ಒಂದಾನೊಂದು ಸಮಯದಲ್ಲಿ ದುಷ್ಟಬುದ್ಧಿಯ ಬೆಕ್ಕೊಂದು ಗಂಗಾತೀರಕ್ಕೆ ತಪಸ್ಸಿಗೆಂದು ಹೊರಟಿತು. ಬಹಳ ದಿನಗಳ ಕಾಲ ಗಂಗಾತೀರದಲ್ಲಿ ಕುಳಿತರೆ ನಾನೊಬ್ಬ ತಪಸ್ವಿ ಎಂಬ ಭಾವ ಪ್ರಾಣಿಗಳಲ್ಲಿ ಮೂಡುತ್ತದೆ ಎಂದು ದೃಢವಾಗಿ ತಿಳಿದಿತ್ತು. ನನ್ನ ಉದ್ದೇಶ ಸಫಲವಾಗಿದೆ. ಗಂಗೆಯ ಬಳಿ ಕುಳಿತಿದ್ದಕ್ಕೆ ವರ ಸಿಕ್ಕಿದೆ ಎಂದುಕೊಂಡಿತು. ಕಾಲಾಂತರದಲ್ಲಿ ಅಲ್ಲಿಗೆ ಇಲಿಗಳೂ ಬಂದವು. ನಮಗೆ ತುಂಬ ವೈರಿಗಳಿದ್ದಾರೆ. ಅನೇಕ ಪಕ್ಷಿಗಳೂ ನಮ್ಮನ್ನು ಹಿಡಿದು ತಿನ್ನುತ್ತವೆ. ನಾವು ವಿರಕ್ತ ಬೆಕ್ಕಿನ ಆಶ್ರಯ ಪಡೆದರೆ ಇತರ ಬೆಕ್ಕುಗಳು ಹೆದರಿ ಓಡುತ್ತವೆ. ಇದರಿಂದ ನಮ್ಮ ರಕ್ಷಣೆಯೂ ಆಗುತ್ತದೆ ಎಂದು ಯೋಚಿಸಿದವು. ಕಳ್ಳ ಬೆಕ್ಕಿನ ಬಳಿ ಬಗೆಬಗೆಯಾಗಿ ಪ್ರಾರ್ಥಿಸಿದವು. ಅಂತೂ ಮಾರ್ಜಾಲ ಸನ್ಯಾಸಿ ಅನುಗ್ರಹದ ಕಣ್ಣು ತೆರೆಯಿತು.
ಸಂತುಷ್ಟರಾದ ಇಲಿಗಳು ಬೆಕ್ಕೇ ಬೆಕ್ಕೇ ನೀನು ಎಷ್ಟ್ಟು ಒಳ್ಳೆಯವನು. ಎಂತಹ ತಪಸ್ವಿ, ನಮಗೆ ಬೇರೆ ಬೆಕ್ಕುಗಳಿಂದ ಬಂದ ಆಪತ್ತನ್ನು ಪರಿಹರಿಸು ಎಂದವು. ಕಪಟ, ಮಾರ್ಜಾಲವು, ಮೂಷಿಕ ಮಹನೀಯರೆ, ನಿಮ್ಮ ಪ್ರಾರ್ಥನೆಗೆ ನಾನು ಒಪ್ಪಿ ನಿಮ್ಮ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇನೆ.
ನಾಳೆ ನೀವೆಲ್ಲರೂ ಒಟ್ಟಾಗಿ ನದೀ ತೀರಕ್ಕೆ ಹೋಗಿರಿ, ನಿಮ್ಮ ಹಿಂದೆ ಮಾವನನ್ನು ನಾನು ಕರೆದು ತರುತ್ತೇನೆ ಎಂದಿತು. ಮರುದಿನ ಹಾಗೇ ನಡೆಯಿತು. ಮೂಷಿಕಗಳ ಹಿಂದಿನ ದಿನದ ಮಂತ್ರಾಲೋಚನೆ ಕಳ್ಳ ಬೆಕ್ಕಿಗೆ ಗೊತ್ತಿರಲಿಲ್ಲ. ಡಿಂಡಿಕನು ಕರೆದೊಯ್ಯುವಾಗ ಅವನನ್ನು ದಾರಿಯಲ್ಲಿಯೇ ತಿಂದು ತೇಗಿತು. ಇದರಿಂದ ಕಾಲಾಂತರದಲ್ಲಿ ಮೂಷಿಕಗಳಿಗೆ ಬೆಕ್ಕಿನ ವರ್ತನೆ ಬಗ್ಗೆ ಸಂಶಯ ಬಂತು.
ದಿನನಿತ್ಯವೂ ಇಲಿಗಳನ್ನು ಕಬಳಿಸಿಯೇ ಜೀವಿಸುತ್ತಿದೆ. ಎಂದು ದೃಢಪಡಿಸಿಕೊಂಡಿತು. ಈ ನಿಜ ಸಂಗತಿಯನ್ನು ತಿಳಿದ ಇಲಿಗಳು ದಿಕ್ಕಾಪಾಲಾಗಿ ಓಡಿದವು. ನೂರಾರು ಇಲಿಗಳನ್ನು ಕಬಳಿಸಿದ ಮಾರ್ಜಾಲ ತನ್ನ ಮೊದಲಿನ ಜಾಗಕ್ಕೆ ತೃಪ್ತಿಯಿಂದ ಸಾಗಿತು.
ನೀವು ವ್ಯಕ್ತಿಯ ಮಾತಿಗೆ ಬಲಿಯಾಗಬೇಡಿ. ಗುಣಗಳನ್ನು ಹುಡುಕಿರಿ, ವೇಷಗಳಲ್ಲಿ ವಿಶ್ವಾಸವಿಡಬೇಡಿ.


























