ಆರೂವರೆ ಗಂಟೆಯಲ್ಲಿ ಗೋವಾ ಟು ಮುಂಬಯಿ ಹಡಗು ಪ್ರಯಾಣ…

0
25

ಪಣಜಿ: ಮುಂಬೈನಿಂದ ಗೋವಾಕ್ಕೆ ಸಮುದ್ರದ ಮೂಲಕ ನೇರವಾಗಿ ಸೂಪರ್-ಫಾಸ್ಟ್ ರೋ-ರೋ ಹಡಗು (ರೋಲ್-ಆನ್, ರೋಲ್-ಆಫ್) ಸೇವೆ ಪ್ರಾರಂಭಿಸಲು ಎಂ.೨.ಎಂ ಕಂಪನಿ ಪ್ರಸ್ತಾವ ಸಲ್ಲಿಸಿದೆ.
ಇಂತಹ ಜಲ ಸಾರಿಗೆಯನ್ನು ಈ ಹಿಂದೆ ಮುಂಬೈ ಮತ್ತು ಗೋವಾ ನಡುವೆ ಬಾಂಬೆ ಸ್ಟೀಮ್ ನ್ಯಾವಿಗೇಷನ್ ಕಂಪನಿಯ ಮೂಲಕ ಪ್ರಾರಂಭಿಸಲಾಗಿತ್ತು. ೧೯೬೪ರ ನಂತರ ಸ್ಥಗಿತಗೊಳಿಸಲಾಯಿತು. ಈಗ ೧೮೦ ವರ್ಷಗಳಷ್ಟು ಹಳೆಯದಾದ ಈ ಜಲ ಸಾರಿಗೆ ವ್ಯವಸ್ಥೆಯನ್ನು ಪುನರಾರಂಭಿಸಲಾಗುತ್ತಿದೆ.
ಮುಂಬೈ-ಗೋವಾ ರೋ-ರೋ ದೋಣಿಯ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದ್ದು, ಆರಂಭಿಕ ಪರೀಕ್ಷೆಯಲ್ಲಿ ಮುಂಬೈನಿಂದ ಗೋವಾಕ್ಕೆ ಪ್ರಯಾಣ 6.5 ಗಂಟೆಗಳಲ್ಲಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಅಂತಿಮ ಅನುಮೋದನೆ ದೊರೆತ ನಂತರ, ಮಜ್ಗಾಂವ್ ಡಾಕ್‌ನಿಂದ ಪಣಜಿ ಜೆಟ್ಟಿ ಡಾಕ್‌ಗೆ ಹಡಗು ಸೇವೆ ಆರಂಭವಾಗಲಿದೆ.
ಹೊಸ ರೋಪಾಕ್ಸ್ ಹಡಗು 620 ಪ್ರಯಾಣಿಕರು ಮತ್ತು 60 ಕಾರುಗಳನ್ನು ಸಾಗಿಸಬಲ್ಲದು. ಪ್ರಯಾಣ ದರವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಏಪ್ರಿಲ್ ಅಂತ್ಯ ಅಥವಾ ಮೇ ಆರಂಭದ ವೇಳೆಗೆ ಹಡಗು ಸಂಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ.

Previous articleಮಹಿಷಿ ಉತ್ತರಾಧಿಮಠದಲ್ಲಿ ದರೋಡೆ ನಡೆಸಿದ್ದವನ ಕಾಲಿಗೆ ಗುಂಡೇಟು
Next article41 ಕಳಪೆ ಔಷಧಿಗಳ ಮಾರಾಟಕ್ಕೆ ಬ್ರೇಕ್