Home Advertisement
Home ಕ್ರೀಡೆ T20 World cup: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

T20 World cup: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

0
28

ಕೊಲಂಬೋ:  ಇಶಾನ್‌ ಕಿಶನ್ ಅಬ್ಬರದ ಬ್ಯಾಟಿಂಗ್‌ ಮತ್ತು ಭಾರತದ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದಾಗಿ ಪಾಕಿಸ್ತಾನದ ವಿರುದ್ಧ ಭಾರತ 61 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಿ20 ವಿಶ್ವಕಪ್‌ನ ಮೂರನೇ ಲೀಗ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟಿಂಗ್‌ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 175 ರನ್‌ ಗಳಿಸಿತು. ಆದರೆ 176 ರನ್‌ಗಳ ಗುರಿ ಮುಟ್ಟಲಾಗದ ಪಾಕ್‌ 18 ಓವರಗಳಲ್ಲಿಯೇ ಕೇವಲ 114 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಆರಂಭದಲ್ಲಿಯೇ ಶಾಕ್‌ ನೀಡಿದ ಪಾಕ್:‌ ಆರಂಭದಲ್ಲಿಯೇ ಅಭಿಷೇಕ್‌ ಶರ್ಮಾರನ್ನು ಸಲ್ಮಾನ್ ಅಘಾ ಶೂನ್ಯಕ್ಕೆ ಔಟ್‌ ಮಾಡುವ ಮೂಲಕ ಆಂಭಿಕ ಆಘಾತವನ್ನು ನೀಡಿದರಾದರೂ ಬಳಿಕ ಇಶಾನ್‌ ಕಿಶನ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಬೌಲರ್‌ಗಳನ್ನು ದಂಡಿಸಿದರು.

Previous articleಆತ್ಮಲಿಂಗ ದರ್ಶನಕ್ಕೆ ಬಂದ ಗೋವಾ ಯಾತ್ರಿಕ ಹೃದಯಾಘಾತದಿಂದ ಸಾವು
Next articleಬಾಂಗ್ಲಾದೇಶ ಪ್ರಧಾನಿ ತಾರಿಖ್ ಪದಗ್ರಹಣಕ್ಕೆ ಮೋದಿ ಹೋಗಲ್ಲ