SK Home Ad
Home ಸುದ್ದಿ ಕೋಟಿಗೊಬ್ಬ ಅಂದ್ರೆ ಇವ್ರೇ: 100 ಅಡಿ ಉದ್ದದ ನೋಟಿನ ಹಾರ ಹಾಕಿ ಅಚ್ಚರಿಗೊಳಿಸಿದ ಸೋದರ ಮಾವ

ಕೋಟಿಗೊಬ್ಬ ಅಂದ್ರೆ ಇವ್ರೇ: 100 ಅಡಿ ಉದ್ದದ ನೋಟಿನ ಹಾರ ಹಾಕಿ ಅಚ್ಚರಿಗೊಳಿಸಿದ ಸೋದರ ಮಾವ

0
9

ಮಥುರಾ: ಮದುವೆ ಸಮಾರಂಭಗಳಲ್ಲಿ ವರನಿಗೆ ಒಡವೆ, ನೋಟಿನ ಹಾರ ಹಾಕುವುದು ಸಾಮಾನ್ಯ ಆದರೆ,  ವಿವಾಹ ಒಂದರಲ್ಲಿ  ಇಬ್ಬರು ವರರಿಗೆ  ಕೋಟಿ ರೂ. ಮೌಲ್ಯದ ಹಾರ ಹಾಕಿ ಉತ್ತರ ಪ್ರದೇಶದ ಮಥುರಾದಲ್ಲಿ ಮದುವೆಯನ್ನು ಜನರಿಗೆ ಅಚ್ಚರಿಯಾಗುವ ಹಾಗೆ ಮಾಡಲಾಗಿದೆ.

ಮಥುರಾ ಜಿಲ್ಲೆಯ ನಗ್ಲಾ ಪೊಂಡಾ ಗ್ರಾಮದಲ್ಲಿ ಶನಿವಾರ ಸೋದರ ಸಂಬಂಧಿಗಳಾದ ಪ್ರಶಾಂತ್‌ ಮತ್ತಯ ಕಾನ್ಹಾ ರಾಘವ  ಅವರ ಮದುವೆ ಗೋವರ್ಥನದ  ಮುಡಸ್ಸೆರಾಸ್‌ ಇಬ್ಬರ ಯುವತಿಯೊಂದಿಗೆ ನಿಶ್ಚಿತವಾಗಿತ್ತು. ಮದುವೆಯ ಮೆರವಣಿಗೆಯ ಸಂದರ್ಭದಲ್ಲಿ  ವರರ ಸೋದರ ಮಾವ ಭರ್ಜರಿ ಉಡುಗರೆಯನ್ನು ನೀಡಿದ್ದಾರೆ.

ಸಂಪೂರ್ಣವಾಗಿ 500 ರೂ. ಮುಖಬೆಲೆಯ ನೋಟುಗಳಿಂದ ತಯಾರಿಸಲಾದ ಈ ಎರಡು ಹಾರಗಳು ಸುಮಾರು 100 ಅಡಿ ಉದ್ದವಿದ್ದವು. ಒಂದೊಂದು ಹಾರದಲ್ಲೂ ಕೋಟಿ ರೂ. ಮೌಲ್ಯದ ನೋಟುಗಳನ್ನು ಪೂಣಿಸಲಾಗಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಈ ಅಸಾಮಾನ್ಯ ವಿವಾಹ ಕಾರ್ಯಕ್ರಮವು ಮದುವೆಗೆ ಬಂದ ಸಂಬಂಧಿಕರಿಗೆ  ಮತ್ತು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿದೆ. ಹಲಾವರು ಜನರು ಈ ಕ್ಷಣವನ್ನು ತಮ್ಮ ಮೊಬೈಲ್‌  ಫೋನ್‌ ಗಳಲ್ಲಿ ರೆಕಾರ್ಡ್‌ ಮಾಡಿಕೊಂಡರು. ಮೆರವಣಿಗೆಯ ವಿಡಿಯೋಗಳು ಅಂದಿನಿಂದ   ಸಾಮಾಜಿಕ ಜಾಲತಾಣದಲ್ಲಿ ವೈರಲ್‌  ಆಗಿವೆ.