Home Advertisement
Home ಕ್ರೀಡೆ IPL 2026: ಕೋಲ್ಕತಾ ವಿರುದ್ಧ ಸನ್‌ರೈಸರ್ಸ್‌ಗೆ ಭರ್ಜರಿ ಜಯ

IPL 2026: ಕೋಲ್ಕತಾ ವಿರುದ್ಧ ಸನ್‌ರೈಸರ್ಸ್‌ಗೆ ಭರ್ಜರಿ ಜಯ

0
54

ಕೋಲ್ಕತಾ: ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದಾಗಿ ಸನ್‌ರೈಸರ್ಸ್ ಹೈದ್ರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ 65 ರನ್‌ ಭರ್ಜರಿ ಜಯ ದಾಖಲಿಸಿದೆ.

19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಹೈದ್ರಾಬಾದ್ ಗೆಲುವು ಸಾಧಿಸಿತು. ಕೋಲ್ಕತಾ ನೈಟ್ ರೈಡರ್ಸ್ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿತ್ತು.

ಮೊದಲ ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದ್ರಾಬಾದ್ ಬೃಹತ್ ಮೊತ್ತ ಪೇರಿಸಿತು. ಇನ್ನಿಂಗ್ಸ್ ಆರಂಭಿಸಿದ ಸ್ಫೋಟಕ ಜೋಡಿ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್, ಈ ಬಾರಿ ಪವರ್‌ಪ್ಲೇನಲ್ಲೇ ಬೌಂಡರಿ-ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ಮೊದಲ ಓವರ್‌ನಿಂದಲೇ ಕೆಕೆಆರ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಕೇವಲ 5.4 ಓವರ್‌ಗಳಲ್ಲೇ 82 ರನ್‌ಗಳನ್ನು ಚಚ್ಚಿದರು.

ಟ್ರಾವಿಸ್ ಹೆಡ್ 21 ಎಸೆತಗಳಲ್ಲೇ 46 ರನ್‌ಗಳಿಸಿ ಕಾರ್ತಿಕ್ ತ್ಯಾಗಿ ಬೌಲಿಂಗ್‌ನಲ್ಲಿ ಔಟಾಗುವ ಮೂಲಕ ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರು. ಇದಾದ ಮೇಲೆ ಅಭಿಷೇಕ್ ಕೂಡ ಇಶಾನ್ ಜೊತೆಗೂಡಿ ತಂಡವನ್ನು ಬೇಗನೇ ನೂರರ ಗಡಿ ದಾಟಿಸಿದರೂ, 14 ರನ್‌ಗಳಿಸಿದ ಇಶನ್ ಔಟಾದ ಬೆನ್ನಲ್ಲೇ 48 ರನ್‌ಗಳಿಸಿ ಅಭಿಷೇಕ್ ಔಟಾದರು.

ಮುಜರ್ಬಾನಿ ಎಸೆದ ಒಂದೇ ಓವರ್‌ನಲ್ಲಿ 2 ವಿಕೆಟ್‌ಗಳು ಉರುಳಿದವು. ಈ ವೇಳೆ 5ನೇ ವಿಕೆಟ್‌ಗೆ ಜೊತೆಯಾದ ಹೆನ್ರಿಕ್ ಕ್ಲಾಸನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಂಡವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಈ ಜೋಡಿ 53 ಎಸೆತಗಳಲ್ಲಿ 82 ರನ್‌ಗಳನ್ನು ಕಲೆ ಹಾಕಿದರು. ನಿತೀಶ್ ಕುಮಾರ್ ರೆಡ್ಡಿ, 39 ರನ್‌ಗಳಿಸಿ ಸಮಾಧಾನ ಪಟ್ಟರು. ಕ್ಲಾಸನ್ ಅರ್ಧಶತಕ ಬಾರಿಸಿ ತಂಡವನ್ನು 226ರವರೆಗೆ ಕರೆದೊಯ್ದರು.

227 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ಫಿನ್ ಅಲೆನ್ ಕೇವಲ 7 ಎಸೆತಗಳಲ್ಲಿ 28 ರನ್‌ ಗಳಸಿ ಅಬ್ಬರಿಸಿದರಾದೂ ಬಹುಬೇಗನೆ ಪೆವಿಲಿಯನ್‌ಗೆ ಮರಳಿದರು.

ಎರಡನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ರಘುವಂಶಿ ಕೂಡ 29 ಎಸೆತಗಳಲ್ಲಿ 52 ರನ್‌ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿರುವಾಗಲೇ ಅನಗತ್ಯವಾಗಿ ರನ್‌ ಕದಿಯಲು ಹೋಗಿ ಔಟಾದರು.

ಇದರ ಮಧ್ಯೆ ಅಜಿಂಕ್ಯಾ ರಹಾನೆ ಕೇವಲ 8 ರನ್‌ಗಳಷ್ಟೇ ಗಳಿಸಿ ಹೊರನಡೆದರು. ಆದರೆ ಇನ್ನೊಂದು ತುದಿಯಲ್ಲಿ ರಿಂಕು ಸಿಂಗ್‌ 35 ರನ್‌ ಗಳಿಸುರಿವುದನ್ನು ಬಿಟ್ಟರೆ ಇನ್ನುಳಿದ ಯಾವ ಆಟಗಾರರ ಗಟ್ಟಿಯಾಗಿ ನಿಲ್ಲದ ಕಾರಣ ಕೋಲ್ಕತ್ತಾ ಕೇವಲ 16 ಓವರ್‌ಗಳಲ್ಲಿ 161 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಸೋಲೊಪ್ಪಿಕೊಂಡಿತು.