Home Advertisement
Home ಕ್ರೀಡೆ CSKಗೆ ‘ತಲಾ ಬಲ’; 2 ವಾರದ ಬಳಿಕ ಮೈದಾನಕ್ಕಿಳಿಯಲಿದ್ದಾರೆ ಧೋನಿ! SRHಗೆ ಶುರುವಾಯ್ತು ನಡುಕ

CSKಗೆ ‘ತಲಾ ಬಲ’; 2 ವಾರದ ಬಳಿಕ ಮೈದಾನಕ್ಕಿಳಿಯಲಿದ್ದಾರೆ ಧೋನಿ! SRHಗೆ ಶುರುವಾಯ್ತು ನಡುಕ

0
56

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಎಂ.ಎಸ್. ಧೋನಿ ಅವರದ್ದೇ ಸದ್ದು. ಹಳದಿ ಜೆರ್ಸಿಯಲ್ಲಿ ಮಿಂಚುವ ‘ತಲಾ’ ಧೋನಿ ಸಿಎಸ್‌ಕೆ ತಂಡದ ಬಸ್ ಹತ್ತುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಇದಕ್ಕೆ ಮುಖ್ಯ ಕಾರಣ ಶನಿವಾರ ಅಂದರೆ ಏಪ್ರಿಲ್ 18 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿರುವ ಬಿಗ್ ಫೈಟ್.

ಈ ಪಂದ್ಯಕ್ಕಾಗಿ ಧೋನಿ ಈಗಾಗಲೇ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ವಿಚಾರವನ್ನು ಸಿಎಸ್‌ಕೆ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಧೋನಿ ಮೈದಾನಕ್ಕಿಳಿಯುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಐಪಿಎಲ್ 2026ರ ಆರಂಭಕ್ಕೂ ಮುನ್ನ ಧೋನಿ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಸಿಕ್ಕಿತ್ತು. ಕಾಲಿನ ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ಟೂರ್ನಿಯ ಮೊದಲ ಎರಡು ವಾರಗಳ ಕಾಲ ಧೋನಿ ಆಡುವುದಿಲ್ಲ ಎಂದು ಮ್ಯಾನೇಜ್‌ಮೆಂಟ್ ಸ್ಪಷ್ಟಪಡಿಸಿತ್ತು.

ಇದೀಗ ಆ ಎರಡು ವಾರಗಳ ಅವಧಿ ಮುಗಿದಿದ್ದು, ತಂಡದ ಜೊತೆ ಧೋನಿ ಪ್ರಯಾಣಿಸುತ್ತಿರುವುದು ಅವರ ಕಮ್‌ಬ್ಯಾಕ್ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ ತವರಿನ ನೆಲದಲ್ಲಿ ಸತತ ಗೆಲುವು ಸಾಧಿಸಿರುವ ಚೆನ್ನೈ ತಂಡಕ್ಕೆ ಧೋನಿ ಅವರ ಎಂಟ್ರಿ ಆನೆ ಬಲ ತರುವುದರಲ್ಲಿ ಸಂಶಯವಿಲ್ಲ. ಆದರೂ ಅಂತಿಮವಾಗಿ ಅವರು ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರಾ ಅಥವಾ ಕೇವಲ ಮಾರ್ಗದರ್ಶಕರಾಗಿ ಇರುತ್ತಾರಾ ಎನ್ನುವುದಕ್ಕೆ ಶನಿವಾರ ಸಂಜೆಯವರೆಗೆ ಕಾಯಲೇಬೇಕಿದೆ. ಹೈದರಾಬಾದ್ ನೆಲದಲ್ಲಿ ಧೋನಿ ಧಮಾಕಾ ನೋಡಲು ಇಡೀ ಕ್ರಿಕೆಟ್ ಲೋಕ ಕಾತರದಿಂದ ಕಾಯುತ್ತಿದೆ.