Home Advertisement
Home ಕ್ರೀಡೆ T20 world cup: ಭಾರತ ಗೆದ್ದರಷ್ಟೇ ಸೆಮೀಸ್ ಕನಸು ಜೀವಂತ

T20 world cup: ಭಾರತ ಗೆದ್ದರಷ್ಟೇ ಸೆಮೀಸ್ ಕನಸು ಜೀವಂತ

0
75

ಚೆನ್ನೈ: ಹಾಲಿ ಚಾಂಪಿಯನ್ಸ್ ಎಂಬ ಪಟ್ಟ ಒಂದೆಡೆ, ಇನ್ನೊಂದೆಡೆ ಸ್ವದೇಶದಲ್ಲೇ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಿರುವ ಕೀರ್ತಿ. ಆದ್ರೆ, ಈ ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ ತಲುಪುವ ಸಾಧ್ಯತೆಗಳು ಕ್ಷೀಣಿಸುತ್ತಿರುವ ಬೆನ್ನಲ್ಲೇ, ಇಂದು ಇದೇ ವಿಶ್ವಕಪ್‌ನಲ್ಲಿ 2 ಮಹತ್ವದ ಪಂದ್ಯಗಳು ನಡೆಯಲಿವೆ. ಸೂಪರ್ 8ರ ಹಂತದ ಮೊದಲನೇ ಗುಂಪಿನಲ್ಲಿ ಕಾಣಿಸಿಕೊಂಡಿರುವ ನಾಲ್ಕು ಟೀಮ್‌ಗಳೂ ಇಂದು ಅಗ್ನಿಪರೀಕ್ಷೆಗೆ ಇಳಿಯುತ್ತಿವೆ.

ಮೊದಲ ಗುಂಪಿನಲ್ಲಿರುವ ಜಿಂಬಾಬ್ವೆಗೂ ಸೆಮಿಫೈನಲ್ ತಲುಪುವ ಅವಕಾಶ ಇನ್ನೂ ಸಂಪೂರ್ಣವಾಗಿ ಮುಚ್ಚಿಲ್ಲ. ಈ ಪೈಕಿ ಯಾವ ತಂಡವಾದರೂ ಮುಂದಿನ ಹಂತ ತಲುಪಬಹುದು. ಆದ್ರೆ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ಹೆಚ್ಚಿನ ಅವಕಾಶವಿದ್ದು, ಇಂದು ಈ ಇಬ್ಬರೇ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಈ ಇಬ್ಬರ ನಡುವಿನ ಪಂದ್ಯದ ಫಲಿತಾಂಶವೇ ಇಂದು ರಾತ್ರಿ ನಡೆಯುವ ಭಾರತ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯದ ಭವಿಷ್ಯ ಬರೆಯಲಿದೆ.

ಸದ್ಯ ಈಗ ಟೀಮ್ ಇಂಡಿಯಾ ಸೂಪರ್ 8ರ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲಿನ ಪರಿಣಾಮವಿದು. ಈಗಾಗಲೇ ರನ್‌ರೇಟ್‌ನಲ್ಲಿ ಹಿಂದೆ ಬಿದ್ದಿರುವ ಸೂರ್ಯ ಪಡೆ, ಇಂದು ಬೃಹತ್ ಗೆಲುವು ದಾಖಲಿಸಿದರೂ, ಸೆಮಿಸ್ ಹಾದಿಯಿಂದ ಹೊರ ಬೀಳುವ ಸಾಧ್ಯತೆಗಳಿವೆ. ಹಾಗಾಗಿ, ಇಂದು ಮೊದಲ ಗುಂಪಿನ ಸೆಮಿಸ್ ತಂಡಗಳ ಭವಿಷ್ಯ ಇಂದು ಅಂತಿಮಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.

ಇದನ್ನೂ ಓದಿ: ಅಂಕಣ ಬರಹ: ಆರೋಪಕ್ಕೆಲ್ಲ `ಷಡ್ಯಂತ್ರ – ಜಾತಿ’ ಗಳೇ ಗುರಾಣಿ!

