ICC Women’s World Cup: ಭಾರತಕ್ಕೆ ವಿಶ್ವಕಪ್: ನಾಯಕಿ ಕೌರ್ ವಿಶ್ವಾಸ

0
3

ನವದೆಹಲಿ: “ಭಾರತ ತಂಡ ಈ ಬಾರಿಯ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಗೆಲ್ಲುವ ದೃಢ ನಿರ್ಧಾರವನ್ನು ಮಾಡಿದೆ” ಎಂದು ಭಾರತದ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಹರ್ಮನ್‌ಪ್ರೀತ್ ಕೌರ್ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ವಿಶ್ವಕಪ್‌ ಗೆಲುವಿನ ಸನಿಹಕ್ಕೆ ಬಂದು ಫೈನಲ್‌ನಲ್ಲಿ ಸೋತಿದ್ದೇವೆ. ಈ ತಡೆಗೋಡೆಯನ್ನು ಮುರಿದು ದೇಶಕ್ಕಾಗಿ ವಿಶೇಷವಾದದ್ದನ್ನು ಮಾಡಲು ದೃಢನಿಶ್ಚಯವನ್ನು ನಮ್ಮ ತಂಡ ಹೊಂದಿದೆ” ಎಂದು ಹೇಳಿದ್ದಾರೆ.

“ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಸರಣಿ ಗೆದ್ದ ನಂತರ ಭಾರತ ಮಹಿಳಾ ತಂಡವು ಆತ್ಮವಿಶ್ವಾಸದಿಂದ ವಿಶ್ವಕಪ್‌ ಟೂರ್ನಿಗೆ ಕಾಲಿಡುತ್ತಿದೆ. ಈ ಬಾರಿ, ನಾವೆಲ್ಲರೂ ನಮ್ಮ ನೂರು ಪ್ರತಿಶತದಷ್ಟು ಶ್ರಮವನ್ನು ಹಾಕಿ ಗೆಲುವಿನ ಪಯಣ ಬೆಳಸಲಿದ್ದೇವೆ. ಕಳೆದ ಎರಡು ವರ್ಷಗಳಿಂದ ನಾವು ಆಡುತ್ತಿರುವ ಕ್ರಿಕೆಟ್ ನಮಗೆ ಸಾಕಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ” ಎಂದು ಕೌರ್ ಹೇಳಿದ್ದಾರೆ.

ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಮಾತನಾಡಿ, “ಕಳೆದ ಎರಡು ಮೂರು ವರ್ಷಗಳಲ್ಲಿ ಮನಸ್ಥಿತಿ ಬದಲಾಗಿದೆ. ಮೈದಾನದಲ್ಲಿ ನಾವು ಶಾಂತತೆಯಿಂದ ವರ್ತಿಸಲು ಬಯಸುತ್ತೇವೆ. ನಮ್ಮ ಇಡೀ ತಂಡವು ಆ ದಿಕ್ಕಿನಲ್ಲಿ ಸಾಗುತ್ತಿದೆ. ನಾವು ಉತ್ತಮ ರೀತಿಯಲ್ಲಿ ಸಿದ್ಧತೆ ನಡೆಸಿದ್ದೇವೆ. ವಿಶ್ವಕಪ್‌ಗೂ ಮುನ್ನ ನಾವು ಪೂರ್ವಸಿದ್ಧತಾ ಶಿಬಿರವನ್ನು ಹೊಂದಿದ್ದೇವೆ. ನಾವು ಇಂಗ್ಲೆಂಡ್ ಪ್ರವಾಸವನ್ನು ಹೊಂದಿದ್ದೇವೆ. ವಿಶ್ವಕಪ್‌ಗಿಂತ ಮೊದಲು ನಮಗೆ ಒಂದು ಪ್ರವಾಸವಿದೆ. ನಾವು ಮೈದಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದಾಗಲೆಲ್ಲಾ, ಉಳಿದೆಲ್ಲವೂ ತನ್ನನ್ನು ತಾನೇ ನೋಡಿಕೊಳ್ಳುತ್ತದೆ” ಎಂದರು.

ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಲಿಂಚ್‌ಪಿನ್ ಜೆಮಿಮಾ ರೊಡ್ರಿಗಸ್ ಮಾತನಾಡಿ, “ಮಹಿಳಾ ಪ್ರೀಮಿಯರ್ ಲೀಗ್‌ ಆರಂಭದಿಂದ ತಂಡದಲ್ಲಿ ಹೊಸಬರಲ್ಲಿ ವಿಶ್ವಾಸ ಹೆಚ್ಚಿಸಲು ಕಾರಣವಾಗಿದೆ. ಇಂಗ್ಲೆಂಡ್‌ನಲ್ಲಿ ಭಾರತದ 2-1 ಏಕದಿನ ಸರಣಿ ಗೆಲುವಿನಲ್ಲಿ ಪ್ರಮುಖ ವಿಕೆಟ್ ಪಡೆದ 22 ವರ್ಷದ ವೇಗಿ ಕ್ರಾಂತಿ ಗೌಡ್ ಆರು ವಿಕೆಟ್ ಗೊಂಚಲು ಸೇರಿದಂತೆ ಒಂಬತ್ತು ವಿಕೆಟ್‌ಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ” ಎಂದರು

ಹಿಂದಿನ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್, ತಂಡದ ಇತ್ತೀಚಿನ ಫಲಿತಾಂಶಗಳು ವಿಶ್ವಕಪ್‌ನಲ್ಲಿ ಭಾರತ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ. ಕಳೆದ ಒಂದು ವರ್ಷದಿಂದ ತಂಡವು ಏಕದಿನ ಪಂದ್ಯಗಳಲ್ಲಿ ಮಾತ್ರವಲ್ಲ, ಟಿ20 ಪಂದ್ಯಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಂಗ್ಲೆಂಡ್‌ ಸರಣಿಯಲ್ಲಿ ಅದ್ಭುತವಾದ ಫಲಿತಾಂಶ ನಮಗೆ ಸಿಕ್ಕಿದೆ” ಎಂದರು.

ಸೆಪ್ಟೆಂಬರ್ 30ರಂದು ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿದೆ. ಜಂಟಿ ಆತಿಥ್ಯ ಹೊಂದಿರುವ ಭಾರತ ತಂಡವು ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಇದೀಗ ತವರಿನಲ್ಲಿ ನಡೆಯುವ ಮೆಗಾ ಟೂರ್ನಿಗೆ ಕೇವಲ 50 ದಿನಗಳ ಬಾಕಿ ಇದೆ.

Previous articleಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಮಧ್ಯಾರಾಧನೆ: ಸುವರ್ಣ ರಥೋತ್ಸವ
Next articleಆರು ತಿಂಗಳೊಳಗೆ ಅಂಜನಾದ್ರಿಯ ಎಲ್ಲ ಅರ್ಜಿ ಮುಗಿಸಿ: ಹೈಕೋರ್ಟ್‌ಗೆ ಸುಪ್ರೀಂಕೋರ್ಟ್ ಸೂಚನೆ

LEAVE A REPLY

Please enter your comment!
Please enter your name here