ಡಾ. ನೇತ್ರಾವತಿ ಗಬ್ಬೂರ : ಸಹಾಯಕ ಪ್ರಾಧ್ಯಾಪಕರು
ಆಡಿ ಬಾ ನನ್ನ ಕಂದ ಅಂಗಾಲ ತೊಳೆದೆನ ತೆಂಗಿನಕಾಯಿ ತಿಳಿ ನೀರ ತಕ್ಕೊಂಡ ನಿನ್ನ ಬಂಗಾರ ಮೋರಿ ತೊಳ್ದೇನೆ ಎಂಬ ಈ ಜನಪದ ಸಾಹಿತ್ಯದಲ್ಲಿನ ಈ ತ್ರಿಪದಿಯು ಮಕ್ಕಳ ಬಂಗಾರದ ಬದುಕಿಗೆ ಕ್ರೀಡೆ ಎಷ್ಟು ಮಹತ್ವದ್ದು , ಎಂಬುದನ್ನು ತಿಳಿಸುವುದಲ್ಲದೆ ಮಕ್ಕಳಿಗೆ ಹೂರಗಿನ ಪ್ರಪಂಚವನ್ನು ಪರಿಚಯಿಸುವ ತಾಯಿಯ ಲೌಕಿಕ ಚಿಂತನೆ ಅರ್ಥಗಭಿರ್ತವಾದದ್ದು .
ಇಂದಿನ ಸ್ಪರ್ಧಾತ್ಮಕ ಮತ್ತು ಯಾಂತ್ರಿಕರಣಕ್ಕೆ ಆತುಕೂಂಡ ಪ್ರಪಂಚದಲ್ಲಿ ಮಕ್ಕಳು ಆಟದಿಂದ ವಂಚಿತರಾಗಿ ದೈಹಿಕ ಚಟುವಟಿಕೆ ಇಲ್ಲದ ಮೊಬೈಲ್ ಗೀಳಿಗೆ ಒಳಗಾಗಿ ಒಂದಲ್ಲಾ ಒಂದು ಆರೋಗ್ಯ ಸಮಸ್ಯಗಳಾದ ದೃಷ್ಟಿದೋಷ, ಸ್ಥೂಲಕಾಯ,ಆಲಸಿತನ, ನಿದ್ರಾ ಹೀನತೆ, ಸದಾ ಮನರಂಜನೆಯ ಮನಸ್ಥಿತಿಯಂತಹ ಹತ್ತು ಹಲವಾರು ಪರಿಣಾಮಗಳ ಪ್ರಭಾವದಿಂದ ಶ್ರಮರಹಿತ ಯಶಸ್ಸು ಬೇಕೆಂಬ ಬದುಕಿಗೆ ಅಣಿಯಾಗುತ್ತಿರುವ ಇವತ್ತಿನ ಯುವಜನತೆ ಸ್ಥಿತಿ ಚಿಂತಾಜನಕವಾಗಿದೆ.
ಇವತ್ತಿನ ತಂದೆ ತಾಯಿಯರು ಸಹ ಭವಿಷ್ಯದ ಒತ್ತಡದಲ್ಲಿ ವಾಸ್ತವನ್ನು ಮರೆಯುತ್ತಿರುವುದು ಮತ್ತು ಶಿಕ್ಷಣ ವೆಂದರೆ ಕೇವಲ ಶಾಲೆಯಲ್ಲಿ ನೀಡುವ ಓದಿನ ಏಕಮುಖ ಚಿಂತನೆಯೆಂಬ ಭ್ರಮೆಯಿಂದ ಹೂರಬರುವುದು ಆದ್ಯಕರ್ತವ್ಯವಾಗಿದೆ. ಮಕ್ಕಳ ಬೆಳವಣಿಗೆ ಮಾನಸಿಕ ವಾಗಿ ಮತ್ತು ಭೌತಿಕವಾಗಿ ಬೆಳವಣಿಗೆ ಆದಾಗ ಮಾತ್ರ ಶೈಕ್ಷಣಿಕವಾಗಿ ಬೆಳೆಯಲು ಮತ್ತು ಸರ್ವಾಂಗೀಣ ಪ್ರಗತಿ ಹೊಂದಲು ಸಾಧ್ಯ ಎಂಬುದನ್ನು ಅರಿಯುವುದು ಇವತ್ತಿನ ದಿನಕ್ಕೆ ಪ್ರಸ್ತುತವು ಅನುಸರಣಿಯವು ಆಗಿದೆ.
