Home Advertisement
Home ಸುದ್ದಿ ವಿದೇಶ “ಯುದ್ಧ ಮುಗಿದಿಲ್ಲ”: ಎಚ್ಚರಿಕೆ ನಡುವೆಯೇ ಕದನ ವಿರಾಮ ಘೋಷಣೆ

“ಯುದ್ಧ ಮುಗಿದಿಲ್ಲ”: ಎಚ್ಚರಿಕೆ ನಡುವೆಯೇ ಕದನ ವಿರಾಮ ಘೋಷಣೆ

0
63

ಟೆಹ್ರಾನ್/ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕಾ ನಡುವೆ ನಡೆಯುತ್ತಿದ್ದ ತೀವ್ರ ಉದ್ವಿಗ್ನತೆಯ ನಡುವೆಯೇ ಮಹತ್ವದ ಬೆಳವಣಿಗೆಯಾಗಿ ಎರಡು ವಾರಗಳ ಕದನ ವಿರಾಮ ಒಪ್ಪಂದಕ್ಕೆ ತಲುಪಲಾಗಿದೆ. ಈ ಹಿನ್ನೆಲೆ, ಇರಾನ್ ತನ್ನ ಎಲ್ಲಾ ಸೈನಿಕ ಪಡೆಗಳಿಗೆ ತಕ್ಷಣದಿಂದಲೇ ಗುಂಡಿನ ದಾಳಿಯನ್ನು ನಿಲ್ಲಿಸುವಂತೆ ಆದೇಶಿಸಿದೆ.

ರಾಜ್ಯ ನಿಯಂತ್ರಿತ ಮಾಧ್ಯಮ Islamic Republic of Iran Broadcasting (ಐಆರ್‌ಐಬಿ) ಪ್ರಕಟಿಸಿದ ಮಾಹಿತಿಯ ಪ್ರಕಾರ, ಈ ನಿರ್ಧಾರವು ಜಾಗತಿಕ ಉದ್ವಿಗ್ನತೆಯನ್ನು ತಗ್ಗಿಸುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಯುದ್ಧ ಮುಗಿದಿಲ್ಲ, ಆದರೆ ಸೈನ್ಯದ ಎಲ್ಲಾ ಘಟಕಗಳು ತಕ್ಷಣ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು” ಎಂದು ಸೂಚಿಸಿದ್ದಾರೆ.

ಅವರು ಮುಂದುವರೆದು, ಇದು ಶಾಶ್ವತ ಶಾಂತಿ ಒಪ್ಪಂದವಲ್ಲ, ತಾತ್ಕಾಲಿಕ ತಂತ್ರಜ್ಞಾನದ ಭಾಗ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. “ಭವಿಷ್ಯದಲ್ಲಿ ಯಾವುದೇ ಸವಾಲು ಎದುರಾದರೂ ಪ್ರತಿಕ್ರಿಯಿಸಲು ನಾವು ಸಿದ್ಧರಾಗಿದ್ದೇವೆ” ಎಂದೂ ಹೇಳಿದ್ದಾರೆ.

ಇದೇ ವೇಳೆ, Supreme National Security Council of Iran ಕೂಡ ಎಚ್ಚರಿಕೆ ನೀಡಿದ್ದು, “ಕದನ ವಿರಾಮ ಎಂದರೆ ಯುದ್ಧ ಮುಗಿದಂತಲ್ಲ. ಶತ್ರುಗಳಿಂದ ಯಾವುದೇ ಪ್ರಚೋದನೆ ನಡೆದರೆ ಪೂರ್ಣ ಶಕ್ತಿಯಿಂದ ಪ್ರತಿಕ್ರಿಯೆ ನೀಡಲಾಗುತ್ತದೆ” ಎಂದು ಹೇಳಿದೆ.

ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆ ಮುಂದುವರಿಯುವ ಸಾಧ್ಯತೆ ಇದ್ದು. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಗ್ಗಿದರೂ ಎಚ್ಚರಿಕಾ ಸ್ಥಿತಿ ಮುಂದುವರಿಕೆ ಇದೆ. ಜಾಗತಿಕ ಮಾರುಕಟ್ಟೆಗಳಲ್ಲಿ ತಾತ್ಕಾಲಿಕ ಸ್ಥಿರತೆ ಕಂಡುಬರುತ್ತಿದೆ.