ನಾಸಾ-ಇಸ್ರೋ ಸಹಭಾಗಿತ್ವದ ‘ನಿಸಾರ್‌’ ಉಪಗ್ರಹ ಉಡಾವಣೆ ಯಶಸ್ವಿ

0
30

ಶ್ರೀಹರಿಕೋಟಾ: ‘ನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್’ ‘ನಿಸಾರ್’ ಉಪಗ್ರಹ ಇಸ್ರೋದ GSLV-F16 ಉಪಗ್ರಹದ ಬೆನ್ನೇರಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ನಿಸಾರ್‌ ಉಪಗ್ರಹ ಶ್ರೀಹರಿಕೋಟದಿಂದ ಉಡಾವಣೆಯಾಗುವ ಮೂಲಕ 102ನೇ ಉಪಗ್ರಹವಾಗಿದೆ.

ಈ ಕಾರ್ಯಾಚರಣೆಯು ಕಳೆದ ಹತ್ತು ವರ್ಷಗಳಿಂದ ಕಾರ್ಯರೂಪಕ್ಕೆ ಬಂದಿದೆ. ಇದು ಇಲ್ಲಿಯವರೆಗೆ ಭಾರತ ಮತ್ತು ಅಮೆರಿಕ ನಡುವಿನ ಅತಿದೊಡ್ಡ ವೈಜ್ಞಾನಿಕ ಸಹಯೋಗಗಳಲ್ಲಿ ಒಂದಾಗಿದೆ.

ಈ ಉಪಗ್ರಹವು 12-ಮೀಟರ್ ಉದ್ದದ ಮೆಶ್ ಆಂಟೆನಾವನ್ನು ಒಳಗೊಂಡಿದೆ, ಇದುವರೆಗೆ ಬಳಸಲಾದ ಅತಿದೊಡ್ಡದಾದ ಮತ್ತು ಭೂಮಿಯ ಮೇಲ್ಮೈಯಲ್ಲಿ ಸೆಂಟಿಮೀಟರ್-ಮಟ್ಟದ ಚಲನೆಗಳನ್ನು ಪತ್ತೆಹಚ್ಚುವ ಸಾಮರ್ಥ್ಯವಿರುವ ಅತ್ಯಾಧುನಿಕ ಡ್ಯುಯಲ್ ರಾಡಾರ್ ವ್ಯವಸ್ಥೆಯನ್ನು ಒಳಗೊಂಡಿದೆ.

ನಾಸಾ ಮತ್ತು ಇಸ್ರೋ ಸಹಯೋಗದ ಸಿಂಥೆಟಿಕ್ ಅಪರ್ಚರ್ ರಾಡಾರ್ (ನಿಸಾರ್) ಉಪಗ್ರಹ ಉಡಾವಣೆ ಭಾರತ-ಅಮೆರಿಕ ಸಹಭಾಗಿತ್ವದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಕಕ್ಷೆಯತ್ತ ರಾಕೆಟ್‌ನ ಪ್ರಯಾಣ ಬಹುತೇಕ 19 ನಿಮಿಷ ತೆಗೆದುಕೊಳ್ಳಲಿದೆ. ಆ ಬಳಿಕ, ನಿಸಾರ್ ಉಪಗ್ರಹವನ್ನು ಅದರ ಉದ್ದೇಶಿತ-747 ಸನ್ ಸಿಂಕ್ರೋನಸ್ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ.

ನೈಸರ್ಗಿಕ ಸಂಪನ್ಮೂಲಗಳ ನಿಗಾ ವಹಿಸಲು ಅತ್ಯಂತ ನಿರ್ಣಾಯಕವಾಗಿದೆ. ದಿನದ 24 ತಾಸು ಭೂಮಿಯ ಚಿತ್ರವನ್ನು ತೆಗೆಯಲು, ಭೂಕುಸಿತ ಪತ್ತೆ, ಹವಾಮಾನ ಬದಲಾವಣೆ, ವಿಪತ್ತು ನಿರ್ವಹಣೆಗೆ ಸಹಾಯ ಮಾಡಲು ನೆರವಾಗಲಿದೆ. ಭೂಮಿಯ ಎಲ್ಲ ಋತುಮಾನಗಳು, ಹಗಲು-ರಾತ್ರಿ ವೀಕ್ಷಣೆ ನಡೆಸುತ್ತದೆ.

ಭೂಮಿಯ ಮೇಲೆ ಆಗುವ ಸಣ್ಣ ಪುಟ್ಟ ಬದಲಾವಣೆಗಳ ಮಾಹಿತಿ ನೀಡುವ, ನೆಲದ ವಿರೂಪ, ಮಂಜುಗಡ್ಡೆಯ ಪದರದ ಚಲನೆ, ಹಡಗುಗಳ ಪತ್ತೆ. ಮಣ್ಣಿನ ತೇವಾಂಶದಲ್ಲಿನ ಬದಲಾವಣೆ, ಕಡಲಿನ ಮೇಲೆ ಕಣ್ಣಾವಲು, ಮೇಲೆ ನೀರಿನ ಸಂಗ್ರಹದ ಮೇಲೆ ನಿಗಾ. ನೈಸರ್ಗಿಕ ವಿಕೋಪದ ಸೇರಿದಂತೆ ಹಲವು ಮಾಹಿತಿಗಳನ್ನು ಸಂಗ್ರಹಿಸಲಿದೆ ಎಂದು ಇಸ್ರೋ ತಿಳಿಸಿದೆ.

