ನೀಲಿ ತಾರೆ ಲಿಯೋನ್ ಇನ್ನಿಲ್ಲ

0
12

ನೀಲಿ ತಾರೆ ಸೋಫಿಯಾ ಲಿಯೋನ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
26 ವರ್ಷದ ನಟಿ ಸೋಫಿಯಾ ಶವ ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ನಟಿಯ ಸಾವಿನ ಸುದ್ದಿಯನ್ನು ಆಕೆಯ ಮಲತಂದೆ ಮೈಕ್ ರೊಮೆರೊ ಖಚಿತಪಡಿಸಿದ್ದಾರೆ. ಮಾರ್ಚ್‌ 1ರಂದು ಸೋಫಿಯಾ ಮೃತಪಟ್ಟಿದ್ದು, ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.
“ಅವಳ ತಾಯಿ ಮತ್ತು ಕುಟುಂಬದ ಪರವಾಗಿ, ನಮ್ಮ ಪ್ರೀತಿಯ ಸೋಫಿಯಾ ಅವರ ನಿಧನದ ಸುದ್ದಿಯನ್ನು ನಾನು ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇನೆ” ಎಂದು ಸೋಫಿಯಾ ಮಲತಂದೆ ಮೈಕ್ ರೊಮೆರೊ ಹೇಳಿದ್ದಾರೆ.
ಸೋಫಿಯಾ 1997ರ ಜೂನ್ 10ರಂದು ಅಮೆರಿಕಾದ ಮಿಯಾಮಿಯಲ್ಲಿ ಜನಿಸಿದ್ದರು. ಸೋಫಿಯಾ 18ನೇ ವಯಸ್ಸಿನಲ್ಲಿಯೇ ನೀಲಿ ಚಿತ್ರಗಳನ್ನು ಕಾಣಿಸಿಕೊಳ್ಳಲು ಆರಂಭಿಸಿದ್ದರು.

Previous articleಕಮಲ ತಬ್ಬಿದ ಕುಮಾರಣ್ಣ: ಡಿಕೆಶಿ ವ್ಯಂಗ್ಯ
Next articleಮಾಜಿ ಸಿಎಂಗಳ ಮಕ್ಕಳ ಮುಖಾಮುಖಿ