ತಾಯಿ, ಇಬ್ಬರು ಪುತ್ರಿಯರು ಆತ್ಮಹತ್ಯೆಗೆ ಶರಣು

0
22
ಆತ್ಮಹತ್ಯೆ

ಹರಪನಹಳ್ಳಿ: ತಾಲೂಕಿನ ನೀಲಗುಂದ ಗ್ರಾಮದಲ್ಲಿ ತಾಯಿ ಹಾಗೂ ಇಬ್ಬರು ಪುತ್ರಿಯರು ಆತ್ಮಹತ್ಯೆಗೆ ಶರಣಾದ ಘಟನೆ ಸಂಜೆ ಜರುಗಿದೆ.
ಗ್ರಾಮದ ಭವ್ಯ(೩೮) ತಾಯಿ ಹಾಗೂ ಮಕ್ಕಳಾದ ಕಾವ್ಯ(೧೭) ಅಮೂಲ್ಯ(೧೪) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭವ್ಯಳ ತಾಯಿ ಮನೆಗೆ ಆಗಮಿಸಿ ಮಗಳನ್ನು ಕರೆದಿದ್ದಾರೆ ಯಾರೂ ಉತ್ತರಿಸಿಲ್ಲ. ಹೊರಗೆ ಹೋಗಿರಬಹುದು ಎಂದು ಮನೆಯ ಹೊರೆಗೆ ಕಾಯುತ್ತಾ ಕುಳಿತಿದ್ದಾರೆ.
ಎಷ್ಟು ಹೊತ್ತಾದರೂ ಯಾರು ಇಲ್ಲದ ಕಾರಣ ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ಇಲ್ಲ ಮನೆಯಲ್ಲೇ ಇದ್ದಾರೆ ಎಂದು ಹೇಳಿದ್ದಾರೆ. ಕಿಟಕಿಯಿಂದ ನೋಡಿದಾಗ ನೇಣು ಬಿಗಿದು ಕೊಂಡಿದ್ದ ದೃಶ್ಯ ಕಂಡುಬಂದಿದೆ. ಕಾವ್ಯ ತನ್ನ ನೋಟ್‌ಬುಕ್‌ನಲ್ಲಿ ನಮ್ಮ ಸಾವಿಗೆ ನಾವೇ ಕಾರಣ ಎಂದು ಬರೆದುಕೊಂಡಿರುವುದು ದೊರೆತಿದೆ.

Previous articleಮಾರಾಟ ಮಾಡಿದ ಕಾರನ್ನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ
Next articleಮಾತಿಗೆ ತಪ್ಪಿದರೆ ಜೆಡಿಎಸ್‌ ವಿಸರ್ಜನೆ