SK Home Ad
Home ಸುದ್ದಿ ಯಾರಿಗ್ರೀ ಬೇಕು ನಿಮ್ಮ ₹2000,₹15000 ಬೇಕು ; ಸರ್ಕಾರದ ಆಫರ್‌ ನಿರಾಕರಿಸಿದ ಆಶಾ ಕಾರ್ಯರ್ತೆಯರು

ಯಾರಿಗ್ರೀ ಬೇಕು ನಿಮ್ಮ ₹2000,₹15000 ಬೇಕು ; ಸರ್ಕಾರದ ಆಫರ್‌ ನಿರಾಕರಿಸಿದ ಆಶಾ ಕಾರ್ಯರ್ತೆಯರು

0
11

ಬೆಂಗಳೂರು: ಆರೋಗ್ಯ ಸಚಿವ  ಯು.ಟಿ.ಖಾದರ್‌ ನೇತೃತ್ವದಲ್ಲಿ ನಡೆದ ಆಶಾ ನಿಯೋಗ ಸಭೆಯಲ್ಲಿ  ಕಾರ್ಯರ್ತೆಯರ ವೇತನ ಸರ್ಕಾರ 2000 ರೂ. ನೀಡುವುದಾಗಿ ಘೋಷಣೆ ಮಾಡಿದೆ, ಆದರೆ ಆಶಾ ಕಾರ್ಯರ್ತೆಯರು 2000 ರೂ.  ಅಲ್ಲ ನಮಗೆ ಸಂಪೂರ್ಣ 15000 ರೂ ಬೇಡಿಕೆ ಪೂರ್ಣ ಗೊಳಿಸಬೇಕು ಎಂದು ಪಟ್ಟು ಹಿಡಿದು ಮತ್ತೆ ಪ್ರತಭಟನೆ ಮುಂದುವರೆಸಿದ್ದಾರೆ.

ಸರ್ಕಾರ 2 ಸಾವಿರ ರೂಪಾಯಿ ಹೆಚ್ಚಳ ಮಾಡುವುದಾಗಿ ಆಶಾ ಕಾರ್ಯರ್ತೆಯರಿಗೆ ಗುಡ್‌ ನ್ಯೂಸ್‌ ನೀಡಿತು. ಆದರೆ ಆಶಾ ಕಾರ್ಯರ್ತೆಯರು ಈ ಘೊಷಣೆಯಿಂದ ಸತೃಂಪ್ತಿಯಾಗಿಲ್ಲ ನಮಗೆ 15000 ಗೌರವಧನ ಹೆಚ್ಚಳ ಮಾಡಲೆಬೇಕು ಅಂತಾ ಪ್ರತಿಭಟನೆ ಮುಂದುವರೆಸಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯ ಚರ್ಚೆಯಾಗಲಿದೆ, ಸಿಎಂ 2000 ರೂ ಮಾತ್ರ ನೀಡುವುದಾಗಿ ತಿಳಿಸಿದರು. ಆಶಾಗಳು ಈ ಗೌರವಧನ  ಹೆಚ್ಚಳಕ್ಕೆ ಒಪ್ಪಗೊಂಡಿದ್ದರು, ಆದರೆ ಆಶಾಗಳು ಮತ್ತೆ ನಿರಾಕರಿಸಿ ಪ್ರತಿಭಟನೆ ಮುಂದುವರೆಸಿದ್ದುಕೂತುಹಲಕ್ಕೆ ಕಾರಣವಾಗಿದೆ.

3 ಗಂಟೆಗೆ ನಡೆಯುವ ಸಿಎಂ  ಸಭೆಯಲ್ಲಿ ಈ ಕುರಿತು ಗೊಂದಲ ಪರಿಹರಿಸಬಹುದು ಎಂಬ ನೀರಿಕ್ಷೆ ಇದೆ. ಸಿಎಂ ಕೈಗೊಳ್ಳುವು ನಿರ್ಧರದಿಂದ ಆಶಾ ಕಾರ್ಯರ್ತೆಯರ  12 ದಿನಕ್ಕೆ ಕಾಲಿಟ್ಟ ಪ್ರತಿಭಟನೆ ಇಲ್ಲಗೆ ನಿಲ್ಲಬಹುದು ಅಥವಾ ಮುಂದುವರೆಯಬಹುದು.