KSET-2024: ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

0
11

ತಾಂತ್ರಿಕ ತೊಂದರೆಯಿಂದ ಅರ್ಜಿ ಸಲ್ಲಿಕೆಯನ್ನು ಮುಂದೂಡಲಾಗಿದ್ದು ದಿನಾಂಕ 29.07.2024 ರಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಬೆಂಗಳೂರು: Kset-2024ರ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ಜುಲೈ 29ರಿಂದ ಸಿಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅಗತ್ಯ ದಾಖಲೆಗಳನ್ನು ಸಿದ್ಧ ಮಾಡಿಟ್ಟುಕೊಂಡು ಅರ್ಜಿ ತುಂಬಲು ತಿಳಿಸಿದೆ. ಆದಾಯ ಪ್ರಮಾಣ ಪತ್ರಗಳ ಅವಧಿ ಮೀರಿದ್ದರೆ ಹೊಸದಾಗಿ ಮಾಡಿಸಿಕೊಂಡು ಅದರ RD ಸಂಖ್ಯೆಯನ್ನೇ ತುಂಬಿ ಎಂದು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರದ ನಿರ್ದೇಶನದಂತೆ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024 (ಕೆಸೆಟ್‌-2024) ಗೆ ಸಂಬಂಧಿಸಿದಂತೆ ದಿನಾಂಕ 13.07.2024 ರಂದು ವಿವರವಾದ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆಯನ್ನು ದಿನಾಂಕ 22.07.2024 ರಿಂದ ಪ್ರಾರಂಭಿಸಲಾಗುವುದೆಂದು ತಿಳಿಸಲಾಗಿರುತ್ತದೆ. ಆದರೆ ತಾಂತ್ರಿಕ ತೊಂದರೆಯಿಂದ ಅರ್ಜಿ ಸಲ್ಲಿಕೆಯನ್ನು ಮುಂದೂಡಲಾಗಿದ್ದು ದಿನಾಂಕ 29.07.2024 ರಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleನೇಪಾಳದಲ್ಲಿ ವಿಮಾನ ಪತನ
Next articleಶೃಂಗೇರಿ ಶಾರದಾ ಪೀಠದಿಂದ ವಸ್ತ್ರಸಂಹಿತೆ ಜಾರಿ