“ಆರೋಗ್ಯವೇ ಮಹಾಭಾಗ್ಯ, ಆಟವೇ ಅದರ ಮೂಲ. ಆಟ ದೇಹವನ್ನು ಗಟ್ಟಿಗೊಳಿಸುತ್ತದೆ, ಮನಸ್ಸನ್ನು ಹರ್ಷಗೊಳಿಸುತ್ತದೆ. ಪಾಠದ ಜೊತೆ ಆಟ ಮಕ್ಕಳ ಧನಾತ್ಮಕ ಚಿಂತನೆಯನ್ನು ವೃದ್ಧಿಸುತ್ತದೆ .ಹೀಗೆ ಆಟವು ಮಾನವನ ಜೀವನದಲ್ಲಿ ಅತ್ಯಂತ ಮುಖ್ಯವಾದ ಅಂಶವಾಗಿದೆ.
ಇದು ಕೇವಲ ಮನರಂಜನೆಗಾಗಿ ಮಾತ್ರವಲ್ಲ, ದೇಹದ ಮತ್ತು ಮನಸ್ಸಿನ ಸಮಗ್ರ ಬೆಳವಣಿಗೆಗಾಗಿ ಅಗತ್ಯವಾಗಿದೆ. ಅಂತೆಯೇ ಜನಪದ ಗರತಿ ಮಗುವನ್ನು ಆಡಿ ಬಾ ನನ್ನ ಕಂದ ಎಂದು ಹೂರಗಿನ ಪ್ರಂಪಚಕ್ಕೆ ಅಣಿಯಾಗಿಸುವುದನ್ನು ಇಂದಿನ ಪಾಲಕರು ಪಾಲಿಸುವ ದೃಢ ಸಂಕಲ್ಪವನ್ನು ಮಾಡಲು ಈ ಕೆಳಗಿನ ಕ್ರೀಡೆಯ ಪ್ರಯೋಜನಗಳು ಸಾಕಷ್ಟಿದೆ ಅವುಗಳಲ್ಲಿ ಕೆಲವು ಹೀಗಿವೆ.
ದೈಹಿಕ ಆರೋಗ್ಯ: ಆಟಗಳಿಂದ ದೇಹ ಸದೃಢವಾಗುತ್ತದೆ. ದೇಹಕ್ಕೆ ವ್ಯಾಯಾಮ ದೊರೆತು, ಸ್ನಾಯುಗಳು ಬಲವಾಗುತ್ತವೆ ಮತ್ತು ಮಗು ಮಣ್ಣಲ್ಲಿ ಬಿದ್ದು ಏಳುವುದರೂಂದಿಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತಾಯಿಯಿಂದ ಪಡೆದ ಜೀವ ಸಂಕುಲ ಕೂನೆಗೆ ಸೆರುವುದು ಮಣ್ಣಿಗೆ . ಈ ಮಣ್ಣಿನ
ಆದ್ದರಿಂದ ಮಕ್ಕಳಿಗೆ ದೈಹಿಕ ಆರೋಗ್ಯಕ್ಕೆ ಆಟಗಳು ದಿವ್ಯಔಷಧಿಯಾಗಿವೆ.
ಮಾನಸಿಕ ಆರೋಗ್ಯ: ಇವತ್ತಿನ ದಿನ ಮಾನದಲ್ಲಿ ಮಕ್ಕಳಿಂದ ವಯೋವೃದ್ದರವರೆಗೂ ಒತ್ತಡದಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಇಂತಹ ಅಸಂಖ್ಯ ರೋಗಗಳಿಗೆ ಆಟವು ರಾಮಬಾಣವಾಗಿದೆ. ಆಟವು ಮನಸ್ಸಿಗೆ ಹರ್ಷವನ್ನು ನೀಡುವುದರೊಂದಿಗೆ ಮಾನಸಿಕ ಒತ್ತಡ ,ಕಳವಳ ,ಆಲಸಿತನ ಕಡಿಮೆಯಾಗಿ ಮನಸ್ಸು ಚುರುಕಾಗುತ್ತದೆ.
ಶಿಸ್ತಿನ ಬೆಳವಣಿಗೆ : ಆಟಗಳಲ್ಲಿ ನಿಯಮಗಳನ್ನು ಪಾಲಿಸುವುದರಿಂದ ಶಿಸ್ತು, ಸಮಯಪಾಲನೆ ಮತ್ತು ಜವಾಬ್ದಾರಿ ಎಂಬ ಗುಣಗಳು ಬೆಳೆಸಲ್ಪಡುತ್ತವೆ.ಒಳ್ಳೆಯ ನಾಯಕತ್ವದ ಗುಣಗಳನ್ನು ಬದುಕಿನಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೋಳ್ಳುತ್ತಾರೆ.
