Home Advertisement
Home ಸುದ್ದಿ ದೇಶ ಮತಾಂತರವಾದರೆ SC ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ಸ್ಪಷ್ಟನೆ

ಮತಾಂತರವಾದರೆ SC ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ಸ್ಪಷ್ಟನೆ

0
256

ಮತಾಂತರವಾದರೆ SC ಹಕ್ಕುಗಳು ರದ್ದು: ಉನ್ನತ ನ್ಯಾಯಾಲಯ ತೀರ್ಪು

ನವದೆಹಲಿ: ಧರ್ಮಾಂತರಗೊಂಡ ವ್ಯಕ್ತಿಗಳ ಪರಿಶಿಷ್ಟ ಜಾತಿ (SC) ಸ್ಥಾನಮಾನ ಕುರಿತಾಗಿ ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ.

ನ್ಯಾಯಮೂರ್ತಿಗಳಾದ ಪಿ ಕೆ ಮಿಶ್ರಾ ಮತ್ತು N V ಅಂಜಾರಿಯಾ ಅವರ ಪೀಠ ನೀಡಿದ ತೀರ್ಪಿನಲ್ಲಿ, ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಕ್ರಿಶ್ಚಿಯನ್ ಧರ್ಮ ಸೇರಿದಂತೆ ಯಾವುದೇ ಇತರ ಧರ್ಮಕ್ಕೆ ಮತಾಂತರಗೊಂಡಾಗ ಅವರು ಈ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಎಂದು ಮಹತ್ವದ ತೀರ್ಪು ನೀಡಿದೆ.

ಏನು ಹೇಳಿದೆ ಸುಪ್ರೀಂ ಕೋರ್ಟ್? : ನ್ಯಾಯಾಲಯದ ಅಭಿಪ್ರಾಯದ ಪ್ರಕಾರ, ಪರಿಶಿಷ್ಟ ಜಾತಿಯ ಸ್ಥಾನಮಾನವು ಭಾರತದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಿರ್ದಿಷ್ಟ ಧರ್ಮಗಳೊಂದಿಗೆ ಸಂಬಂಧ ಹೊಂದಿದ್ದು, ಕ್ರೈಸ್ತ ಅಥವಾ ಇತರ ಧರ್ಮಗಳಿಗೆ ಮತಾಂತರಗೊಂಡ ನಂತರ ಆ ವ್ಯಕ್ತಿಗೆ SC ಸ್ಥಾನಮಾನ ಮುಂದುವರಿಯುವುದಿಲ್ಲ. ಇದರೊಂದಿಗೆ, ಇಂತಹವರು SC ಮೀಸಲಾತಿ ಸೌಲಭ್ಯಗಳು ಅಥವಾ SC/ST Prevention of Atrocities Act ಅಡಿಯಲ್ಲಿ ದೊರೆಯುವ ರಕ್ಷಣೆಗೆ ಅರ್ಹರಾಗುವುದಿಲ್ಲ.

ಹೈಕೋರ್ಟ್ ತೀರ್ಪಿಗೆ ಮುದ್ರೆ : ಈ ಪ್ರಕರಣದಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ (Andhra Pradesh High Court) ನೀಡಿದ್ದ ಹಿಂದಿನ ತೀರ್ಪನ್ನು ಸುಪ್ರೀಂ ಕೋರ್ಟ್ ಸಮರ್ಥಿಸಿಕೊಂಡಿದ್ದು, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಅದನ್ನು ಅನುಸರಿಸುವ ವ್ಯಕ್ತಿಗಳು ತಮ್ಮ SC ಸ್ಥಾನಮಾನವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮರುಸ್ಥಾಪಿಸಿದೆ.