Home Advertisement
Home ಕ್ರೀಡೆ ಹುಬ್ಬಳ್ಳಿಯ ಮಣ್ಣಲ್ಲಿ ಹೊಸ ಇತಿಹಾಸ ಬರೆದ ಜಮ್ಮು-ಕಾಶ್ಮೀರ

ಹುಬ್ಬಳ್ಳಿಯ ಮಣ್ಣಲ್ಲಿ ಹೊಸ ಇತಿಹಾಸ ಬರೆದ ಜಮ್ಮು-ಕಾಶ್ಮೀರ

0
4

ಹುಬ್ಬಳ್ಳಿ: ಮೊಟ್ಟಮೊದಲ ಬಾರಿಗೆ `ರಣಜಿ ಚಾಂಪಿಯನ್’ ಆಗುವ ಮೂಲಕ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಜಮ್ಮು-ಕಾಶ್ಮೀರ ತಂಡ ಹೊಸ ಇತಿಹಾಸವನ್ನು ಬರೆಯಿತು.

ರಣಜಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಎದುರು ಮೇಲುಗೈ ಸಾಧಿಸಿದ ಜಮ್ಮು-ಕಾಶ್ಮೀರ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿಕೊಂಡಿತು.

ಐದು ದಿನದ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಂಟಿಗ್‌ಗೆ ಇಳಿದ ಜಮ್ಮು-ಕಾಶ್ಮೀರ ಮೊದಲ ಇನ್ನಿಂಗ್ಸ್‌ನಲ್ಲಿಯೇ ಬೃಹತ್‌ 584 ರನ್‌ಗಳನ್ನು ಕಲೆ ಹಾಕಿತು. ಆದರೆ, ಇದಕ್ಕೆ ಪ್ರತಿಯಾಗಿ ಕರ್ನಾಟಕ ತಂಡ ಕೇವಲ 293 ರನ್‌ಗಳಿಗೆ ಆಲೌಟ್‌ ಆಯಿತು.

ಇದನ್ನೂ ಓದಿ: ಪರೀಕ್ಷೆ ಮುಗಿಸಿ ಮನೆಗೆ ಹೊರಟ ವಿದ್ಯಾರ್ಥಿ ಅಪಘಾತದಲ್ಲಿ ಸಾವು

ಮೊದಲ ಇನ್ನಿಂಗ್ಸ್‌ನಲ್ಲಿಯೇ ಹಿನ್ನಡೆ ಅನುಭವಿಸಿದ್ದ ಕರ್ನಾಟಕ ಜಮ್ಮು-ಕಾಶ್ಮೀರವನ್ನು ಬ್ಯಾಟರ್‌ಗಳನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೇ ಕಟ್ಟಿಹಾಕುವಲ್ಲಿ ವಿಫಲವಾಯಿತು. ಅಂತಿಮವಾಗಿ ಐದನೇ ದಿನದಾಟದ ಅಂತ್ಯಕ್ಕೆ ಜಮ್ಮು-ಕಾಶ್ಮೀರ 4 ವಿಕೆಟ್‌ ಕಳೆದುಕೊಂಡು 342 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಜಮ್ಮು-ಕಾಶ್ಮೀರ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಪ್ರಶಸ್ತಿ ಜಯಸುತ್ತಿದಂತೆ ತಂಡದ ಆಟಾಗರರು ಮೈದಾನಕ್ಕೆ ಬಂದು ಕುಣಿದು ಕುಪ್ಪಳಿಸಿದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ ಅವರು ಆಟಗಾರರಿಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಇದನ್ನೂ ಓದಿ: ಮೈಸೂರು ಸಿಲ್ಕ್ ಸೀರೆ: ನಾರಿಯರಿಗೆ ಇನ್ನು ಕನಸು?

ಮೈದಾನಕ್ಕೆ ಬಂದ ಸಿಎಂ ಓಮರ್ ಅಬ್ದುಲ್: ಕಳೆದ ರಾತ್ರಿ ಹುಬ್ಬಳ್ಳಿಗೆ ಆಗಮಿಸಿದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ ಅವರು ಬೆಳಗ್ಗೆ 10 ಗಂಟೆಯಿಂದ ಪಂದ್ಯ ವೀಕ್ಷಿಸಿದರು. ಕೆಂಪು ಟೀ ಶರ್ಟ್‌ನಲ್ಲಿ ಗಮನ ಸೆಳೆದ ಸಿಎಂ ತಮ್ಮ ತಂಡದ ಆಟಗಾರ ಕಮ್ರಾನ್ ಇಕ್ಬಾಲ್ ಹಾಗೂ ಸಾಹಿಲ್ ಲೋಟ್ರಾ ಅವರು ಶತಕ ಬಾರಿಸಿದಾಗ ಪೆವಿಲಿಯನ್‌ನಿಂದಲೇ ಸಂಭ್ರಮಿಸಿ, ಆಟಗಾರರಿಗೆ ಅಭಿನಂದಿಸಿದರು. ಅಲ್ಲದೇ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡ ನಂತರ ಮೈದಾನಕ್ಕೆ ಆಗಮಿಸಿ, ಆಟಗಾರರ ಸಂತಸದ ಕ್ಷಣದಲ್ಲಿ ಭಾಗಿಯಾದರು. ಅಲ್ಲದೇ, ತಾವೇ ಮೊಬೈಲ್‌ನಲ್ಲಿ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿದರು.

ಕರ್ನಾಟಕ ಗೆಲ್ಲಲಿ ಅಭಿಮಾನಿಗಳ ಪ್ರಾರ್ಥನೆ: 5ನೇ ದಿನವೂ ಕ್ರಿಕೆಟ್ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿರಲಿಲ್ಲ. ಬೆಳಗ್ಗೆಯಿಂದಲೇ ಮೈದಾನಕ್ಕೆ ಆಗಮಿಸಿದ ಕ್ರಿಕೆಟ್ ಪ್ರೇಮಿಗಳು ಕರ್ನಾಟಕದ ನೀರಸ ಪ್ರದರ್ಶನದ ನಡುವೆಯೂ ಆಟಗಾರರನ್ನು ಕೇಕೆ, ಚಪ್ಪಾಳೆ ಮೂಲಕ ಹುರಿದುಂಬಿಸಿದರು. ನಮ್ಮ ತಂಡ ಗೆಲ್ಲಲಿ ಎಂದು ದೇವರ ಮೊರೆ ಹೋದ ದೃಶ್ಯಗಳು ಕಂಡುಬಂದವು.