ಜನೋತ್ಸವ ಹೆಸರು ಬದಲಾವಣೆ

0
22

ಬೆಂಗಳೂರು: ಬಿಜೆಪಿ ಜನೋತ್ಸವ ಕಾರ್ಯಕ್ರಮದ ಹೆಸರು ಬದಲಾವಣೆ ಮಾಡಿ ಜನಸ್ಪಂದನ ಹೆಸರಲ್ಲಿ ಸೆಪ್ಟೆಂಬರ್ 10 ಶನಿವಾರ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿದೆ.

ಜನೋತ್ಸವ ಹೆಸರು ಬದಲಾವಣೆ ಮಾಡಲಾಗಿದ್ದು, ಜನಸ್ಪಂದನಾ ಕಾರ್ಯಕ್ರಮ ಸೆಪ್ಟೆಂಬರ್ 10 ರಂದು ನಡೆಯಲಿದೆ. ದೊಡ್ಡಬಳ್ಳಾಪುರದಲ್ಲಿ ಮಧ್ಯಾಹ್ನ 12 ಗಂಟೆಗೆ ಜನಸ್ಪಂದನ ಕಾರ್ಯಕ್ರಮ ನಡೆಯಲಿದ್ದು, ನಿನ್ನೆ ಸೆಪ್ಟೆಂಬರ್ 11 ನೇ ತಾರೀಕು ಕಾರ್ಯಕ್ರಮ ನಡೆಯಲಿದೆ ಅಂತ ಹೇಳಿದ ಸಚಿವ ಮುನಿರತ್ನ, 11ನೇ ತಾರೀಕು ಕೋರ್ ಕಮಿಟಿ ಮೀಟಿಂಗ್ ಇರುವುದರಿಂದ ಒಂದು ದಿನ ಮುಂಚೆನೇ ಕಾರ್ಯಕ್ರಮ ನಿಗದಿ ಮಾಡಲಾಗಿದೆ. 11ನೇ ತಾರೀಕು ಕೋರ್ ಕಮಿಟಿ ಸಭೆ ಕರೆದ ಬಿಜೆಪಿ, ಬೆಂಗಳೂರಿನಲ್ಲಿ ನಡೆಯಲಿದೆ. ಹಾಗಾಗಿ ಜನಸ್ಪಂದನಾ ಕಾರ್ಯಕ್ರಮ ಸೆಪ್ಟೆಂಬರ್ 10 ಕ್ಕೆ ನಿಗದಿ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.

Previous articleIT-BT ಕಂಪನಿ ಮುಖ್ಯಸ್ಥರ ಜೊತೆ ಸಚಿವ ಡಾ.ಅಶ್ವಥ್ ನಾರಾಯಣ್​ ಸಭೆ..!
Next articleಕಾಂಗ್ರೆಸ್ ‘ಭಾರತ್ ಜೋಡೋ ಯಾತ್ರೆ’ ಆರಂಭ..!