SK Home Ad
Home ಸುದ್ದಿ ರಾಜ್ಯ ರಾತ್ರೋರಾತ್ರಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಜೋಶಿ ಅವರೊಂದಿಗೆ ರೈತ ಮುಖಂಡರ ಸಭೆ

ರಾತ್ರೋರಾತ್ರಿ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಜೋಶಿ ಅವರೊಂದಿಗೆ ರೈತ ಮುಖಂಡರ ಸಭೆ

0
22

ಧಾರವಾಡ: ಸಮೀಪದ ತೇಗೂರ ಬಳಿ ಹೆದ್ದಾರಿಯಲ್ಲಿ ಸಮಾವೇಶಗೊಂಡ ರೈತರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಥವಾ ಅವರ ಪ್ರತಿನಿಧಿಗಳು ಆಗಮಿಸಿ ತಮ್ಮ ಬೇಡಿಕೆಗಳ ಈಡೇರಿಕೆ ಬಗ್ಗೆ ಖಚಿತ ಮತ್ತು ಸ್ಪಷ್ಟ ಘೋಷಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದ ರೈತ ಮುಖಂಡರು, ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ನೇತ್ವದ ಅಧಿಕಾರಿಗಳ ನಿಯೋಗದ ಮನವಿಗೆ ಒಪ್ಪಿ ರವಿವಾರ ತಡ ರಾತ್ರಿ ( ೧೧.೩೦ ಹೊತ್ತಿಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಮಾತುಕತೆ ನಡೆಸಲು ಒಪ್ಪಿದ್ದಾರೆ.

ರೈತರ ಮುಖಂಡರಾದ ಚೂನಪ್ಪ ಪೂಜಾರಿ, ಶಶಿಕಾಂತ ಗುರೂಜಿ ಹಾಗೂ ಇತರ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಅಧಿಕಾರಿಗಳು ರಾತ್ರಿಯೇ ಹುಬ್ಬಳ್ಳಿಯ ಅಜ್ಞಾತ ಸ್ಥಳದಲ್ಲಿ ಕೇಂದ್ರ ಸಚಿವರು ಮತ್ತು ರೈತ ಮುಖಂಡರ ಸಭೆಗೆ ನಿಗದಿಪಡಿಸಿದರು. ಆದರೆ, ಸಭೆ ಎಲ್ಲಿ ನಡೆಯಲಿದೆ ಎಂಬುದನ್ನು ಅಧಿಕಾರಿಗಳಾಗಲಿ, ರೈತ ಮುಖಂಡರಾಗಲಿ ಘೋಷಣೆ ಮಾಡಲಿಲ್ಲ.

ನಮಗೆ ಮಾತುಕತೆಗೆ ಕರೆದಿದ್ದಾರೆ. ೧೦ ಜನರ ರೈತ ಮುಖಂಡರು ಹೋಗಿ ಮಾತನಾಡುತ್ತೇವೆ. ಎಲ್ಲಿ ಸ್ಥಳ ನಿಗದಿಯಾಗಿದೆ ಎಂಬುದು ನಮಗೂ ಗೊತ್ತಿಲ್ಲ ಎಂದು ರೈತ ಮುಖಂಡರು ಹೇಳಿದರು.

ರೈತ ಮುಖಂಡರ ಷರತ್ತುಗಳೇನು?: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ತಾವೇ ಬಂದು ಮಾತುಕತೆ ನಡೆಸಲು ಒಪ್ಪಿದ ರೈತರ ಮುಖಂಡರು ಕೆಲ ಷರತ್ತುಗಳನ್ನು ಅಧಿಕಾರಿಗಳ ನಿಯೋಗದ ಮುಂದಿಟ್ಟರು.

ಸಚಿವರು ಎಂಎಸ್‌ಪಿ ದರ ನಿಗದಿ ಮಾಡುವ ದಿನಾಂಕ ಘೋಷಣೆ ಮಾಡಬೇಕು, ಅಲ್ಲಿಯ ವರೆಗೆ ಸಕ್ಕರೆ ಮಾರಾಟ ಸ್ಥಗಿತಗೊಳಿಸಬೇಕು ಮತ್ತು ಬೇಡಿಕೆ ಈಡೇರುವ ವರೆಗೆ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಬಾರದು. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಹೋರಾಟ ಮುಂದುವರೆಸುತ್ತೇವೆ ಎಂದು ಘೋಷಣೆ ಮಾಡಿದರು.
ಇದಕ್ಕೆ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಷನ್, ಕಾರ್ಖಾನೆ ಬಂದ್ ಇಡುವ ಜವಾಬ್ದಾರಿ ನನ್ನದು. ಇನ್ನುಳಿದ ಬೇಡಿಕೆಗಳ ಬಗೆಗೆ ಕೇಂದ್ರ ಸಚಿವರು ಮಾತನಾಡುತ್ತಾರೆ ಎಂದು ಕೈಮುಗಿದು ಮಾತುಕತೆ ನಡೆಸಲು ಒಪ್ಪಿಗೆ ಸೂಚಿಸಿದರು . ಬಳಿಕ ರೈತ ಮುಖಂಡರು ಸಭೆಗೆ ಒಪ್ಪಿದರು. ಅಲ್ಲದೇ, ಸಚಿವರು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದರೆ ಅ.೨೨ ರ ನಂತರ ಹೋರಾಟ ಮುಂದುವರಿಯುತ್ತದೆ ಎಂದೂ ಹೇಳಿದರು.

ರೈತರ ಮನವೊಲಿಕೆ ನಿಯೋಗದಲ್ಲಿ ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಎಸ್ಪಿ ಗುಂಜನ್ ಆರ್ಯ, ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಇದ್ದರು.