ಇಚ್ಛೆಯರಿತು ನಡೆವ ಸತಿ ಇರಬೇಕು

0
25
PRATHAPPHOTOS.COM

ಭೋಗಾಸಕ್ತಿ ಇರುವಾಗ ಅವಳಿಗೆ ಸಿಕ್ಕಂತಹ ಸಾಮಾನ್ಯ ಜನರು ಜಾರರು. ಭೋಗ ಲಾಲಸೆ ಯೋಗಶಕ್ತಿ ಮತ್ತು ತ್ಯಾಗಶಕ್ತಿ ಇದ್ದಾಗ ಸ್ತ್ರೀಗೆ ಅಂಥ ಪತಿ ಸಿಕ್ಕರೆ ಅವನು ರಾಜ. ಅಂದರೆ ಶ್ರೀ ಕೃಷ್ಣ ಪರಮಾತ್ಮ… ಆ ರೀತಿಯಾಗಿ ತ್ಯಾಗದಲ್ಲಿ ಪತಿಯ ಸೇವೆ ಮಾಡೋದರಲ್ಲಿ ಶುದ್ಧ ಜೀವನ ನಡೆಸುವುದರಲ್ಲಿ ಆಚಾರವಂತ ಜೀವನ ನಡೆಸುವುದರಲ್ಲಿ ನಿಷ್ಠೆ ಇರಬೇಕಾಗುತ್ತದೆ. ಆಗ ಸ್ತ್ರೀಯಳ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ರುದ್ರದೇವರು ಸಂದೇಶ ಹೇಳಿದ್ದಾರೆ.
ನಾನು ಕೇಳಿದ್ದನ್ನು ಗಂಡ ಕೊಟ್ಟಿಲ್ಲ ಅಥವಾ ತನ್ನ ಗಂಡನಲ್ಲಿ ತಾನು ಕಂಡ ಸೌಂದರ್ಯಕ್ಕಿಂತಲೂ ಹೆಚ್ಚಿನ ಸೌಂದರ್ಯವನ್ನು ಪರ ಪುರುಷರಲ್ಲಿ ಕಂಡು ಅದಕ್ಕೆ ಮೋಹಿತಳಾಗಿ ಪ್ರೀತಿಯಗೆ ಬಲಿಯಾಗಿ ಗಂಡನಿಗೆ ವಿಷ ಹಾಕುವವರು. ಅಗ್ನಿ ಹಾಕುವವರು ಅಥವಾ ಇನ್ಯಾವುದೋ ಔಷಧ ಉಪಚಾರಗಳಿಂದ ಪತಿಯನ್ನು ಹತ್ಯೆ ಮಾಡುವವರು ಯಾರು ಅಂಥವರಿಗೆ ಅಕಾಲದಲ್ಲಿ ಜನ್ಮಾಂತರದಲ್ಲಿ ವೈಧವ್ಯ ಪ್ರಾಪ್ತಿಯಾಗುತ್ತದೆ.
ಒಟ್ಟಾರೆ ಸಾರಾಂಶವಿಷ್ಟೇ ದೇವರು ಕೊಟ್ಟಾಗ ಅದರ ಸಕಾಲ ಉಪಯೋಗ ಮಾಡಿಕೊಳ್ಳಬೇಕು. ಕೊಟ್ಟಾಗಲಾದರೂ ಸದುಪಯೋಗ ಮಾಡಿಕೊಳ್ಳಲಿಲ್ಲವೆಂದರೆ ಅದನ್ನು ದೇವರು ಕಸಿದುಕೊಳ್ಳುತ್ತಾನೆ. ತನ್ನ ಸರ್ವಸ್ವವನ್ನು ಕೊಟ್ಟು ಸೌಭಾಗ್ಯವನ್ನು ಕೊಟ್ಟು ತಲೆಯೆತ್ತಿ ನಡೆಯುವಂತೆ ಮಾಡಿ ಎಲ್ಲ ರೀತಿಯಿಂದ ಮಡದಿಯನ್ನು ನೋಡಿಕೊಳ್ಳುವ ವ್ಯಕ್ತಿ ಅವನು ಅಮಿತವಾದವನ್ನು ಕೊಡುತ್ತಾನೆ. ಅಂಥ ಗುಣವನ್ನು ಹುಟ್ಟುವಂತೆ ಸ್ತ್ರೀಯಾದವಳು ಮೊದಲು ನಡೆದುಕೊಳ್ಳಬೇಕು. ಅಂಥವಳು ವಿವೇಕಿಯಾಗಿರುತ್ತಾಳೆ. ಹೇಳಿದ ಮಾತಿಗೆ ವಾದಿಸುವದಲ್ಲ. ಅಮಿತವಾಗಿ ನೀಡುವ ಪತಿ ಇದ್ದರೆ ಅದು ಭಾಗ್ಯ, ಸೌಭಾಗ್ಯವೇ ಸರಿ. ಅಂತಹ ಸೌಭಾಗ್ಯವನ್ನು ಪರಿಚಯ ತ್ಯಜಿಸಿ ವಿವೇಕ ಇರುವ ಸ್ತ್ರೀಯಾದ ಸೀತೆ ಅಂತಹ ಪತಿಯನ್ನು ಅವನು ಅರಣ್ಯದಲ್ಲಿ ಇದ್ದರೆ ಅದೇ ರಾಜ್ಯ, ಅವನಿಲ್ಲದ ರಾಜ್ಯವು ಅರಣ್ಯ ಎಂದು ರಾಮ ಇದ್ದಲ್ಲಿ ನಾನು ಎಂದು ದೃಢವಾದ ಸಂಕಲ್ಪ ಮಾಡಿದ ಸೀತೆ ಶ್ರೀ ರಾಮನನ್ನು ಹಿಂಬಾಲಿಸಿದಳು ಎಂದು ಕೇಳುತ್ತೇವೆ ಇದು ನಮ್ಮ ಭಾರತೀಯ/ರಾಮಾಯಣ/ಮಹಾಭಾರತದ ಸಂಸ್ಕೃತಿ. ೨೦ನೇ ಶತಮಾನದಲ್ಲಿ ಸಮಾನತೆಯ ಹುಚ್ಚಿನಲ್ಲಿ ಒಬ್ಬರನ್ನು ಗೌರವಿಸುವುದು ಆಧರಿಸುವುದು ಮರೆಯಬಾರದು.

Previous articleಯೋಧನ ಮೇಲೆ ರಿವಾಲ್ವರ್ ನಿಂದ ಗುಂಡಿನ ದಾಳಿ
Next articleರಷ್ಯನ್ ಬಾಲಕನಿಗೆ ಲಿಂಗದೀಕ್ಷೆ ನೀಡಿದ ಕಾಶಿ ಶ್ರೀಗಳು