Home Advertisement
Home ಕ್ರೀಡೆ IPL 2026: ಎರಡನೇ ಹಂತದ ವೇಳಾಪಟ್ಟಿ ಪ್ರಕಟ

IPL 2026: ಎರಡನೇ ಹಂತದ ವೇಳಾಪಟ್ಟಿ ಪ್ರಕಟ

0
26

ನವದೆಹಲಿ: 19ನೇ ಆವೃತ್ತಿಯ ಐಪಿಎಲ್-2026ರ ಎರಡನೇ ಹಂತದ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಪ್ರಕಟಿಸಿದೆ.

ಏಪ್ರಿಲ್ 13 ರಿಂದ ಮೇ 24ರ ವರೆಗಿನ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಈ ಮೂಲಕ ಒಟ್ಟು 70 ಪಂದ್ಯಗಳ ದಿನಾಂಕಗಳು ಸ್ಪಷ್ಟವಾಗಿವೆ.

ಈ ಮೊದಲು ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಹಿನ್ನಲೆ 16 ದಿನಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಸದ್ಯ ಎರಡನೇ ಹಂತದ ವೇಳಾಪಟ್ಟಿಯಲ್ಲಿ ಪ್ಲೇ-ಆಫ್‌ ಮತ್ತು ಫೈನಲ್‌ ಪಂದ್ಯ ಹೊರತುಪಡಿಸಿ ಎಲ್ಲ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.

ಒಟ್ಟಾರೆ ಈ ಬಾರಿಯ ಐಪಿಎಲ್‌ ಪಂದ್ಯಗಳು ದೇಶದ 12 ನಗರಗಳಲ್ಲಿ ನಡೆಯಲಿದ್ದು, 12 ಡಬಲ್ ಹೆಡರ್‌ಗಳನ್ನು(ದಿನಕ್ಕೆ 2ಪಂದ್ಯ) ಒಳಗೊಂಡಿದೆ.