ತಂಡಭಾವನೆ: ಸಮೂಹ ಆಟಗಳು ಒಗ್ಗಟ್ಟು ಮತ್ತು ಸಹಕಾರದ ಮನೋಭಾವವನ್ನು ಬೆಳೆಸುತ್ತವೆ. ನಾಯಕತ್ವ ಗುಣವೂ ಅಭಿವೃದ್ಧಿಯಾಗಿ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿತುಕೊಳ್ಳುತ್ತಾರೆ.
ಆತ್ಮವಿಶ್ವಾಸ: ಸೋಲು ಪಾಠ ಕಲಿಸುತ್ತದೆ, ಗೆಲುವು ಆತ್ಮವಿಶ್ವಾಸ ನೀಡುತ್ತದೆ.” ಆದ್ದರಿಂದ ಆಟದಲ್ಲಿನ ಸೋಲು- ಗೆಲವುಗಳನ್ನು ಅನುಭವಿಸುವುದರಿಂದ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚುತ್ತದೆ. ಇದರಿಂದ ಭವಿಷ್ಯತ್ತಿನ ಸಮಸ್ಯೆಗಳನ್ನು ಬಗೆಹರಿಸುವ ಚಲಗಾರಿಕೆ ಬೆಳೆಯುತ್ತದೆ.
ಸಾಮಾಜಿಕ ಕೌಶಲ್ಯ : ಕೋಣೆಯ ಕೂಸು ಕೋಳಿತು ಓಣಿಯ ಕೂಸು ಬೇಳೆಯುತ್ತದೆ ಎಂಬ ಗಾದೆಯಂತೆ ಮಗು ಸಂವಹನ ಕೌಶಲ್ಯ ಹಾಗೂ ಸಹಾನುಭೂತಿ ಗುಣಗಳನ್ನು ಅಭಿವೃದ್ಧಿಪಡಿಸಿಕೂಳ್ಳುತ್ತದೆ. ಹೂರಗಿನ ಪ್ರಪಂಚಕ್ಕೆ ತೆರೆದುಕೊಳ್ಳುವ ಮಕ್ಕಳಲ್ಲಿ ಆಟವು ಹೊಸ ಸ್ನೇಹಿತರನ್ನು , ಸಮಾಜವನ್ನು ಪರಿಚಯಿಸುತ್ತದೆ.
ಶಿಕ್ಷಣದಲ್ಲಿ ಸಹಾಯ: ಆಟ ಮಾಡುವ ವಿದ್ಯಾರ್ಥಿಗಳು ಹೆಚ್ಚು ಚುರುಕಾಗಿದ್ದು, ಓದಿನಲ್ಲಿ ಕೂಡ ಉತ್ತಮ ಸಾಧನೆ ಮಾಡುತ್ತಾರೆ. ಬುದ್ದಿ ಮತ್ತು ಭಾವನೆ ಕ್ರೀಡೆಗಳಿಂದ ಇಮ್ಮಡಿಯಾಗಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ.
ಆಟವು ಆರೋಗ್ಯಕರ ಮತ್ತು ಸಂತೋಷಕರ ಜೀವನಕ್ಕೆ ಅತ್ಯಗತ್ಯವಾಗಿದೆ. ಪ್ರತಿಯೊಬ್ಬರೂ ದಿನನಿತ್ಯದ ತಮ್ಮ ಜೀವನದಲ್ಲಿ ಆಟಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕು.
ಆಟವು ಜೀವನದ ಉಸಿರಿನಂತದ್ದು. ಅದು ಕೇವಲ ಸಮಯ ಕಳೆಯುವ ಸಾಧನವಲ್ಲ,
ಅದು ಪ್ರತಿಯೊಬ್ಬರಿಗೂ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ರೂಪಿಸುವ ಅಮೂಲ್ಯ ಶಕ್ತಿ. ಮಕ್ಕಳಿಂದ ಹಿಡಿದು ವಯೋವೃದ್ದರೆವರೆಗೆ ಪ್ರತಿಯೊಬ್ಬರ ಜೀವನದಲ್ಲಿ ಆಟ ,ಯೋಗ ,ದೈಹಿಕ ಚಟುವಟಿಕೆಗಳು ಹಸನಾದ ಬಣ್ಣಗಳನ್ನು ತುಂಬುತ್ತದೆ. ಆಟದೂಂದಿಗೆ ಪಾಠ ,ಪಾಠದೂಂದಿಗೆ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯೆಂಬುದನ್ನು ಅರಿತುಕೊಂಡು ಉತ್ತಮ ಆರೋಗ್ಯ ವಂತ ಸಮಾಜವನ್ನು ನಿರ್ಮಿಸೋಣ.























