ಟಿಪ್ಪರ್ ಗುದ್ದಿ ಓರ್ವ ಸಾವು

0
47

ಕುಷ್ಟಗಿ: ಬೆಳ್ಳಂ ಬೆಳಗ್ಗೆ ಕೊಪ್ಪಳ ಕಡೆಯಿಂದ ಹನುಮಸಾಗರ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ವಾಕಿಂಗ್‌ಗೆ ತೆರಳಿದ್ದ ಎರಡು ಜನರ ಮೇಲೆ ಹಾದು ಹೋಗಿ ಓರ್ವ ಸ್ಥಳದಲ್ಲಿ ಸಾವನಪ್ಪಿದ್ದರೆ, ಇನ್ನೊಬ್ಬನಿಗೆ ಗಂಭೀರ ಗಾಯವಾದ ಘಟನೆ ಸಂಭವಿಸಿದೆ.
ಕುಷ್ಟಗಿ ಪಟ್ಟಣದ ಅನುಪ ಶೆಟ್ಟಿ ಕಾಲೋನಿ ಹತ್ತಿರ ಕೊಪ್ಪಳ ರಾಜ್ಯ ಹೆದ್ದಾರಿಯಲ್ಲಿ ವಾಕಿಂಗಿಗೆ ತೆರಳಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.
ಕೊಪ್ಪಳ ಕಡೆಯಿಂದ ಹನುಮಸಾಗರ ಗ್ರಾಮದ ನೂರಂದಪ್ಪ ಅವರಿಗೆ ಸೇರಿದ ಟಿಪ್ಪರ್ ಬರುತ್ತಿದ್ದು ಚಾಲಕನ ನಿರ್ಲಕ್ಷತನದಿಂದಾಗಿ ಜಿಪಂ ನಿವೃತ ನೌಕರ ದೊಡ್ಡಪ್ಪ ಶಂಕ್ರಪ್ಪ ಕಂಚಿ (60), ಇನ್ನೋರ್ವ ದುರ್ದೈವಿ ಆದಂತಹ ಟಿಎಪಿಎಂ.ಎಸ್ ನ ಸೆಕ್ರೆಟರಿ ಶರಣಪ್ಪ ಅಬ್ಬಿಗೇರಿ(೫೫) ಅನ್ನುವರಿಗೆ ಗಂಭೀರ ಗಾಯವಾಗಿದ್ದು ಕೂಡಲೇ ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ಪಡೆದುಕೊಂಡ ಪಿಎಸ್ಐ ಮುದ್ದು ರಂಗಸ್ವಾಮಿ ಘಟನಾ ಸ್ಥಳಕ್ಕೆ ತೆರಳಿ ಘಟನೆ ಕುರಿತು ಮಾಹಿತಿ ಪಡೆದುಕೊಂಡು ಗಾಯಗೊಂಡ ಶರಣಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಘಟನೆ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಂದನ ಮುಗಿಲು ಮುಟ್ಟಿದೆ: ಮೃತಪಟ್ಟ ದೊಡ್ಡಪ್ಪ ಕಂಚಿ ಅವರ ಮೃತದೇವನ್ನು ಮರಣೋತ್ತರ ಪರೀಕ್ಷೆಗೆ ಕುಷ್ಟಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಆಸ್ಪತ್ರೆಯಲ್ಲಿ ಸಾವನಪ್ಪಿದ ವ್ಯಕ್ತಿಯ ಸಂಬಂಧಿಕರ ರೋಧನ ಮುಗಿಲುಮುಟ್ಟಿದ್ದು ಕಂಡು ಬಂತು.

Previous articleದಸರಾ ಸ್ಪೆಷಲ್‌: ಮೈಸೂರು-ಧಾರವಾಡ, ವಿಜಯಪುರ ನಡುವೆ ಸಂಚಾರ
Next articleಜನಪ್ರತಿನಿಧಿಗಳ ನಡೆನುಡಿಗೆ ಜನರ ಟೀಕೆ ಹೊಸತಲ್ಲ