ದೇವನ ಆಜ್ಞೆ ಮೀರದಿರೆ ಪುಣ್ಯಪ್ರಾಪ್ತಿ

0
15

ಜಗತ್ತಿನ ಪ್ರತಿಯೋರ್ವ ಮುಸಲ್ಮಾನರಿಗೆ ಬಕ್ರೀದ್ ಪವಿತ್ರ ದಿನ. ಹಜರತ್ ಇಬ್ರಾಹಿಂ ಅಲೇಸಲಾವರ ತ್ಯಾಗ ಹಾಗೂ ಹಜರತ್ ಇಸ್ಮಾಯಿಲ್ ಅಲೇಸಲಾವರ ಬಲಿದಾನದ ದ್ಯೋತಕ ಈ ಹಬ್ಬ ಆಚರಿಸಲಾಗುತ್ತದೆ. ಮೊಹ್ಮದ ಪೈಗಂಬರ್‌ಕ್ಕಿಂತ ಮೊದಲು ಹಜರತ್ ಇಬ್ರಾಹಿಂ ಅಲೇಸಲಾವರ ಪ್ರವಾದಿ ಕಾಲಘಟ್ಟದಲ್ಲಿ ಮೆಕ್ಕಾದಲ್ಲಿ ಕಾಬಾ ಕಟ್ಟಡ ಪ್ರಾರಂಭಿಸಿದರು. ಹಗಲು ಕಟ್ಟಡ ಪೂರ್ಣ ನಿರ್ಮಾಣವಾಗಬೆಕು. ಆದರೆ. ರಾತ್ರಿ ಏಕಾಏಕಿ ಕಟ್ಟಡ ಬಿದ್ದು ನೆಲಸಮವಾಗುತ್ತಿತ್ತು. ಪ್ರವಾದಿ ಹ. ಇಬ್ರಾಹಿಂ ಸಲಾವರರು ಅಲ್ಹಾಹ್‌ನಲ್ಲಿ ಪ್ರಾರ್ಥಿಸಿದರು. ಕಟ್ಟಡ ಸ್ಥಿರವಾಗಿ ನಿಲ್ಲಲು ಆದೇಶಿಸು ಎಂದರು.
ಅದಕ್ಕೆ ಅಶರೀರವಾಣಿ, ಇಬ್ರಾಹಿಂ, ನೀನು ನಿನ್ನ ಜೀವನದಲ್ಲಿ ಯಾವ ವಸ್ತುವನ್ನು ಹೆಚ್ಚು ಪ್ರೀತಿಸುತ್ತಿಯೋ ಅದನ್ನು ಬಲಿದಾನ ಮಾಡು ಎಂದಿತು. ಅವರಿಗೆ ಎಂಬತ್ತು ವಯಸ್ಸಿನ ನಂತರದಲ್ಲಿ ಜನಿಸಿದ ಏಕೈಕ ಮಗುವಿನ ನೆನಪಾಯಿತು. ದೇವವಾಣಿ ಕೇಳಿದ ಕ್ಷಣ ಮಗನನ್ನು ಬಲಿ ಕೊಡಲು ಸಿದ್ಧರಾದರು. ಎಂಟು ವರ್ಷದ ಮಗುವಿಗೆ ಸ್ನಾನ ಮಾಡಿಸಿ ಹೊಸಬಟ್ಟೆ ತೊಡಿಸುತ್ತಾರೆ. ಬಲಿ ಕೊಡುವ ಜಾಗದಲ್ಲಿ ಮಗನಿಗೆ ಅಲ್ಹಾಹ್‌ನ ಆಜ್ಞೆಯಾಗಿದೆ ಎನ್ನುತ್ತಾರೆ. ಆ ಮಗು ಇಸ್ಮಾಯಿಲ್, ಅಪ್ಪಾ ಅಲ್ಹಾಹ್‌ನ ಆಜ್ಞೆ ಪೂರೈಸು ಎನ್ನುತ್ತಾನೆ.
ನಿನಗೆ ಜುಬಾ (ಚೂರಿ ಹಾಕುವಾಗ) ಮಾಡುವಾಗ ಕನಿಕರ ಬರಬಹುದು. ಅದಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿಕೋ ಎಂದು ಮಗು ಹೇಳುತ್ತದೆ. ಅದಕ್ಕೆ ತಂದೆ ದುಃಖಿತನಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾನೆ. ಅಂತಹ ಸಂದರ್ಭ ಸೃಷ್ಟಿ ಮಾಡಿದ್ದ ಅಲ್ಹಾಹ್, ಕೂಡಲೇ ತಂದೆ ಮಗನಿಗೆ ಹಾಕುವ ಪೆಟ್ಟಿನ ಹೊತ್ತಿನಲ್ಲಿ ಆ ಜಾಗದಲ್ಲಿ ಆಡನ್ನು ತಂದು ನಿಲ್ಲಿಸಿ ಅಲ್ಲಿಂದ ಮಗುವನ್ನು ರಕ್ಷಿಸುತ್ತಾನೆ.
ಈ ಹಂಯದಲ್ಲಿ ತಂದೆ ಇಬ್ರಾಹಿಂ ದೇವವಾಣಿ ಪಾಲಿಸಿದಂತಾಯಿತು. ಅಲ್ಹಾಹ್ ಒಡ್ಡಿದ ಪರೀಕ್ಷೆಯಲ್ಲಿ ಗೆದ್ದಂತಾಯಿತು. ಆಗ ಕಾಬಾದಲ್ಲಿ ಕಟ್ಟಡ ಕಟ್ಟುವಂತೆ ಅಲ್ಹಾಹ್‌ವಾಣಿಯಾಗುತ್ತದೆ. ದೊಡ್ಡವರ ಮಾತು ಕಹಿ ಎನಿಸಿದರೂ ಕೂಡ ಅದನ್ನು ಪಾಲಿಸುವದರಲ್ಲಿ ಸುಖವಿದೆ ಎಂಬುದನ್ನು ಬಕ್ರೀದ್ ಸಾರಿ ಹೇಳುತ್ತದೆ.

Previous article೧೦೮ಕ್ಕೆ ನೂರೆಂಟು ಸಮಸ್ಯೆ ತುರ್ತು ಪರಿಹಾರ ಅಗತ್ಯ
Next articleಅಪಘಾತದಲ್ಲಿ ಮೃತಪಟ್ಟ ಯೋಧನ ಅಂತ್ಯಕ್ರಿಯೆ: ದುಃಖದ ಮಡುವಿನಲ್ಲಿ ನವಲಿಹಾಳ