ಚಂಡೀಗಢ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಪಂಜಾಬ್ ಕಿಂಗ್ಸ್ ಎದುರು ಸವಾಲಿನ ಮೊತ್ತ ಕಲೆ ಹಾಕಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.
ಆರಂಭದಲ್ಲಿಯೇ ಸಾಯಿ ಸುದರ್ಶನ (13) ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ಶುಭಮನ್ ಗಿಲ್ (39) ಮತ್ತು ಜೋಸ್ ಬಟ್ಲರ್ (38) ಇಬ್ಬರ ಜೋಡಿ 46 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಉತ್ತಮ ಸ್ಥಿತಿಯತ್ತ ತಂದಿತು.
9.2 ಓವರ್‌ಗಳಲ್ಲಿ 83 ರನ್‌ಗಳಿಸಿದ್ದ ಗುಜರಾತ್‌ಗೆ ಯುಜುವೇಂದ್ರ ಚಾಹಲ್ ಶಾಕ್ ನೀಡಿದರು. ನಾಯಕ ಗಿಲ್ ಅವರನ್ನು ಪೆವಿಲಿಯನ್ ಸೇರಿಸುವಲ್ಲಿ ಯಶಸ್ವಿಯಾದರು. ಇವರ ಹಿಂದೆಯೇ 36 ರನ್ ಜತೆಯಾಟ ನಡೆಸಿದ ಗ್ಲೆನ್ ಫಿಲಿಪ್ಸ್ 25 ರನ್ ಗಳಿಸಿ ವೈಶಾಕ್ ವಿಜಯಕುಮಾರಗೆ ವಿಕೆಟ್ ಒಪ್ಪಿಸಿದರು.
ಜೋಸ್ ಬಟ್ಲರ್ ಕೂಡಾವರ ಹಿಂದೆಯೇ ತಮ್ಮ ಆಟವನ್ನು ಮುಗಿಸಿದರು. ವಾಷಿಂಗ್ಟನ್ ಸುಂದರ್ ಕೇವಲ 18 ರನ್ ಕಾಣಿಕೆ ನೀಡಿ ಪೆವಿಲಿಯನ್ ಕಡೆಗೆ ಸಾಗಿದರು.
ಪಂಜಾಬ್ ಕಿಂಗ್ಸ್ ಪರ ವೈಶಾಕ್ ವಿಜಯಕುಮಾರ್ 34ಕ್ಕೆ 3 ವಿಕೆಟ್ ಪಡೆದರೆ, ಯುಜುವೇಂದ್ರ ಚಾಹಲ್ 28ಕ್ಕೆ 2, ಮಾರ್ಕೊ ಜಾನ್ಸೆನ್ 20ಕ್ಕೆ 1 ವಿಕೆಟ್ ಪಡೆದರು.























