಪ್ರೇತಗಳ ಆರಾಧನೆ ಇವುಗಳಿಗೆ ಶರಣಾಗತರಾಗಿದ್ದಾರೆ. ಇವುಗಳಿಂದ ಜನಸಾಮಾನ್ಯರಿಗೆ ಅತೀಂದ್ರಿಯ ಶಕ್ತಿಯೆಂದು, ದೈವಿಕ ಶಕ್ತಿಯೆಂದು ನಂಬಿಸಿ ಸಮಸ್ಯೆಗಳನ್ನು ಪರಿಹರಿಸುತ್ತೇವೆಂದು ಹೇಳಿಕೊಳ್ಳುತ್ತಾರೆ. ಮನೋರೋಗದಿಂದ ಬಳಲುತ್ತಿರುವ ಸಾಮಾನ್ಯ ಜನರಿಗೂ ವ್ರತ, ನಮಸ್ಕಾರ, ವಿಧಿ-ವಿಧಾನ, ಬಲಿಗಳು, ದಾನಗಳು, ಪ್ರಸಾದ, ತೀರ್ಥ ಇತ್ಯಾದಿಗಳಲ್ಲಿ ಪಾಲ್ಗೊಳ್ಳುವಂತೆ ಒತ್ತಾಯ ಮಾಡುತ್ತಾರೆ.
ಮೇಲೆ ಹೇಳಿದ ಈ ಯಾವುದೇ ಉಪಾಯಗಳು ಮನೋರೋಗಕ್ಕೆ ಪರಿಹಾರಕವಲ್ಲ. ಅವೆಲ್ಲವೂ ಕೇವಲ ಮನಶಕ್ತಿಯನ್ನು ತುಂಬಿಸಲು ತಾವೇ ಕಂಡುಕೊAಡಿರುವ ಕೆಲವು ಉಪಾಯಗಳಷ್ಟೇ. ನಿಜವಾದ ವಿಚಾರವನ್ನು ಹೇಳಬೇಕೆಂದರೆ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿರುವ ಮನಸ್ಸಿಗೆ ಅಪಾರ ಶಕ್ತಿಯಿದೆ. ಅಂತರಂಗದ ಮನಸ್ಸಿಗೆ ಇರುವಂತಹ ಅದ್ಭುತ ಶಕ್ತಿಯನ್ನು ತಿಳಿಯದ ಪಾಮರರು ಸಂಸಾರದಲ್ಲಿ ಬಳಲುತ್ತಿದ್ದಾರೆ. ಮನಸ್ಸಿನಲ್ಲಿರುವ ಆ ಶಕ್ತಿಯನ್ನು ಪ್ರಚೋದನೆ ಮಾಡಿಸುವುದಷ್ಟೇ ಮೇಲೆ ಹೇಳಿದ ಎಲ್ಲ ಧರ್ಮಗುರುಗಳ ಕೆಲಸ.
ದೇವರು ಎಂಬ ಹೆಸರಿನಿಂದ ಇವರು ಕೇವಲ ಮನಶಕ್ತಿಯನ್ನು ತುಂಬಿಸುತ್ತಾರಷ್ಟೆ. ಮೊಟ್ಟಮೊದಲು ಮನಸ್ಸಿನ ಚಿಕಿತ್ಸಕ ಗುಣವನ್ನು ನೀವು ಕೈವಶಮಾಡಿಕೊಳ್ಳಿರಿ. ಅದನ್ನು ಸಾಧಿಸಿದ ಮೇಲೆ ನಿಮಗೆ ಯಾವ ದೇವರೂ ಬೇಕಾಗುವುದಿಲ್ಲ. ನಿಮ್ಮ ಆಸೆ ಆಕಾಂಕ್ಷೆಗಳು ಏನಾದರೂ ಇರಲಿ, ಅವುಗಳನ್ನೆಲ್ಲಾ ನೀವು ಪಡೆಯಬೇಕೆಂದರೆ ಮನಸ್ಸಿನ ಅಂತರಂಗದಲ್ಲಿ ಶರಣಾಗತರಾಗಿರಿ, ಒಳಮನಸ್ಸನ್ನು ಮುಕ್ತವಾಗಿ ಪ್ರಶಂಸಿಸಿ ಅದಕ್ಕೆ ಆತ್ಮಾರ್ಪಣೆ ಮಾಡಿಕೊಳ್ಳಿರಿ.

Previous articleನೂತನ ಸಂಸತ್ ಭವನ ಶುಭಾರಂಭದ ಬಿಕ್ಕಟ್ಟು
Next articleವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ತಪ್ಪಿದ ದುರಂತ