ಬೆಂಗಳೂರು: ಕೆಸ್ಆರ್ಟಿಸಿ ಇದೀಗ ಹೊಸದಾಗಿ 40 ನಾನ್ ಎಸಿ ಸ್ಲೀಪರ್ ಬಸ್ಗಳನ್ನು ಖರೀದಿಸಿದೆ ಅವುಗಳಿಗೆ ಪಲ್ಲಕ್ಕಿ ಎಂದು ಹೆಸರು ಇಡಲಾಗಿದೆ. ‘ಸಂತೋಷವು ಪ್ರಯಾಣಿಸುತ್ತಿದೆ’ (Happiness is Travelling) ಎನ್ನುವ ಟ್ಯಾಗ್ ಲೈನ್ನೊಂದಿಗೆ ಸಾರಿಗೆ ನಿಗಮದ ʼಪಲ್ಲಕ್ಕಿʼ ರಸ್ತೆಗಿಳಿಯಲು ಸಜ್ಜಾಗಿದೆ. ಅಕ್ಟೋಬರ್ 7 ರಂದು ವಿಧಾನಸೌಧ ಪೂರ್ವ ದ್ವಾರದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಪಲ್ಲಕ್ಕಿಯ ಉದ್ಘಾಟನೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಲ್ಲಕ್ಕಿ ಹೆಸರಿನ 40 ನಾನ್ ಎಸಿ ಸ್ಲೀಪರ್ ಬಸ್ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದು, 100 ನೂತನ ಕರ್ನಾಟಕ ಸಾರಿಗೆ ಬಸ್ಸುಗಳ ಸಂಚಾರಕ್ಕೂ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.