ಈ ಉಪಗ್ರಹವು ಇಡೀ ಭೂಗೋಳವನ್ನು ಸ್ಕ್ಯಾನ್ ಮಾಡುವಂಥ ಶಕ್ತಿಯನ್ನು ಹೊಂದಿದೆ. ಎಲ್ಲಾ ಹವಾಮಾನದಲ್ಲೂ, ಹಗಲು-ರಾತ್ರಿ ಭೂಗೋಳವನ್ನು ಸುತ್ತಿ ತಾನು ಸಂಗ್ರಹಿಸಿರುವ ದತ್ತಾಂಶವನ್ನು ಪ್ರತಿ 12 ದಿನಗಳಿಗೊಮ್ಮೆ ಒದಗಿಸುತ್ತದೆ.

ಈ ಉಪಗ್ರಹದಲ್ಲಿ ಅಳವಡಿಸಲಾಗಿರುವ ಎಲ್-ಬ್ಯಾಂಡ್ ಅನ್ನು ನಾಸಾ ಒದಗಿಸಿದ್ದರೆ, ಎಸ್-ಬ್ಯಾಂಡ್ ಅನ್ನು ಇಸ್ರೋ ಒದಗಿಸಿದೆ. ಎಸ್-ಬ್ಯಾಂಡ್ ಅನ್ನು ಸಿಂಥೆಟಿಕ್ ಅಪರ್ಚರ್ ರೇಡಾರ್‌ನಲ್ಲಿ ಅಳವಡಿಸಲಾಗುತ್ತದೆ. ಇದರಿಂದ ಭೂಮಿಗೆ ಸಂಬಂಧಿಸಿದಂತೆ ವ್ಯಾಪಕ ದತ್ತಾಂಶ ಸಂಗ್ರಹ ಸಾಧ್ಯವಾಗಲಿದೆ.

ಈ ಉಪಗ್ರಹವು ಆಧುನಿಕ ರಾಡಾರ್ ಇಮೇಜಿಂಗ್ ಮೂಲಕ ಬಾಹ್ಯಾಕಾಶದಿಂದ ಭೂಮಿಯ ಮೇಲ್ಮೈಯನ್ನು ಬಹಳ ಸ್ಪಷ್ಟವಾಗಿ ನೋಡಬಹುದಾಗಿದ್ದು. NISAR ಭೂಮಿಯನ್ನು ವೀಕ್ಷಿಸುವ ವಿಶ್ವದ ಮೊದಲ ಡ್ಯುಯಲ್ – ಫ್ರೀಕ್ವೆನ್ಸಿ ರಾಡಾರ್ ಉಪಗ್ರಹವಾಗಿದೆ ಭೂಮಿಯ ಮೇಲಿನ ಚಲನೆಗಳನ್ನು ಗ್ರಹಿಸುತ್ತದೆ ಮತ್ತು ಅದನ್ನು 3D ರೂಪದಲ್ಲಿ ಪ್ರದರ್ಶಿಸುತ್ತದೆ.

ಕೃಷಿ, ಪ್ರವಾಹ ಪ್ರದೇಶಗಳು, ಕಾರ್ಡುಗಳು ಹಾಗೂ ವಾತಾವರಣದಲ್ಲಿ ಉಂಟಾಗುವ ಸೂಕ್ಷ್ಮ ಬದಲಾವಣೆಗಳನ್ನು ಸಹ ಗುರುತಿಸುವ ಸಾಮರ್ಥ್ಯ ಈ ಉಪಗ್ರಹಕ್ಕಿದ್ದು, ಸಮುದ್ರದಲಿ ಮಂಜುಗಡೆ ನಿರ್ಮಾಣ, ಹಡಗುಗಳ ಪ್ರಯಾಣ, ಮಣ್ಣಿನ ಮೇಲಿನ ತೇವಾಂಶದಲಾಗುವ ಬದಲಾವಣೆಗಳ ಮಾಹಿತಿಯನ್ನು ಬಾಹ್ಯಾಕಾಶದಿಂದ ಭೂಮಿಯ ಮೇಲಿನ ಜನರೊಂದಿಗೆ ಹಂಚಿಕೊಳ್ಳುತ್ತದೆ.

Previous articleತಮಿಳುನಾಡು ವಿಧಾನಸಭೆ ಚುನಾವಣೆ 2026: ಕೆ.ಅಣ್ಣಾಮಲೈ ಸ್ಪರ್ಧಿಸಲ್ಲ?
Next article1 ಲಕ್ಷಕ್ಕೆ ಏರಿಕೆಯಾಗಲಿದೆ ಚಿನ್ನದ ಬೆಲೆ!

LEAVE A REPLY

Please enter your comment!
Please enter your name here