ಜಿಂಬಾಬ್ವೆ ವಿರುದ್ಧ ಬೇಕು ದೊಡ್ಡ ಜಯ: ಟೀಮ್ ಇಂಡಿಯಾ ಪಾಲಿಗೆ ಇಂದು ಹೆಚ್ಚು ತಮ್ಮನ್ನ ತಾವು ನಂಬಿಕೊಳ್ಳುವುದಕ್ಕಿಂತ, ದಕ್ಷಿಣ ಆಫ್ರಿಕಾ ತಂಡವನ್ನು ನಂಬಿಕೊಳ್ಳಬೇಕಾಗಿದೆ. ಏಕೆಂದ್ರೆ, ಇಂದು ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಸುಲಭ ಜಯಗಳಿಸಿದರೂ, ಭಾರತಕ್ಕೆ ಸೆಮಿಫೈನಲ್‌ಗೆ ತಲುಪಲು ಅವಕಾಶಗಳಿರಲಿವೆ. ಹಾಗಾಗಿ, ಇಂದು ಟೀಮ್ ಇಂಡಿಯಾ ಅಭಿಮಾನಿಗಳೆಲ್ಲಾ ಇಂದು ಮಧ್ಯಾಹ್ನ ಆರಂಭವಾಗುವ ಪಂದ್ಯದ ಮೇಲೆಯೇ ಗಮನವಿಟ್ಟಿದ್ದಾರೆ.

ಒಮ್ಮೆ ವೆಸ್ಟ್ ಇಂಡೀಸ್ ಇಂದು ದಕ್ಷಿಣ ಆಫ್ರಿಕಾ ಎದುರು ಸೋಲುಂಡರೂ, ಭಾರತ ಸೆಮಿಫೈನಲ್‌ಗೆ ತಲುಪುವ ಹಾದಿ ಸುಲಭವಾಗಿರುವುದಿಲ್ಲ. ರಾತ್ರಿ ನಡೆಯುವ ಜಿಂಬಾಬ್ವೆ ಎದುರು ಕನಿಷ್ಠವೆಂದರೂ 80 ರನ್‌ಗಳ ಅಂತರದಿಂದ ಪಂದ್ಯವನ್ನು ತನ್ನದಾಗಿಸಿಕೊಳ್ಳಬೇಕಾಗಬಹುದು. ಈಗಾಗಲೇ ಲೀಗ್ ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸಿ ಟೂರ್ನಿಯಿಂದ ಹೊರಹಾಕಿದ ಜಿಂಬಾಬ್ವೆ, ಶ್ರೀಲಂಕಾ ತಂಡವನ್ನು ಮಣಿಸಿತ್ತು. ಇದೇ ಹಾದಿಯಲ್ಲಿ ಈಗ ಭಾರತ ತಂಡವನ್ನು ಮಣಿಸಿದರೆ, ಭಾರತ ಟೂರ್ನಿಯಿಂದಲೇ ಹೊರಬೀಳುವುದು ಖಚಿತ.

ಸಂಜು ಸ್ಯಾಮ್ಸನ್‌ಗೆ ಅವಕಾಶ: ಭಾರತ ತಂಡದಲ್ಲಿ ಇಂದು ಬದಲಾವಣೆ ಖಚಿತಗೊಂಡಿದೆ.ಅದರಲ್ಲೂ ನಿರೀಕ್ಷಿತ ಪ್ರದರ್ಶನ ತೋರದ ಅಭಿಷೇಕ್ ಶರ್ಮಾ ಜಾಗದಲ್ಲಿ ಸ್ಯಾಮ್ಸನ್ ಆಡುವುದು ಖಚಿತಗೊಂಡಿದೆ. ಅದೇ ರೀತಿ ಆಲ್‌ರೌಂಡರ್ ಅಕ್ಷರ್ ಪಟೇಲ್ ಆಗಮನವೂ ಖಚಿತಗೊಂಡಿದೆ. ಅಕ್ಷರ್ ಒಳ ಬಂದರೆ, ಬಹುತೇಕ ರಿಂಕು ಸಿಂಗ್‌ರನ್ನು ಕೂರಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಹಿಂದೂ ಸಂಘಟನೆಗಳ ಪ್ರತಿಭಟನೆ: ಲಾಕ್‌ಡೌನ್ ಮಾದರಿಯಲ್ಲಿ ಭದ್ರತೆ

