Home Advertisement
Home ಕ್ರೀಡೆ IPL 2026: ಡೆಲ್ಲಿ – ಲಖನೌ ಇಬ್ಬರಿಗೂ ಮೊದಲ ಪರೀಕ್ಷೆ

IPL 2026: ಡೆಲ್ಲಿ – ಲಖನೌ ಇಬ್ಬರಿಗೂ ಮೊದಲ ಪರೀಕ್ಷೆ

0
12

ಲಖನೌ: 2025ರ ಐಪಿಎಲ್‌ನಲ್ಲಿ ಪ್ಲೇ ಆಫ್ ಸನಿಹದಲ್ಲಿ ಎಡವಿದ ಎರಡು ತಂಡಗಳು ಇವು. ಒಂದು ಅಕ್ಷರ್ ಪಟೇಲ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಂದು ರಿಷಬ್ ಪಂತ್ ಸಾರಥ್ಯದ ಲಖನೌ ಸೂಪರ್ ಜೈಂಟ್ಸ್. ಇಂದು ಈ ಎರಡು ತಂಡಗಳು ಈ ಬಾರಿಯ ಆವೃತ್ತಿಯಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಗೊಳ್ಳುತ್ತಿವೆ.

ತಮ್ಮ ಸೀಸನ್‌ನ ಆರಂಭಿಕ ಪಂದ್ಯಕ್ಕೂ ಮುನ್ನ, ಎಲ್‌ಎಸ್‌ಜಿ ವನಿಂದು ಹಸರಂಗ ಅವರನ್ನು 2 ಕೋಟಿಗೆ ಖರೀದಿಸಿತ್ತು. ಆದ್ರೆ, ಶ್ರೀಲಂಕಾ ಕ್ರಿಕೆಟ್‌ನಿಂದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗಿರುವುದರಿಂದ ಆಲ್‌ರೌಂಡರ್ ಇನ್ನೂ ಭಾರತಕ್ಕೆ ಕಾಲಿಟ್ಟಿಲ್ಲ. 11.75 ಕೋಟಿಗೆ ಡಿಸಿ ಉಳಿಸಿಕೊಂಡಿದ್ದ ಮಿಚೆಲ್ ಸ್ಟಾರ್ಕ್, ಭುಜ ಮತ್ತು ಮೊಣಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ಋತುವಿನ ಆರಂಭದಲ್ಲಿ ಆಡುವುದಿಲ್ಲ. ಹಾಗಾಗಿ, ಉಭಯ ತಂಡಗಳಲ್ಲಿ ಪ್ರಮುಖರಿಬ್ಬರು ಇಂದು ಕಾಣಿಸಿಕೊಳ್ಳುತ್ತಿಲ್ಲ.

ಸದ್ಯ ಹಸರಂಗ ಬದಲಿಗೆ ವೇಗಿ ಅನ್ರಿಚ್ ನಾರ್ಟ್ಜೆ ಅವರನ್ನು ಆಡಿಸುವ ಸಾಧ್ಯತೆಗಳಿವೆ. ಅದರಲ್ಲೂ ಲಖನೌನಲ್ಲಿ ಇದು ಕೆಂಪು ಮಣ್ಣಿನ ಪಿಚ್ ಆಗಿರುವುದರಿಂದ, ತಮ್ಮ ವಿದೇಶಿ ಬ್ಯಾಟ್ಸ್‌ಮನ್‌ಗಳಾದ ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್ ಅಥವಾ ನಿಕೋಲಸ್ ಪೂರನ್ ಅವರ ಮೇಲೆ ಹೆಚ್ಚು ಅವಲಂಬಿತರಾಗುವ ಸಾಧ್ಯತೆ ಕಡಿಮೆ. ಕಳೆದ ಐಪಿಎಲ್‌ನಲ್ಲಿ ಇಬ್ಬರೂ 400ಕ್ಕೂ ಹೆಚ್ಚು ರನ್ ಗಳಿಸಿದ್ದರೆ, ಎಲ್‌ಎಸ್‌ಜಿಯ ಎಲ್ಲಾ ಭಾರತೀಯ ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ 835 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ.

ರಿಷಭ್ ಪಂತ್ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದೇ ಗೊಂದಲದ ಗೂಡಾಗಿದ್ದು, ಪಂದ್ಯದಲ್ಲಿ ಉತ್ತರ ಸಿಗಲಿದೆ. 2025 ರಲ್ಲಿ ಎಲ್‌ಎಸ್‌ಜಿಯ ಕೊನೆಯ ಪಂದ್ಯದಲ್ಲಿ ಅವರು 3ನೇ ಸ್ಥಾನದಲ್ಲಿ ಕಣಕ್ಕಿಳಿದು, ಅಜೇಯ 118 ರನ್ ಗಳಿಸಿದ್ದರು. ಐಪಿಎಲ್ 2025ರ ನಂತರ ಪಂತ್ ಟಿ20 ಕ್ರಿಕೆಟ್ಟನ್ನೇ ಆಡಿಲ್ಲ.

ಡೆಲ್ಲಿ ತಂಡದ ಪರ ಪಾತುಮ್ ನಿಸ್ಸಂಕಾ ಕೆಎಲ್ ರಾಹುಲ್ ಅವರೊಂದಿಗೆ ದೀರ್ಘ ಅಭ್ಯಾಸ ಅವಧಿಯನ್ನು ನಡೆಸಿದ್ದು, ಇನ್ನಿಂಗ್ಸ್ ಆರಂಭಿಸಬಹುದು.

ಪಂದ್ಯದಾರಂಭ: ರಾತ್ರಿ 7.30ಕ್ಕೆ