Home Advertisement
Home ಸುದ್ದಿ ದೇಶ ಪ್ರೇಯಸಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿಟ್ಟ ಪ್ರಿಯಕರ

ಪ್ರೇಯಸಿಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿಟ್ಟ ಪ್ರಿಯಕರ

0
119

ವಿಶಾಖಪಟ್ಟಣಂ: ಪ್ರೇಯಸಿಯನ್ನು ಮನೆಗೆ ಕರೆಸಿದ ಪ್ರಿಯಕರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​ನಲ್ಲಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

ನೌಕಾಪಡೆಯ ಸಿಬ್ಬಂದಿ 35 ವರ್ಷದ ರವೀಂದ್ರ ಎಂಬಾತನೇ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಪತ್ನಿ ತವರು ಮನೆಗೆಂದು ಹೋಗಿದ್ದ ಸಂದರ್ಭದಲ್ಲಿ ಪ್ರೇಯಸಿ ಮೌನಿಕಾಳನ್ನು ಮನೆಗೆ ಕರೆಯಿಸಿಕೊಂಡಿದ್ದ ರವೀಂದ್ರ ಕೆಲ ಹೊತ್ತು ಸುಂದರ ಕ್ಷಣಗಳನ್ನು ಕಳೆದಿದ್ದಾರೆ.

ಸಂಜೆ ಹೊತ್ತಿಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದೇ ವೇಳೆ ಜಗಳ ವಿಕೋಪಕ್ಕೆ ತಿರುಗಿ ಮೌನಿಕಾಳನ್ನು ಇರಿದು ಕೊಲೆ ಮಾಡಿದ್ದಾನೆ. ಬಳಿ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ, ಕೆಲ ತುಂಡುಗಳನ್ನು ಚೀಲದಲ್ಲಿ ತುಂಬಿ ವಿಲೇವಾರಿ ಮಾಡಿದ್ದು, ಇನ್ನುಳಿದವನ್ನು ಫ್ರಿಡ್ಜ್​ನಲ್ಲಿಟ್ಟಿದ್ದಾನೆ.

ಡೇಟಿಂಗ್ ಆ್ಯಪ್‌ನಿಂದ ಪರಿಚಯ: 29ವರ್ಷದ ಮೌನಿಕಾ ರವೀಂದ್ರನಿಗೆ ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾಗಿದ್ದಾಳೆ. ಹೀಗೆ ಪರಿಚಯವಾಗಿ ಇಬ್ಬರೂ ನಡುವೆ ಸಲುಗೆ ಬೆಳೆದು, ಒಟ್ಟಿಗೆ ಸುತ್ತಾಡುತ್ತಿದ್ದರು. ಅಲ್ಲದೇ ರವೀಂದ್ರ ಮೌನಿಲಾಳಗೆ 3.5 ಲಕ್ಷ ರೂ.ಗಳನ್ನು ನೀಡಿದ್ದನು ಎಂದು ಹೇಳಿದ್ದಾನೆ.

ರವೀಂದ್ರ ಪೊಲೀಸ್‌ ಠಾಣೆಗೆ ಹೋಗಿ ಅಪರಾಧ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಫ್ರಿಡ್ಜ್​ನಲ್ಲಿ ಮತ್ತು ಮನೆಯೊಳಗೆ ದೇಹದ ತುಂಡುಗಳು ದೊರೆತಿವೆ, ಆದರೆ ಮೌನಿಕಾಳ ತಲೆ ಕಾಣೆಯಾಗಿದ್ದು. ಅದನ್ನು ಬೇರೆ ಸ್ಥಳದಲ್ಲಿ ವಿಲೇವಾರಿ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.