ಹುಬ್ಬಳ್ಳಿಯಲ್ಲಿ ವಾಹನ ಸಂಚಾರ ಮಾರ್ಗ ಬದಲು

0
15

ಹುಬ್ಬಳ್ಳಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಹತ್ತಿರದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶಮೂರ್ತಿಯನ್ನು ಮೂರನೇ ದಿನದ ಹಿನ್ನೆಲೆಯಲ್ಲಿ ವಿಸರ್ಜನೆ ಮಾಡಲಾಗುತ್ತಿದ್ದು, ಈ ಕಾಲಕ್ಕೆ ಸೆ. ೨೧ ರಂದು ಬೆಳಗ್ಗೆ ೧೧ ರಿಂದ ಸಂಜೆ ೫ರವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
ತಾತ್ಕಾಲಿಕವಾಗಿ ಗಣೇಶಮೂರ್ತಿ ಸಾಗುವ ಮಾರ್ಗದಲ್ಲಿ ಬಂದ್ ಮಾಡಲಾಗಿದ್ದು, ಗದಗ ಕಡೆಯಿಂದ ಬರುವ ಬಸ್ ಗಳು ಪಿಂಟೋ ಸರ್ಕಲ್‌ನಲ್ಲಿ ನಿಲ್ಲಿಸಬೇಕು. ನವಲಗುಂದ ಕಡೆಯಿಂದ ಬರುವ ಬಸ್‌ಗಳು ಸರ್ವೋದಯ ಸರ್ಕಲ್‌ನಲ್ಲಿ ನಿಲ್ಲಿಸಬೇಕು. ಕಾರವಾರ ಕಡೆಯಿಂದ ಬರುವ ಬಸ್‌ಗಳು ತಾರಿಹಾಳ ಮಾರ್ಗವಾಗಿ ಸಾಗಬೇಕು. ಬೆಂಗಳೂರು ಹಾಗೂ ಗಬ್ಬೂರ ಕಡೆಯಿಂದ ಬರುವ ಬಸಗಳು ಕಮರಿಪೇಟೆ ಪೊಲೀಸ್ ಠಾಣೆಯಿಂದ ತಿರುಗಿಸಿಕೊಂಡು ಹೊಸೂರ ಸರ್ಕಲ್‌ನಿಂದ ಸಾಗಬೇಕು. ಗದಗ ಕಡೆ ಹೋಗುವ ಬಸ್‌ಗಳು ರಿಂಗ್ ರೋಡ್ ಬಳಸಬೇಕು. ನವಲಗುಂದ ಕಡೆ ಹೋಗುವ ಬಸ್‌ಗಳು ಕುಸುಗಲ್ ಸಮೀಪದ ರಿಂಗ್ ರೋಡ ಬಳಸಬೇಕು. ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಹಳೆ ಬಸ್ ನಿಲ್ದಾಣದ ಮಾರ್ಗದಲ್ಲಿ ಮೆರವಣಿಗೆ ಸಾಗಲಿದ್ದು, ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Previous articleಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ದರ್ಶನಕ್ಕೆ ಜನವೋ ಜನ
Next articleಮಠದಲ್ಲೇ ಹಾಲಸ್ವಾಮಿ ವಿಚಾರಣೆ