ರನ್‌ರೇಟ್ ಪ್ರಮುಖ: ಸದ್ಯ ಮೊದಲನೇ ಗುಂಪಿನಲ್ಲಿ ನಾಲ್ಕೂ ತಂಡಗಳು ರನ್‌ರೇಟ್ ಕಾಪಾಡಿಕೊಳ್ಳಬೇಕು. ಒಮ್ಮೆ ದಕ್ಷಿಣ ಆಫ್ರಿಕಾ ಇಂದು ಗೆದ್ದರೆ, ಉಳಿದ ವೆಸ್ಟ್ಇಂಡೀಸ್, ಭಾರತ ಹಾಗೂ ಜಿಂಬಾಬ್ವೆಗೆ ರನ್‌ರೇಟ್ ಪ್ರಮುಖವಾಗಬಹುದು. ಅದರಲ್ಲೂ ಭಾರತ, ವೆಸ್ಟ್ಇಂಡೀಸ್‌ಗೆ ನಿರ್ಣಾಯಕವಾಗಲಿದೆ. ಆದ್ರೆ, ಇಂದು ಜಿಂಬಾಬ್ವೆ ವಿರುದ್ಧ ಭಾರತ 84 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿ, ವೆಸ್ಟ್ಇಂಡೀಸ್ ವಿರುದ್ಧ ಗೆದ್ದರೂ, ದಕ್ಷಿಣ ಆಫ್ರಿಕಾ ಜೊತೆ ರನ್‌ರೇಟ್‌ನಲ್ಲಿ ಕಿತ್ತಾಡಿಕೊಳ್ಳಬೇಕು.

ಹೀಗಿವೆ ಸಾಧ್ಯತೆಗಳು
ಸಾಧ್ಯತೆ 1: ಇಂದಿನ ಪಂದ್ಯದಲ್ಲಿ ಭಾರತ ಜಿಂಬಾಬ್ವೆ ವಿರುದ್ಧ 180 ರನ್ ಗಳಿಸಿ 60 ರನ್‌ಗಳಿಂದ ಗೆದ್ದರೂ, ಒಮ್ಮೆ ವೆಸ್ಟ್ ಇಂಡೀಸ್ ಎದುರು ಹರಿಣಗಳು ಸೋತರೂ, ಜಿಂಬಾಬ್ವೆ ವಿರುದ್ಧ ಗೆದ್ದರೆ, ಕೊನೆ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ 64 ರನ್‌ಗಳಿಂದ ಗೆಲ್ಲಬೇಕಾಗುತ್ತದೆ.

ಸಾಧ್ಯತೆ 2: ಒಮ್ಮೆ ವೆಸ್ಟ್ ಇಂಡೀಸ್ ಎದುರು ದಕ್ಷಿಣ ಆಫ್ರಿಕಾ 40 ರನ್‌ಗಳ ಅಂತರದಲ್ಲಿ ಸೋತು, ಜಿಂಬಾಬ್ವೆ ವಿರುದ್ಧ ಗೆದ್ದರೆ, ಭಾರತ ವೆಸ್ಟ್ ಇಂಡೀಸ್ ವಿರುದ್ಧ 54 ರನ್‌ಗಳಿಂದ ಗೆದ್ದು, ದಕ್ಷಿಣ ಆಫ್ರಿಕಾ ಸ್ಥಾನವನ್ನು ಆಕ್ರಮಿಸಿ ಸೆಮೀಸ್‌ಗೆ ತೆರಳಬಹುದು.

ಭಾರತದ ಸೆಮೀಸ್ ಹಾದಿ?
ವಿಂಡೀಸ್ ಗೆದ್ದರೆ ಭಾರತ ಸೆಮಿಸ್ ಆಸೆಗೆ ತಣ್ಣೀರು
ದಕ್ಷಿಣ ಆಫ್ರಿಕಾ ಗೆದ್ದರೆ ಭಾರತವೂ ಗೆಲ್ಲಲೇಬೇಕು
ಜಿಂಬಾಬ್ವೆ ಗೆದ್ದರೆ ಹರಿಣಗಳ ವಿರುದ್ಧ ಕೊನೆ ಪಂದ್ಯಕ್ಕೆ ಮಹತ್ವ
ವಿಂಡೀಸ್ ಗೆದ್ದರೆ ದಕ್ಷಿಣ ಆಫ್ರಿಕಾ ಜಿಂಬಾಬ್ವೆ ವಿರುದ್ಧ ಸೋಲಬೇಕು
ಉಳಿದೆರಡು ಪಂದ್ಯಗಳನ್ನು ಭಾರತ ಗೆದ್ದರೂ ಸುಲಭವಲ್ಲ.

Previous articleಹಿಂದೂ ಸಂಘಟನೆಗಳ ಪ್ರತಿಭಟನೆ: ಲಾಕ್‌ಡೌನ್ ಮಾದರಿಯಲ್ಲಿ ಭದ್ರತೆ
Next articleದಾಂಪತ್ಯ ಜೀವನಕ್ಕೆ ಕಾಲಿಟ್ಟ ʻವಿರೋಶ್‌ʼ ಜೋಡಿ