ತಿಂಗಳ ನಂತರ ನೇಕಾರರ ಹೋರಾಟ ಅಂತ್ಯ

0
19

ಬಾಗಲಕೋಟೆ: ಬರೋಬ್ಬರಿ ತಿಂಗಳ ನಂತರ ಇಲ್ಲಿನ ಕೆಎಚ್‌ಡಿಸಿ ಪ್ರಧಾನ ಕಚೇರಿ ಎದುರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನಡೆಸುತ್ತಿದ್ದ ಕೈಮಗ್ಗ ನೇಕಾರರ ಸತ್ಯಾಗ್ರಹವನ್ನು ಜವಳಿ ಸಚಿವ ಶಿವಾನಂದ ಪಾಟೀಲರ ಭರವಸೆ ಮೆರೆಗೆ ಕೈಬಿಡುವಲ್ಲಿ ಕಾರಣವಾಯಿತು. ಶುಕ್ರವಾರ ಸಂಜೆ ಸ್ಥಳಕ್ಕೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ, ಸತ್ಯಾಗ್ರಹನಿರತರ ಮನವೊಲಿಸುವಲ್ಲಿ ಯಶಸ್ವಿಯಾದರು.
ನೇಕಾರರು ಎಂದಿಗೂ ಹೋರಾಟ ನಡೆಸಬಾರದು ಬದಲಾಗಿ ಸಮಸ್ಯೆಗಳಿಗೆ ಸರ್ಕಾರದೊಂದಿಗೆ ಸಂವಾದ ಅಥವಾ ಮಾತುಕತೆ ನಡೆಸಿ ನಂತರ ಹೋರಾಟಗಳಂತಹ ವ್ಯವಸ್ಥೆಗೆ ಅಣಿಯಾಗಬೇಕು. ದುಡಿಮೆಯಿಂದಲೇ ದಿನಂಪ್ರತಿ ಉಪಜೀವನ ನೇಕಾರರದ್ದು, ಉಪವಾಸದೊಂದಿಗೆ ಹೋರಾಟ ನನಗೂ ಬೇಸರವೆಂದು ಪಾಟೀಲ ತಿಳಿಸಿದರು.
ಮನೆಗಳಿಗೆ ಸಿಟಿಎಸ್ ಹಾಗು ನಿವೇಶನ ಹಂಚುವ ವಿಚಾರದಿಂದ ಕೈಬಿಡಬೇಕು. ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಕಾರಣ ತಾಂತ್ರಿಕವಾಗಿ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವದು. ಸದ್ಯ ಅಥವಾ ಮುಂದೆಯೂ ಸಹಿತ ಯಾರನ್ನೂ ಒಕ್ಕಲೆಬ್ಬಿಸುವದಿಲ್ಲ ನೇಕಾರರು ಸುರಕ್ಷಿತವಾಗಿ ತಮ್ಮ ಮನೆಗಳಿಲ್ಲರಬಹುದು ಎಂದರು.ಸಾಕಷ್ಟು ಸಮಸ್ಯೆಗಳು ನಿಗಮದಲ್ಲಿವೆ. ಅರಣ್ಯ ಇಲಾಖೆಯಿಂದ ಲೀಜ್ ವಿಸ್ತರಣೆಯಾಗಬೇಕಿದ್ದು, ನೇಕಾರ ಸಮುದಾಯದಲ್ಲಿನ ನಿಗಮಗಳೆರಡನ್ನು ಒಗ್ಗೂಡಿಸಿ ಅಭಿವೃದ್ಧಿಪಡಿಸುವ ಯೋಚನೆಯಲ್ಲಿದ್ದೇವೆ. ಅವೆಲ್ಲವುಗಳ ಪರಿಹಾರಕ್ಕೆ ನೇಕಾರರ ಸಹಕಾರ ಬೇಕಿದೆ ಎಂದರು. ತಮ್ಮ ಹೋರಾಟದ ಅವಧಿ 8-10 ದಿನಗಳಿರಲಿ ಬದಲಾಗಿ ತಿಂಗಳಾನುಗಟ್ಟಲೆ ನಡೆಸುವದು ಅಸಂಬದ್ಧವಾದುದು. ಕಾನೂನಾತ್ಮಕ ವಿಚಾರಣೆಯೊಂದಿಗೆ ಹೋರಾಟ ಕೈಗೊಂಡಲ್ಲಿ ಸೂಕ್ತವೆಂದು ನೇಕಾರರಿಗೆ ಸಚಿವರು ಕಿವಿಮಾತು ಹೇಳಿದರು.

Previous articleಕಾಂಗ್ರೆಸ್ ಮಾನ, ಮರ್ಯಾದೆ ಇದ್ದರೆ ಸರ್ಕಾರ ವಿಸರ್ಜಿಸಲಿ
Next articleವಿಧಾನ ಪರಿಷತ್ ಶಾಸಕರ ಹಕ್ಕುಚ್ಯುತಿ, ಕ್ರಮ ಜರುಗಿಸಲು ಸಭಾಪತಿಗೆ ಶಾಸಕರ ಮನವಿ