SK Home Ad
Home ಸುದ್ದಿ ರಾಜ್ಯ ನೂರು ವರ್ಷ ಬದುಕುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ; ಹೇಳಿದ್ದೇನು?

ನೂರು ವರ್ಷ ಬದುಕುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ; ಹೇಳಿದ್ದೇನು?

0
47

ಕೋಲಾರ: ನನಗೂ ನೂರು ವರ್ಷ ಬದುಕಬೇಕು ಅಂತ ಆಸೆ ಇದೆ. ಆದರೆ ಇರ್ತೀನೋ ಇಲ್ವೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದೇವರಾಜ ಅರಸು ವೈದ್ಯಕೀಯ ವಿವಿ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು ನಾನು ಕಳೆದ 32 ವರ್ಷಗಳಿಂದ ಡಯಾಬಿಟಿಕ್ ಆಗಿದ್ದೇನೆ. ನನಗೆ 1994 ರಲ್ಲಿ ಮಧುಮೇಹ ಶುರುವಾಯಿತು ಎಂದು ಹೇಳಿದರು.

ನಾನು ಒಮ್ಮೆ ಮದ್ಯ ಕುಡಿಯುವುದನ್ನು ಬಿಟ್ಟು ಬಿಟ್ಟಿದ್ದೆ. ಮತ್ತೆ ಆರ್.ಎಲ್. ಜಾಲಪ್ಪ ಅವರೇ ಶುರು ಮಾಡಿಸಿದರು. ಅವರು ಯಾವಾಗಲೂ ನೋಡಯ್ಯ ಸತ್ತ ಮೇಲೆ ಸ್ವರ್ಗಕ್ಕೆ ಹೋಗಬೇಕೆಂದರೆ ಇವೆಲ್ಲಾ ಅಭ್ಯಾಸ ಇರಲೇಬೇಕು ಎಂದು ತಮಾಷೆಯಾಗಿ ಹೇಳುತ್ತಿದ್ದರು. ಅವರು ಸದಾ ನನ್ನ ಹಿತವನ್ನು ಬಯಸುತ್ತಿದ್ದರು. ನನಗೆ ಜಾಲಪ್ಪನವರ ಪರಿಚಯ ಆಗಿದ್ದೆ 1983ರಲ್ಲಿ ಎಂದು ಸಿದ್ದರಾಮಯ್ಯ ವಿವರಿಸಿದರು.

ಅವರಿಗೆ ನನ್ನನ್ನು ಮುಖ್ಯಮಂತ್ರಿ ಮಾಡಲೇಬೇಕು ಎಂಬ ಮಹದಾಸೆ ಇತ್ತು. 1996ರಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿ ಆದಾಗ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಸಲಹೆ ಕೊಟ್ಟಿದ್ದರು. ಮುಂದೆ ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಸೇರಿಸಿಕೊಳ್ಳಲು ಸೋನಿಯ ಗಾಂಧಿ ಅವರಿಗೆ ಅವರೇ ಪತ್ರ ಬರೆದಿದ್ದರು. ಉಪ ಮುಖ್ಯಮಂತ್ರಿ ಆಗಲು ಸಹ ಜಾಲಪ್ಪನವರೇ ಕಾರಣ ಎಂದು ಸ್ಮರಿಸಿದರು.

ನಾನು ಡಾಕ್ಟರೇಟ್ ಪಡೆಯಲು ಅರ್ಹನೋ ಇಲ್ಲವೋ ಗೊತ್ತಿಲ್ಲ. ಅತ್ಯಂತ ಹೆಚ್ಚು ಅವಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದ ದೇವರಾಜು ಅವರನ್ನು ಸಹ ಹಿಂದಿಕ್ಕಿದ್ದೇನೆ. 17 ಬಜೆಟ್‌ಗಳನ್ನು ಮಂಡಿಸಿದ್ದೇನೆ. ಹಾಗಾಗಿಯೇ ನನಗೆ ಡಾಕ್ಟರೇಟ್ ಕೊಟ್ಟಿರಬೇಕು ಎಂದು ಸಿದ್ದರಾಮಯ್ಯ ಹೇಳಿದರು.